Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿರಂಜೀವಿ ಪುತ್ರಿ ಶ್ರೀಜಾ 3ನೇ ಮದುವೆಗೆ ಮುಂದಾದ್ರಾ? ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್
ನಟ ಚಿರಂಜೀವಿ ಪುತ್ರಿ ಶ್ರೀಜಾ ಮತ್ತೊಂದು ಮದುವೆ ಸಿದ್ದತೆ ನಡೆಸಿದ್ದಾರಾ? ಹೀಗೊಂದು ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ. ಬಹಳ ದಿನಗಳಿಂದ ಇಂತಾದೊಂದು ಗುಸುಗುಸು ಕೇಳಿಬರ್ತಿತ್ತು. ಇದು ಸತ್ಯ ಎನ್ನುವಂತೆ ಶ್ರೀಜಾ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ಶ್ರೀಜಾ ಈಗಾಗಲೇ 2 ಮದುವೆ ಆಗಿದ್ದಾರೆ. 3ನೇ ವ್ಯಕ್ತಿ ಈಗ ಆಕೆಯ ಜೀವನಕ್ಕೆ ಎಂಟ್ರಿ ಕೊಡುತ್ತಿರುವಂತೆ ಕಾಣುತ್ತಿದೆ. ಚಿರು ಮುದ್ದಿನ ಮಗಳು ಮೊದಲಿಗೆ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆ ಆಗಿ ಮೆಗಾ ಫ್ಯಾಮಿಲಿಯಿಂದ ದೂರ ಆಗಿದ್ದರು. ನಂತರ ಮೊದಲ ಪತಿಯಿಂದ ದೂರಾಗಿ ತಂದೆ ಮನೆ ಸೇರಿಕೊಂಡಿದ್ದರು. ನಂತರ ಕಲ್ಯಾಣ್ ದೇವ್ ಎಂಬುವವರ ಜೊತೆ 2ನೇ ಮದುವೆ ಆಗಿದ್ದರು. ಇವರಿಬ್ಬರು ಕೂಡ ದೂರಾಗಿದ್ದಾರೆ. ಒಟ್ಟಿಗೆ ಜೀವನ ನಡೆಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೆಲ್ಲದರ ನಡುವೆ ಹೊಸ ವರ್ಷದಲ್ಲಿ ಆಕೆ ಮಾಡಿರುವ ಪೋಸ್ಟ್ ಸಾಕಷ್ಟು ಚರ್ಚೆ ಹುಟ್ಟಾಕ್ಕಿದೆ. ಪರೋಕ್ಷವಾಗಿ 3ನೇ ಮದುವೆ ಬಗ್ಗೆ ಸುಳಿವು ಎನ್ನಲಾಗ್ತಿದೆ.
2ನೇ
ವಿವಾಹ
ವಿಚ್ಛೇದನಕ್ಕೆ
ಮುಂದಾದ
ಮೆಗಾಸ್ಟಾರ್
ಚಿರಂಜೀವಿ
ಪುತ್ರಿ
ಶ್ರೀಜಾ!?
ಇಬ್ಬರು ದೂರಾಗುವ ಬಗ್ಗೆ ಶ್ರೀಜಾ ಆಗಲಿ, ಕಲ್ಯಾಣ್ ದೇವ್ ಆಗಲಿ ಸ್ಪಷ್ಟನೆ ಕೊಟ್ಟಿಲ್ಲ. ಆದರೆ ಆಕೆ ತವರು ಮನೆಯಲ್ಲಿ ಇದ್ದಾರೆ. ಇನ್ನು ಮೆಗಾ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಕಲ್ಯಾಣ್ ದೇವ್ ಕಾಣಿಸಿಕೊಳ್ಳುತ್ತಿಲ್ಲ. ಇಬ್ಬರು ತಾವು ಒಟ್ಟಿಗೆ ಇರುವ ಫೋಟೊಗಳನ್ನು ಶೇರ್ ಮಾಡುತ್ತಿಲ್ಲ. ಶ್ರೀಜಾ ಪತಿಯ ಜೊತೆಗೆ ಇದ್ದ ಫೋಟೊಗಳನ್ನು ಅಕೌಂಟ್‌ನಿಂದ ಡಿಲೀಟ್ ಮಾಡಿದ್ದಾರೆ.

ಶ್ರೀಜಾ ಪೋಸ್ಟ್‌ನಲ್ಲಿ ಏನಿದೆ?
ಹೊಸ ವರ್ಷದ ಸಂಭ್ರಮದಲ್ಲಿ ಕಳೆದ ವರ್ಷದ ಮೊಮೆಂಟ್ಸ್ ಶೇರ್ ಮಾಡಿ, "ಡಿಯರ್ 2022, ನನ್ನ ಜೀವನದಲ್ಲಿ ಬಹಳ ಮುಖ್ಯವಾದ ವ್ಯಕ್ತಿಯನ್ನು ಭೇಟಿ ಮಾಡುವಂತೆ ಮಾಡಿದೆ. ನನ್ನ ಬಗ್ಗೆ ಬಹಳ ಅರಿತಿರುವ ವ್ಯಕ್ತಿ, ನನ್ನನ್ನು ಬಹಳ ಪ್ರೀತಿಸುವ, ಕೇರಿಂಗ್ ಮಾಡುವ, ಕಷ್ಟ ಸುಖದಲ್ಲಿ ನನ್ನ ಜೊತೆಗಿರುವ ವ್ಯಕ್ತಿ, ಸದಾ ನನಗೆ ಬೆಂಬಲವಾಗಿ ನಿಲ್ಲುವ ವ್ಯಕ್ತಿ, ನಾನು ಅವರನ್ನು ಭೇಟಿ ಆಗಿದ್ದು ಅದ್ಭುತ. ಹೊಸ ಪಯಣ ಶುರುವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ಶ್ರೀಜಾ ಪೋಸ್ಟ್ ವೈರಲ್
ಸದ್ಯ ಚಿರಂಜೀವಿ ಪುತ್ರಿ ಶ್ರೀಜಾ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ. ಕಳೆದೊಂದು ವರ್ಷದಿಂದ ಕೇಳಿಬರುತ್ತಿರುವ ಆಕೆಯ 3ನೇ ಮದುವೆ ಸುದ್ದಿ ನಿಜವಾಗುತ್ತಾ? ಎನ್ನುವ ಅನುಮಾನವೂ ಕೆಲವರನ್ನು ಕಾಡುತ್ತಿದೆ. ಇನ್ನು ಶ್ರೀಜಾ ಮುಂಬೈನಲ್ಲಿ ಬ್ಯುಸಿನೆಸ್ ಮಾಡಲು ಬಹಳ ದಿನಗಳಿಂದ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಇನ್ನು ಕೆಲ ದಿನಗಳ ಹಿಂದೆಯೇ ಶ್ರೀಜಾ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ತಮ್ಮ ಹೆಸರಿನ ಜೊತೆ ಇದ್ದ ಪತಿಯ ಹೆಸರನ್ನು ಕೈಬಿಟ್ಟಿದ್ದರು. ಶ್ರೀಜಾ ಕಲ್ಯಾಣ್ ಎನ್ನುವುದನ್ನು ಶ್ರೀಜಾ ಕೋನಿದೇಲ ಎಂದು ಬದಲಿಸಿದ್ದರು. ಇಬ್ಬರು ಬೇರೆ ಬೇರೆ ವಾಸಿಸುತ್ತಿರುವ ವಿಚಾರ ಕೂಡ ಡಿವೋರ್ಸ್ ಬಗ್ಗೆ ಚರ್ಚೆ ಹುಟ್ಟುವಂತೆ ಮಾಡಿದೆ.

ಶ್ರೀಜಾ ಮೊದಲ ಮದುವೆ
ಭಾರತೀಯ ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ. ಬರೀ ಅವರ ಸಿನಿಮಾ ವಿಚಾರಗಳು ಮಾತ್ರವಲ್ಲ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಂತಹ ಸುದ್ದಿಗಳು ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿರುತ್ತದೆ. ಶ್ರೀಜಾ ತಮ್ಮ 19ನೇ ವಯಸ್ಸಿನಲ್ಲೇ ಸಿರೀಶ್ ಭಾರಧ್ವಜ್ ಎಂಬುವವರನ್ನು ಪ್ರೀತಿಸಿದ್ದರು. ಪೋಷಕರ ವಿರೋಧದ ನಡುವೆಯೂ ಆತನ ಕೈ ಹಿಡಿದಿದ್ದರು. ಇದು ಮೆಗಾ ಫ್ಯಾಮಿಲಿಯಲ್ಲಿ ದೊಡ್ಡ ಹೈಡ್ರಾಮಾಗೆ ಕಾರಣವಾಗಿತ್ತು. ನಂತರ ಅತ್ತೆ ಮನೆಯಲ್ಲಿ ಕಾಟ ಕೊಡುತ್ತಿದ್ದಾರೆ ಎಂದು ಹೇಳಿ 2011ರಲ್ಲಿ ವಿಚ್ಛೇದನ ನೀಡಿ ಸಿರೀಶ್ ಅವರಿಂದ ದೂರಾಗಿದ್ದರು. ನಂತರ ಮತ್ತೆ ತವರು ಮನೆಗೆ ವಾಪಸ್ ಬಂದಿದ್ದರು.

2016ರಲ್ಲಿ 2ನೇ ಮದುವೆ
ಮೊದಲ ಪತಿಯಿಂದ ದೂರಾಗಿ 5 ವರ್ಷಗಳ ನಂತರ ಶ್ರೀಜಾ, ಉದ್ಯಮಿ ಕಲ್ಯಾಣ್ ದೇವ್ ಕೈ ಹಿಡಿದರು. ಬಹಳ ಅದ್ಧೂರಿಯಾಗಿ ಈ ಮದುವೆ ನಡೆದಿತ್ತು. ಕಲ್ಯಾಣ್ ಮುಂದೆ ಮೆಗಾ ಫ್ಯಾಮಿಲಿ ಬೆಂಬಲದೊಂದಿಗೆ ಹೀರೊ ಆಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಎಲ್ಲ ಸರಿ ಹೋಯಿತು ಎಂದುಕೊಳ್ಳುವ ಸಮಯದಲ್ಲಿ ಇದೀಗ ಮತ್ತೆ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಗುಸುಗುಸು ಶುರುವಾಗಿದೆ. ಸದ್ಯ ಶ್ರೀಜಾ ಮಾಡಿರುವ ಪೋಸ್ಟ್ ಅದಕ್ಕೆ ಮತ್ತಷ್ಟು ಇಂಬು ನೀಡುವಂತಿದೆ.