For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕರಾಗಲಿದ್ದಾರೆ ಧೋನಿ, ಕೈಜೋಡಿಸಿರುವುದು ದಕ್ಷಿಣದ ನಟಿ ಜೊತೆ!

  |

  ಕ್ರಿಕೆಟ್ ಜಗತ್ತಿನಲ್ಲಿ ಎಂಎಸ್ ಧೋನಿಯದ್ದು ಬಹುದೊಡ್ಡ ಹೆಸರು. ಸಿನಿಮಾ ರಂಗದಲ್ಲಿಯೂ ಅವರಿಗೆ ನಂಟಿದೆ. ಎಂಎಸ್ ಧೋನಿ ಜೀವನ ಆಧರಿಸಿದ ಸಿನಿಮಾ ಈಗಾಗಲೇ ನಿರ್ಮಾಣಗೊಂಡು ದೊಡ್ಡ ಹಿಟ್ ಸಹ ಆಗಿದೆ.

  ಎಂಎಸ್ ಧೋನಿ ವೃತ್ತಿಪರ ಕ್ರಿಕೆಟಿಗ, ಆದರೆ ಅವರೊಬ್ಬ ಒಳ್ಳೆಯ ನಟರೂ ಹೌದು, ಅವರ ನಟನೆ ಹಾಗೂ ನೃತ್ಯ ಪ್ರತಿಭೆ ಅವರು ಅಭಿನಯಿಸಿರುವ ಜಾಹೀರಾತುಗಳ ಮೂಲಕ ಜಗಜ್ಜಾಹೀರಾಗಿದೆ.

  ಸಿನಿಮಾ ಬಗ್ಗೆ ವಿಶೇಷ ಪ್ರೇಮವುಳ್ಳ ಎಂಎಸ್ ಧೋನಿ ಇದೀಗ ಅಧಿಕೃತವಾಗಿ ಚಿತ್ರರಂಗಕ್ಕೆ ಕಾಲಿಡಲು ಮುಂದಾಗಿದ್ದಾರೆ. ನಟನಾಗಿ ಅಲ್ಲ ಬದಲಿಗೆ ನಿರ್ಮಾಪಕನಾಗಿ. ಎಂಎಸ್ ಧೋನಿ, ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರ ನೆರವಿನೊಂದಿಗೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅದೂ ತಮಿಳು ಸಿನಿಮಾ!

  ತಮಿಳುನಾಡಿನೊಂದಿಗೆ ಧೋನಿಗೆ ವಿಶೇಷ ನಂಟು

  ತಮಿಳುನಾಡಿನೊಂದಿಗೆ ಧೋನಿಗೆ ವಿಶೇಷ ನಂಟು

  ಎಂಎಸ್ ಧೋನಿಗೆ ತಮಿಳುನಾಡಿನೊಂದಿಗೆ ವಿಶೇಷ ನಂಟಿದೆ. ಅದಕ್ಕೆ ಕಾರಣ ಐಪಿಎಲ್. ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿರುವ ಧೋನಿ, ತಮ್ಮ ತಂಡಕ್ಕಾಗಿ ಹಲವು ಬಾರಿ ಕಪ್ ಗೆದ್ದುಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಧೋನಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಧೋನಿಯನ್ನು ತಲಾ ಎಂದೇ ಕರೆಯುತ್ತಾರೆ ತಮಿಳುನಾಡು ಅಭಿಮಾನಿಗಳು. ಇನ್ನು ಕೆಲವು ಸೀಸನ್‌ಗಳ ಐಪಿಎಲ್ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಧೋನಿ ವಿದಾಯ ಹೇಳಲಿದ್ದಾರೆ. ಆದರೆ ಸಿನಿಮಾ ಮೂಲಕ ತಮಿಳುನಾಡಿನೊಂದಿಗೆ ನಂಟು ಮುಂದುವರೆಸುವ ಇರಾದೆ ಧೋನಿಯದ್ದು.

  ತಮಿಳು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ

  ತಮಿಳು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ

  ಎಂಎಸ್ ಧೋನಿ, ತಮಿಳು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧವಾಗಿದ್ದು, ಮುಖ್ಯ ಪಾತ್ರಧಾರಿಯೂ ಫಿಕ್ಸ್ ಆಗಿದ್ದಾಗಿದೆ. ಸಿನಿಮಾ ನಿರ್ಮಾಣಕ್ಕೆಂದು ಸಂಜಯ್ ಎಂಬುವರನ್ನು ಮ್ಯಾನೇಜರ್ ಮಾದರಿಯಲ್ಲಿ ಧೋನಿ ನೇಮಿಸಿಕೊಂಡಿದ್ದಾರೆ. ಈ ಸಂಜಯ್ ರಜನೀಕಾಂತ್‌ರ ಆಪ್ತ ಸಹ.

  ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿ

  ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿ

  ಎಂಎಸ್ ಧೋನಿ ನಿರ್ಮಾಣ ಮಾಡುತ್ತಿರುವ ಮೊದಲ ತಮಿಳು ಸಿನಿಮಾಕ್ಕೆ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿ. ಧೋನಿ, ನಾಯಕಿ ಪ್ರಧಾನ ಸಿನಿಮಾ ನಿರ್ಮಾಣ ಮಾಡಲಿದ್ದು, ಈ ಸಿನಿಮಾದಲ್ಲಿ ರಜನೀಕಾಂತ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ಈ ವರ್ಷಾಂತ್ಯಕ್ಕೆ ಧೋನಿಯ ಮೊದಲ ತಮಿಳು ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

  ತಮಿಳು ಸಿನಿಮಾದಲ್ಲಿ ನಟಿಸಿರುವ ಹರ್ಭಜನ್, ಇರ್ಫಾನ್ ಪಠಾಣ್

  ತಮಿಳು ಸಿನಿಮಾದಲ್ಲಿ ನಟಿಸಿರುವ ಹರ್ಭಜನ್, ಇರ್ಫಾನ್ ಪಠಾಣ್

  ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಕೆಲ ಕಾಲ ಆಡಿದ್ದ ಹರ್ಭಜನ್ ಸಿಂಗ್ ಈಗಾಗಲೇ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಫ್ರೆಂಡ್‌ಶಿಪ್' ಹೆಸರಿನ ತಮಿಳು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಹರ್ಭಜನ್ ಸಿಂಗ್ ನಟಿಸಿದ್ದಾರೆ. 'ಡಿಕ್ಕಿಲೋನ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಕ್ರಿಕೆಟಿಗ ಇರ್ಫಾನ್ ಪಠಾಣ್ ಸಹ ವಿಕ್ರಂ ನಟನೆಯ ಹೊಸ ತಮಿಳು ಸಿನಿಮಾ 'ಕೋಬ್ರಾ'ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ಇನ್ನೂ ಕೆಲವು ಆಟಗಾರರು ವಿವಿಧ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಎಂಎಸ್ ಧೋನಿ ನೇರವಾಗಿ ನಿರ್ಮಾಪರೇ ಆಗಲು ಸಜ್ಜಾಗಿದ್ದಾರೆ.

  English summary
  Cricketer MS Dhoni to produce a Tamil movie soon. Nayanathara will act as heroine in MS Dhoni's first Tamil movie.
  Thursday, May 12, 2022, 8:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X