»   » 'ಮುಂತಿರಿವಲ್ಲಿಕಲ್' ಚಿತ್ರ ರಿಮೇಕ್‌: ಕನ್ನಡದಲ್ಲಿ ರವಿಚಂದ್ರನ್?

'ಮುಂತಿರಿವಲ್ಲಿಕಲ್' ಚಿತ್ರ ರಿಮೇಕ್‌: ಕನ್ನಡದಲ್ಲಿ ರವಿಚಂದ್ರನ್?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಇತರೆ ಭಾಷೆಗಳ ಚಿತ್ರಗಳನ್ನು ರಿಮೇಕ್ ಮಾಡಲು ವಿರೋಧ ಇರುವ ಸಂದರ್ಭದಲ್ಲಿ, ಈಗೊಂದು ಮಲೆಯಾಳಂ ಸಿನಿಮಾ ಕನ್ನಡಕ್ಕೆ ರಿಮೇಕ್ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ 'ಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಳ್' ಮಲಯಾಳಂ ಸಿನಿಮಾ ವನ್ನು ದಕ್ಷಿಣ ಭಾರತ ಭಾಷೆಗಳಿಗೆ ರಿಮೇಕ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆಯಂತೆ.[ರವಿಮಾಮನನ್ನು ಕಿಚಾಯಿಸುತ್ತಿರುವವರ ವಿರುದ್ಧ ಕಿಚ್ಚನ ಕಿಚ್ಚು]

ಅಂದಹಾಗೆ ಮಲೆಯಾಳಂ ಸಿನಿಮಾ ನಿರ್ದೇಶಕ ಜಿಬು ಜಾಕಬ್ ಅವರು 'ಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಳ್' ಸಿನಿಮಾ ವನ್ನು ರಿಮೇಕ್ ಮಾಡಲು ಓಡಾಡುತ್ತಿರುವ ಡೈರಕ್ಟರ್ ಆಗಿದ್ದು, ಇವರು ದಕ್ಷಿಣ ಭಾರತ ಭಾಷೆಗಳಾದ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ರಿಮೇಕ್ ಮಾಡಲು ನಿರ್ಮಾಪಕರೊಂದಿಗೆ ಚರ್ಚಿಸಿದ್ದಾರಂತೆ.

Munthirivallikal to be remade in three languages

'ಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಳ್' ರಿಮೇಕ್ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಕ್ರೇಜಿಸ್ಟಾರ್ ವಿ ರವಿಚಂದ್ರನ್, ತೆಲುಗಿನಲ್ಲಿ ನಟ ವೆಂಕಟೇಶ್ ಅವರು ನಟಿಸಬೇಕು ಎಂಬ ಚಿಂತನೆಯನ್ನು ಜಿಬು ಜಾಕಬ್ ಹೊಂದಿದ್ದು, ತಮಿಳು ಅವತರಣಿಕೆಯಲ್ಲಿ ರಜಿನಿಕಾಂತ್ ಅವರು ನಟಿಸಬೇಕೆಂಬ ಆಸೆಯು ಅವರಿಗಿದೆಯಂತೆ.

ಜಿಬು ಜಾಕಬ್ ರಿಮೇಕ್ ಮಾಡಲು ಪ್ಲಾನ್ ಮಾಡಿರುವ 'ಮುಂತಿರಿವಲ್ಲಿಕಲ್ ತಳಿರ್ಕ್ಕುಂಬೋಳ್' ಚಿತ್ರಕ್ಕೆ ತೆಲುಗು ಮತ್ತು ಕನ್ನಡದಲ್ಲಿ ಯಾರು ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಇನ್ನೂ ನಿರ್ಧರಿಸಿಲ್ಲ. ಆದರೆ ಜಿಬು ಜಾಕಬ್ ತಮಿಳು ಅವತರಣಿಕೆ ನಿರ್ದೇಶನ ಮಾಡುವ ಸಂಭವವಿದೆಯಂತೆ. ಈ ಸಿನಿಮಾದ ರಿಮೇಕ್ ಚಿತ್ರದಲ್ಲಿ ರವಿಚಂದ್ರನ್ ನಟಿಸುವ ಬಗ್ಗೆಯೂ ಇನ್ನು ಯಾವುದೇ ಅಧಿಕೃತ ಮಾಹಿತಿ ಇಲ್ಲ.

English summary
Mohanlal’s 'Munthirivallikal Thalirkkumbol' is all set to be remade into other Southern languages. According to director Jibu Jacob, talks are on for remaking the movie, which hit the theatres last week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada