»   » ಗಾಂಧಿನಗರದ ಗಾಸಿಪಿಗೆ ತೆರೆ ಎಳೆದ ಪುನೀತ್

ಗಾಂಧಿನಗರದ ಗಾಸಿಪಿಗೆ ತೆರೆ ಎಳೆದ ಪುನೀತ್

Posted By:
Subscribe to Filmibeat Kannada
 My next film is not with Samuthirakani Puneeth Rajkumar
ನಮ್ಮ ಸ್ಯಾಂಡಲ್ ವುಡ್ಡಿನ ಹೆಡ್ ಆಫೀಸ್ ಗಾಂಧಿನಗರದಲ್ಲಿ ಅಂತೆ ಕಂತೆ ಕಥೆಗಳಿಗೆ ಏನೂ ಕಮ್ಮಿಯಿಲ್ಲ. ದಿನಕ್ಕೊಂದು ಕಥೆಗಳು ಹುಟ್ಟುತ್ತಲೇ ಇರುತ್ತವೆ. ಅದರಲ್ಲಿ ಕೆಲವೊಂದು ನಿಜವಾದರೆ ಕೆಲವೊಂದು ಸುದ್ದಿಗಳಿಗೆ ತಲೆಬುಡಗಳೇ ಇರುವುದಿಲ್ಲ.

ಪುನೀತ್, ಯೋಗಿ ಅಭಿನಯದ ಯಾರೇ ಕೂಗಾಡಲಿ ಚಿತ್ರ ಪ್ರಚಂಡ ಯಶಸ್ಸು ಪಡೆದ ನಂತರ ಹುಟ್ಟಿಕೊಂಡ ಗಾಸಿಪಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೊಸ ವರ್ಷದ ಮುನ್ನಾ ದಿನ ತೆರೆ ಎಳೆದಿದ್ದಾರೆ.

ಯಾರೇ ಕೂಗಾಡಲಿ ಚಿತ್ರದ ನಿರ್ದೇಶಕ ತಮಿಳಿನ ಸಮುದ್ರಖಣಿ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ಅವರ ಮುಂದಿನ ಚಿತ್ರ ಸೆಟ್ಟೇರಲಿದೆ ಎಂದು ಊರೆಲ್ಲಾ ಸುದ್ದಿಯಾಗಿತ್ತು.

ನಾನು ಮತ್ತೆ ಸಮುದ್ರಖಣಿ ನಿರ್ದೇಶನದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದು ನಿಜ, ಆದರೆ ನನ್ನ ಮುಂದಿನ ಚಿತ್ರ ಅವರ ನಿರ್ದೇಶನದ ಚಿತ್ರವಲ್ಲ.

ನಾಲ್ಕೈದು ಚಿತ್ರಗಳಿಗೆ ನಿರ್ಮಾಪಕರು ಮತ್ತು ನಿರ್ದೇಶಕರ ಜೊತೆ ಮಾತುಕತೆ ನಡೆಯುತ್ತಿದೆ. ಸ್ಕ್ರಿಪ್ಟ್ ಯಾವುದು ಇನ್ನೂ ಅಂತಿಮವಾಗಿಲ್ಲ.

ಮಾತುಕತೆ ಮುಗಿದು ಎಲ್ಲಾ ಅಂತಿಮವಾದ ಮೇಲೆ ನಾನೇ ಮಾಧ್ಯಮದವರಿಗೆ ತಿಳಿಸುತ್ತೇನೆ ಎಂದು ಪುನೀತ್ ಹೇಳಿದ್ದಾರೆ.

ರಾಘಣ್ಣನ ಮಗ ವಿನಯ್ ಕೂಡಾ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾನೆ. ಒಳ್ಳೆ ಸ್ಕ್ರಿಪ್ಟ್ ಮತ್ತು ನಿರ್ದೇಶಕರನ್ನು ಹುಡುಕುತ್ತಿದ್ದೇವೆ. ಎಲ್ಲಾ ಅಂದುಕೊಂಡಂತೆ ನಡೆದರೆ ನಮ್ಮ ಕುಟುಂಬದ ಇನ್ನೊಬ್ಬ ಕಲಾವಿದನನ್ನು ರಾಜ್ಯದ ಜನತೆಗೆ ಪರಿಚಯಿಸುತ್ತೇವೆ ಎಂದು ಪುನೀತ್ ಹೇಳಿದ್ದಾರೆ.

ಮೂಲ: ಕಸ್ತೂರಿ ನ್ಯೂಸ್ 24X7

English summary
My next film is not with Yaree Koogadali director Samuthirakani said Power Star Puneeth Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada