For Quick Alerts
  ALLOW NOTIFICATIONS  
  For Daily Alerts

  ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ?

  |

  'KGF', 'ಕಾಂತಾರ' ನಂತರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ನಿರ್ಮಾಣವಾಗುವ ಮಹಿಳಾ ಪ್ರಧಾನ ಚಿತ್ರದಲ್ಲಿ ನಯನತಾರಾ ನಟಿಸುತ್ತಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿ ಲೇಡಿ ಸೂಪರ್ ಸ್ಟಾರ್ ಫ್ಯಾನ್ಸ್ ಖುಷಿಯಾಗಿದ್ದಾರೆ.

  19 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿಸಿದ ನಯನತಾರಾ ಇವತ್ತಿಗೂ ದಕ್ಷಿಣ ಭಾರತದ ನಂಬರ್ ವನ್ ಹೀರೊಯಿನ್ ಆಗಿ ಮಿಂಚುತ್ತಿದ್ದಾರೆ. ಮದುವೆ ನಂತರ ಕೂಡ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ. ಶೀಘ್ರದಲ್ಲೇ ಬಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ. 'ಕನೆಕ್ಟ್', 'ಗೋಲ್ಡ್', 'ಜವಾನ್', 'ಇರೈವನ್' ಸೇರಿದಂತೆ ಮತ್ತೆರಡು ಹೆಸರಿಡದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಮತ್ತೊಂದು ಮಹಿಳಾ ಪ್ರಧಾನ ಚಿತ್ರಕ್ಕೆ ನಯನತಾರಾ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

  ಮತ್ತೊಂದು ಬಯೋಪಿಕ್‌ಗೆ ಸುಧಾ ಕೊಂಗರ ಪ್ಲ್ಯಾನ್? ಹೊಂಬಾಳೆ ನಿರ್ಮಾಣದ ಈ ಚಿತ್ರಕ್ಕೆ ಹೀರೊ ಫಿಕ್ಸ್!ಮತ್ತೊಂದು ಬಯೋಪಿಕ್‌ಗೆ ಸುಧಾ ಕೊಂಗರ ಪ್ಲ್ಯಾನ್? ಹೊಂಬಾಳೆ ನಿರ್ಮಾಣದ ಈ ಚಿತ್ರಕ್ಕೆ ಹೀರೊ ಫಿಕ್ಸ್!

  ವಿಘ್ನೇಶ್ ಶಿವನ್ ಕೈ ಹಿಡಿದು ಸರೋಗಸಿ ಪದ್ಧತಿಯಲ್ಲಿ ನಯನತಾರಾ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಲಾಲನೆ ಪಾಲನೆ ಜೊತೆ ಜೊತೆಗೆ ಗಂಡ, ಹೆಂಡತಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

   ಹೊಂಬಾಳೆ ಬ್ಯಾನರ್‌ನಲ್ಲಿ ನಯನ್?

  ಹೊಂಬಾಳೆ ಬ್ಯಾನರ್‌ನಲ್ಲಿ ನಯನ್?

  ಇಷ್ಟು ದಿನ 'ಕಾಂತಾರ' ರಿಲೀಸ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಹೊಂಬಾಳೆ ಸಂಸ್ಥೆ ನಿಧಾನವಾಗಿ ಬೇರೆ ಸಿನಿಮಾಗಳ ಕಡೆ ಮುಖ ಮಾಡುತ್ತಿದೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಬೇಕಿರುವ 'ರಿಚರ್ಡ್ ಆಂಟನಿ' ಸಿನಿಮಾ ಶುರುವಾಗಬೇಕಿದೆ. ಸುಧಾ ಕೊಂಗರ ನಿರ್ದೇಶನದಲ್ಲಿ ಮತ್ತೊಂದು ಚಿತ್ರಕ್ಕೆ ಸೆಟ್ಟೇರಲಿದೆ. ಅದಕ್ಕೂ ಮುನ್ನ ನಯನತಾರ ಜೊತೆಗೆ ಹೊಂಬಾಳೆ ಸಂಸ್ಥೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಬಗ್ಗೆ ಗುಸುಗುಸು ಕೇಳಿಬರ್ತಿದೆ.

   ಮಹಿಳಾ ಪ್ರಧಾನ ಚಿತ್ರಕ್ಕೆ ಪ್ಲ್ಯಾನ್

  ಮಹಿಳಾ ಪ್ರಧಾನ ಚಿತ್ರಕ್ಕೆ ಪ್ಲ್ಯಾನ್

  ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿಯಾಗಿ ಒಂದು ಮಹಿಳಾ ಪ್ರಧಾನ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗ್ತಿದೆ. 'ಜವಾನ್' ಸಿನಿಮಾದಲ್ಲಿ ನಟಿಸುವ ಮೂಲಕ ನಯನ್ ಬಾಲಿವುಡ್‌ಗೂ ಪರಿಚತರಾಗುತ್ತಿದ್ದಾರೆ. ಇನ್ನು ದಕ್ಷಿಣದ 4 ಭಾಷೆಗಳಲ್ಲಿ ನಟಿಸಿ ಭಾರೀ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆಯಂತೆ.

   ಸಾಲು ಸಾಲು ಚಿತ್ರಗಳ ನಿರ್ಮಾಣ

  ಸಾಲು ಸಾಲು ಚಿತ್ರಗಳ ನಿರ್ಮಾಣ

  ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಪ್ರಭಾಸ್ 'ಸಲಾರ್', ಪೃಥ್ವಿರಾಜ್ ಸುಕುಮಾರ್ 'ಟೈಸನ್', ಫಹಾದ್ ಫಾಸಿಲ್ 'ಧೂಮಂ' ಸಿನಿಮಾಗಳ ಚಿತ್ರೀಕರಣ ನಡೀತಿದೆ. ಸುಧಾ ಕೊಂಗರ ನಿರ್ದೇಶನದ ರತನ್ ಟಾಟಾ ಬಯೋಪಿಕ್ ಪ್ಲ್ಯಾನ್ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೆಲ್ಲದರ ನಡುವೆ ನಯನತಾರಾ ಸಿನಿಮಾ ಸುದ್ದಿ ಕೇಳಿಬರ್ತಿದೆ.

   ಹಿಟ್ ಸಿನಿಮಾಗಳನ್ನು ಕೊಟ್ಟ ಸಂಸ್ಥೆ

  ಹಿಟ್ ಸಿನಿಮಾಗಳನ್ನು ಕೊಟ್ಟ ಸಂಸ್ಥೆ

  'ನಿನ್ನಿಂದಲೇ' ಸಿನಿಮಾ ಮೂಲಕ ಹೊಂಬಾಳೆ ಸಂಸ್ಥೆ ಚಿತ್ರ ನಿರ್ಮಾಣ ಆರಂಭಿಸಿತ್ತು. ಅದಕ್ಕೂ ಮೊದಲು ಒಂದು ಚಿತ್ರಗಳಿಗೆ ವಿಜಯ್ ಕಿರಗಂದೂರ್ ಸಹ ನಿರ್ಮಾಪಕರಾಗಿದ್ದರು. ಮೊದಲ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿತು. ಆದರೆ ಚಿತ್ರತಂಡ ಸುಮ್ಮನಾಗಲಿಲ್ಲ. 'ಮಾಸ್ಟರ್‌ಪೀಸ್', 'ರಾಜಕುಮಾರ', KGF ಚಾಪ್ಟರ್ 1, KGF ಚಾಪ್ಟರ್ 2, ಕಾಂತಾರ ಸಿನಿಮಾಗಳು ಸಂಸ್ಥೆ ಕೈ ಹಿಡಿಯಿತು. ಇದೀಗ ಭಾರತೀಯ ಚಿತ್ರರಂಗದಲ್ಲೇ ಅತಿದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಹೊಂಬಾಳೆ ಹೊರಹೊಮ್ಮಿದೆ.

  English summary
  Nayanthara signs for Pan India movie with KGF Fame Hombale Films. Vijay Kiraganduru is producing back to back Big Budget movies. Now planning women centric movie with Nayanthara. know more.
  Saturday, November 26, 2022, 13:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X