For Quick Alerts
  ALLOW NOTIFICATIONS  
  For Daily Alerts

  ಮೋಹನ್ ಲಾಲ್, ಸಂಜಯ್ ದತ್, ವಿಜಯ್ ಸೇತುಪತಿ, ಸುಕುಮಾರನ್: ಪ್ರೇಮ್ ಹೇಳಿದ 6 ಜನರ ಕಥೆ ಇದೇನಾ?

  |

  'ಏಕ್‌ ಲವ್ ಯಾ' ಸಿನಿಮಾ ಬಳಿಕ ಪ್ರೇಮ್ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಕೈ ಹಾಕಿರೋದು ಹೊಸ ವಿಷಯವೇನಲ್ಲ. ಸ್ಯಾಂಡಲ್‌ವುಡ್‌ನ ಮತ್ತೊಂದು ದೊಡ್ಡ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಸಿನಿಮಾದಲ್ಲಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ.

  ಸಿನಿಮಾ ಬಿಡುಗಡೆಯಾಗುವವರೆಗೂ ಪ್ರೇಮ್ ಸಿನಿಮಾದ ಕಥೆಗೆ ಬಗ್ಗೆ ಸುಳಿವು ನೀಡುವುದಿಲ್ಲ. ಟೀಸರ್, ಟ್ರೈಲರ್ ಬಿಟ್ಟರೂ ಅಷ್ಟೇ. ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದಾಗಲೂ ಸ್ಟೋರಿ ಬಗ್ಗೆ ಚಿಕ್ಕದೊಂದು ಕ್ಲ್ಯೂ ಕೂಡ ಕೊಟ್ಟಿಲ್ಲ. ಈಗ ಪ್ರತಿ ಚಿತ್ರರಂಗದ ಸೂಪರ್‌ಸ್ಟಾರ್‌ಗಳನ್ನೂ ಭೇಟಿ ಮಾಡುತ್ತಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

  ಕಳೆದೊಂದು ತಿಂಗಳಿಂದ ಪ್ರೇಮ್ ಹೊಸ ಸಿನಿಮಾದ ಟೀಸರ್ ಲಾಂಚ್‌ ಮೇಲೆ ಎಲ್ಲರ ಕಣ್ಣಿದೆ. ಇದೇ ವೇಳೆ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳನ್ನು ಭೇಟಿ ಮಾಡಿ ಮಾಡಿದ್ದಾರೆ. ಅಸಲಿಗೆ ಜೋಗಿ ಪ್ರೇಮ್ ಈ ಹಿಂದೆ ಹೇಳಿದ ಆರು ಜನರ ಕಥೆ ಇದೇನಾ? ಅನ್ನೋ ಅನುಮಾನ ಮೂಡಿದೆ. ಅಷ್ಟಕ್ಕೂ ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿರುವ ಆ ಸುದ್ದಿಯೇನು? ತಿಳಿಯಲು ಮುಂದೆ ಓದಿ.

  ಸೂಪರ್‌ಸ್ಟಾರ್‌ಗಳನ್ನು ಭೇಟಿಯ ಗುಟ್ಟೇನು?

  ಸೂಪರ್‌ಸ್ಟಾರ್‌ಗಳನ್ನು ಭೇಟಿಯ ಗುಟ್ಟೇನು?

  ಪ್ರೇಮ್ ತಮ್ಮ ಮುಂದಿನ ಸಿನಿಮಾದ ಟೈಟಲ್ ಟೀಸರ್‌ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಲವು ದಿನಗಳಿಂದ ಇದೊಂದು ಸಿನಿಮಾ ಬಗ್ಗೆನೇ ಕೆಲಸ ಮಾಡುತ್ತಿದ್ದಾರೆ. ಇನ್ನೇನು ಟೈಟಲ್ ಟೀಸರ್ ಆಗುವುದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಷ್ಟರೊಳಗೆ ಬೇರೆ ಬೇರೆ ಚಿತ್ರರಂಗದ ಒಬ್ಬೊಬ್ಬ ಸೂಪರ್‌ಸ್ಟಾರ್ ಅನ್ನು ಭೇಟಿ ಮಾಡುತ್ತಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಹಾಗೂ ಸುಕುಮಾರನ್, ತಮಿಳಿನ ಸೂಪರ್‌ಸ್ಟಾರ್ ವಿಜಯ್ ಸೇತುಪತಿ, ಬಾಲಿವುಡ್ ಸ್ಟಾರ್ ಸಂಜಯ್ ದತ್ ಭೇಟಿ ಮಾಡಿದ್ದಾರೆ. ಹೀಗೆ ದೊಡ್ಡ ದೊಡ್ಡ ಕಲಾವಿದರ ಭೇಟಿಯ ಗುಟ್ಟೇನು? ಅನ್ನೋ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಅದಕ್ಕೆ ಪ್ರೇಮ್ ಹೇಳಿದ ಆರು ಜನರ ಕಥೆಗೆ ಲಿಂಕ್ ಮಾಡಲಾಗುತ್ತಿದೆ.

  ಪ್ರೇಮ್ ಹೇಳಿದ 6 ಜನರ ಕಥೆಯೇನು?

  ಪ್ರೇಮ್ ಹೇಳಿದ 6 ಜನರ ಕಥೆಯೇನು?

  ಪ್ರೇಮ್ 'ದಿ ವಿಲನ್' ಸಿನಿಮಾ ಬಿಡುಗಡೆ ವೇಳೆ ಆರು ಸೂಪರ್‌ಸ್ಟಾರ್‌ಗಳ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದರು. " ಸುಮಾರು ಜನ ಎಲ್ಲಾ ಕನ್ನಡ ಅಭಿಮಾನಿಗಳು ಆರು ಜನ ಹೀರೊಗಳ ಸಿನಿಮಾ ಯಾವಾಗ ಮಾಡುತ್ತೀರಾ ಅಂತ ಕೇಳುತ್ತಲೇ ಇದ್ದಾರೆ. 'ಕಲಿ' ಅಂತ ಕೇಳಿದ್ದೀರಲ್ಲಾ. ಇದು ಮಹಾಭಾರತದಿಂದ ಪ್ರೇರಣೆ ಪಡೆದು ಮಾಡಿದ್ದು. ನಾನು 'ಕಲಿ' ಶುರು ಮಾಡಿದ್ದೇ ಎರಡು ಪಾತ್ರಗಳು. ಆ ಪಾತ್ರಗಳ ಸುತ್ತ ಆರು ಜನ ಇರುತ್ತಾರೆ. ಅಷ್ಟು ಪವರ್‌ಫುಲ್ ಪಾತ್ರಗಳು. ಪ್ರೇರಣೆ ಅನ್ನುವುದಕ್ಕಿಂತ ಮಹಾಭಾರತದ ಒಂದು ಅಧ್ಯಾಯ ಅದು." ಎಂದು 'ದಿ ವಿಲನ್' ಸಿನಿಮಾ ವೇಳೆ ಪ್ರೇಮ್ ಸುಳಿವು ನೀಡಿದ್ದರು.

  ಕಮಲ್-ರಜನಿ ಭೇಟಿ ಮಾಡಿದ್ದ ಪ್ರೇಮ್

  ಕಮಲ್-ರಜನಿ ಭೇಟಿ ಮಾಡಿದ್ದ ಪ್ರೇಮ್

  ಆರು ಸೂಪರ್‌ಸ್ಟಾರ್‌ಗಳ ಜೊತೆ ಸಿನಿಮಾ ಮಾಡೋಕೆ ದಕ್ಷಿಣ ಭಾರತದ ದಿಗ್ಗಜರನ್ನು ಭೇಟಿ ಮಾಡಿದ್ದಾಗಿಯೂ ಹೇಳಿದ್ದರು. "ಬೇರೆ ಭಾಷೆ ಎಲ್ಲಾ ಹೀರೊಗಳನ್ನೂ ಕೇಳಿದ್ದೆ. ಸುಮಾರು ಜನರನ್ನು ಕೇಳಿದೆ. ಕಮಲ್ ಸರ್ ಭೇಟಿಯಾದೆ. ರಜನಿ ಸರ್ ಭೇಟಿಯಾದೆ. ಸುಮಾರು ಜನರನ್ನು ಭೇಟಿಯಾದೆ. ಅವರಿಗೆ ಕಮಿಟ್‌ಮೆಂಟ್‌ಗಳಿದ್ದವು. ಇಲ್ಲಿ ನಮ್ಮ ಹೀರೊಗಳ ಡೇಟ್ ಮಿಸ್ ಆಗುತ್ತೆ ಅಂತ ನಮ್ಮ ನಿರ್ಮಾಪಕ ಸಿ.ಆರ್ ಮನೋಹರ್ ಹೇಳಿದ್ರು. ಅವರು ಈ ಪ್ರಾಜೆಕ್ಟ್ ಆಮೇಲೆ ಮಾಡೋಣ ಅಂದ್ರು." ಎಂದು ಆರು ಹೀರೊಗಳ ತಯಾರಿ ಬಗ್ಗೆ ತಿಳಿಸಿದ್ದರು.

  ಧ್ರುವ ಜೊತೆ ಮಾಡುತ್ತಿರೋ ಸಿನಿಮಾ ಅದೇನಾ?

  ಧ್ರುವ ಜೊತೆ ಮಾಡುತ್ತಿರೋ ಸಿನಿಮಾ ಅದೇನಾ?

  ಈಗ ಪ್ರೇಮ್ ಇದೂವರೆಗೂ ಬೇರೆ ಭಾಷೆಯಿಂದ 4 ಮಂದಿ ಸೂಪರ್‌ಸ್ಟಾರ್‌ಗಳನ್ನು ಭೇಟಿ ಮಾಡಿದ್ದಾರೆ. ಧ್ರುವ ಸರ್ಜಾ ಸೇರಿದರೆ 5 ಮಂದಿ ಆಗುತ್ತೆ. ಇನ್ನೊಬ್ಬರು ಸ್ಟಾರ್ ಯಾರು? ಅನ್ನೋದು ಎಲ್ಲರನ್ನೂ ಕಾಡುತ್ತಿದೆ. ಜೊತೆಗೆ ಟೈಟಲ್ ಟೀಸರ್‌ಗೆ ಇನ್ನೂ 4 ದಿನ ಬಾಕಿಯಿದೆ ಅಷ್ಟರೊಳಗೆ ಇನ್ನು ಎಷ್ಟು ಮಂದಿಯ ಜೊತೆ ಕಾಣಿಸಿಕೊಳ್ಳುತ್ತಾರೆ ಅನ್ನೋ ಕುತೂಹಲವೂ ಇದೆ. ಇನ್ನೊಂದು ಕಡೆ ಮೋಹನ್ ಲಾಲ್, ಸಂಜಯ್ ದತ್, ವಿಜಯ್ ಸೇತುಪತಿ ಕನ್ಫರ್ಮ್ ಅಂತೆ ಅಂತಾನೂ ಚರ್ಚೆಯಾಗುತ್ತಿದೆ. ಆದರೆ, ಜೋಗಿ ಪ್ರೇಮ್ ಮಾತ್ರ ಮಾಹಿತಿ ಹಂಚಿಕೊಳ್ಳುತ್ತಿಲ್ಲ. ಮತ್ತೊಂದು ಕಡೆ ಇಲ್ಲಾ ಇದು ಕೇವಲ ಟೈಟಲ್ ಟೀಸರ್‌ಗಾಗಿ ಮಾಡುತ್ತಿರುವ ಪ್ಲ್ಯಾನ್ ಅನ್ನೋದು ಇದೆ.

  English summary
  Mohan Lal, Sanjay Dutt, Vijay Sethupathi Will Act In Prem's Movie With Dhruva Sarja, Know More,
  Sunday, October 16, 2022, 20:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X