»   » ನಾಗತಿಹಳ್ಳಿ ಮಗಳ ಮದುವೆಗೆ ಮಂತ್ರಮಾಂಗಲ್ಯ ಇಲ್ಲ?

ನಾಗತಿಹಳ್ಳಿ ಮಗಳ ಮದುವೆಗೆ ಮಂತ್ರಮಾಂಗಲ್ಯ ಇಲ್ಲ?

By: ಜೀವನರಸಿಕ
Subscribe to Filmibeat Kannada

ಹೆಸರಾಂತ ನಿರ್ದೇಶಕ, ಬರಹಗಾರ, ಪತ್ರಿಕಾ ಅಂಕಣಕಾರ, ಕಿರುತೆರೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ಹೆಸರು ಮಾಡಿದವರು ನಾಗತಿಹಳ್ಳಿ ಚಂದ್ರಶೇಖರ್. ಎಲ್ಲಕ್ಕಿಂತ ಹೆಚ್ಚಾಗಿ ಅವರು ಕುವೆಂಪು ಅವರ ಮಂತ್ರ ಮಾಂಗಲ್ಯದ ಶೈಲಿಯ ಮದುವೆಯ ಪ್ರತಿಪಾದಕರು.

ತಾವು ಈ ಹಿಂದೆ ನಡೆದ ಮದುವೆಗಳಲ್ಲಿ ನಿರ್ದೇಶಕ, ಬರಹಗಾರ ನಾಗತೀಹಳ್ಳಿ ಚಂದ್ರಶೇಖರ್ ಮಂತ್ರಮಾಂಗಲ್ಯ ಬೋಧನೆ ಮಾಡಿ ಮಂತ್ರಮಾಂಗಲ್ಯ ಮದುವೆಯ ಮುಂದಾಳತ್ವ ವಹಿಸಿದ್ದರು. ಇದಕ್ಕೆ ಇತ್ತೀಚೆಗಿನ ಉದಾಹರಣೆ ಅಂದ್ರೆ ಶಿವಮೊಗ್ಗದಲ್ಲಿ ನಡೆದ ಸಾಹಿತಿ ಕವಿರಾಜ್ ಮದುವೆ. [ನಾಗತಿಹಳ್ಳಿ ಚಂದ್ರಶೇಖರ್ ಪುತ್ರಿ ಫಾರಿನ್ ಪರಿಣಯ]

Nagathihalli daughter marriage not according to mantra mangalya?

ಆದ್ರೆ ಈಗ ನಾಗತಿಹಳ್ಳಿ ಪುತ್ರಿ ಕನಸು ನಾಗತಿಹಳ್ಳಿ ಅವರ ವಿವಾಹ ಜರುಗುತ್ತಿದೆ. ಇದು ಕುವೆಂಪು ಕನಸಿನ ಮಂತ್ರಮಾಂಗಲ್ಯ ಅಲ್ಲ. ಕನಸು ಅವರ ಮದುವೆ ಸಾಯಿ ವಿವಸ್ವತ್ ಓಂಕಾರ ಅನ್ನುವ ವರನೊಂದಿಗೆ ಚಂದ್ರಶೇಖರ್ ಹುಟ್ಟೂರಾದ ನಾಗತಿಹಳ್ಳಿಯಲ್ಲಿ ಮಾರ್ಚ್ 28ರ ಶನಿವಾರದಂದು ನಡೆಯಲಿದೆ.

ಆರತಕ್ಷತೆ ಅದಾದ ಮಾರನೇ ದಿನ ಬೆಂಗಳೂರಿನ ಪುಟ್ಟೇನಹಳ್ಳಿಯ ಬ್ರಿಗೇಡ್ ಮಿಲೇನಿಯಂ ಅಪಾರ್ಮ್ ಮೆಂಟ್ ಎಂ ಎಲ್ ಆರ್ ಕನ್ವೆಶನ್ ನಲ್ಲಿ ನಡೆಯಲಿದೆ. ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ನಾಗತಿಹಳ್ಳಿ, 'ಕಾಡಿನ ಬೆಂಕಿ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಬರೆಯುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

Nagathihalli daughter marriage not according to mantra mangalya?

'ಉಂಡು ಹೋದ ಕೊಂಡು ಹೋದ', 'ಕೊಟ್ರೇಶಿ ಕನಸು', 'ಅಮೇರಿಕಾ ಅಮೇರಿಕಾ', 'ನನ್ನ ಪ್ರೀತಿಯ ಹುಡುಗಿ', 'ಅಮೃತಧಾರೆ' ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ನಾಗತಿಹಳ್ಳಿ ಚಂದ್ರಶೇಖರ್ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅನ್ನುವುದು ನಿಮಗೆ ಗೊತ್ತೇ ಇದೆ.

English summary
Sandalwood director, writer Nagathihalli Chandrashekhar's Daughter Kanasu Nagathihalli marriage is fixed on March 27, 2015. Venue - M.L.R Convention Center, J.P.Nagar, Bengaluru. But sources says, the marriage is not held according to Kuvempu Mantra Mangalya.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada