»   » ದರ್ಶನ್ ಚಿತ್ರವನ್ನೇ 'ಒಲ್ಲೆ' ಎಂದ ಹೀರೋಯಿನ್ ಯಾರು?

ದರ್ಶನ್ ಚಿತ್ರವನ್ನೇ 'ಒಲ್ಲೆ' ಎಂದ ಹೀರೋಯಿನ್ ಯಾರು?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳಲ್ಲಿ ನಟಿಸುವಾಸೆ ಯಾರಿಗಿರೋಲ್ಲ? ಅದ್ರಲ್ಲೂ ಹೀರೋಯಿನ್ ಗಳ ವಿಷ್ಯಕ್ಕೆ ಬಂದ್ರೆ, ದರ್ಶನ್ ಸಿನಿಮಾಗಳು ಬಿಸಿ ಜಿಲೇಬಿ ಇದ್ದ ಹಾಗೆ. 'ಬಾಕ್ಸ್ ಆಫೀಸ್ ಸುಲ್ತಾನ್' ಅಭಿನಯಿಸುವ ಚಿತ್ರಗಳು ಗಲ್ಲಪೆಟ್ಟಿಗೆಯಲ್ಲಿ ಸದ್ದು ಮಾಡೋದು ಪಕ್ಕಾ. ಅಂದ್ಮೇಲೆ, ದರ್ಶನ್ ಜೊತೆ ಡ್ಯುಯೆಟ್ ಹಾಡೋ ನಟೀಮಣಿಗೆ ಅದೃಷ್ಟ ಖುಲಾಯಿಸೋಲ್ವ ಹೇಳಿ?

ಇದೆಲ್ಲಾ ನಿಜ! ಅಂತ ಇಡೀ ಗಾಂಧಿನಗರಕ್ಕೆ ಗೊತ್ತಿದ್ದರೂ, ಈಗಷ್ಟೆ ಸ್ಯಾಂಡಲ್ ವುಡ್ ಕದ ತಟ್ಟಿರುವ ಬ್ಯೂಟಿಯೊಬ್ರು ದರ್ಶನ್ ಚಿತ್ರಕ್ಕೆ ಬಿಲ್ ಕುಲ್ ನೋ ಅಂದು ಬಿಟ್ಟಿದ್ದಾರೆ. ಯಾರಪ್ಪಾ ಆಕೆ ಅಂದ್ರೆ, ಇವರೇ ನೋಡಿ 'ಮುಂಗಾರು ಮಳೆ-2' ಚಿತ್ರದ ನಾಯಕಿ ನೇಹಾ ಶೆಟ್ಟಿ.

Neha Shetty rejects lead role in Darshan starrer 'Jaggu Dada'

ಅಂದ್ಹಾಗೆ, ನೇಹಾ ಶೆಟ್ಟಿ ರಿಜೆಕ್ಟ್ ಮಾಡಿದ ಸಿನಿಮಾ ದರ್ಶನ್ ರವರ ಅಪ್ ಕಮ್ಮಿಂಗ್ ಪ್ರಾಜೆಕ್ಟ್ 'ಜಗ್ಗು ದಾದಾ'. ಅಸಲಿಗೆ, ನೇಹಾ 'ಜಗ್ಗು ದಾದಾ' ಒಲ್ಲೆ ಅನ್ನೋದಕ್ಕೆ ಕಾರಣ ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗಡೆ.

ನಿರ್ದೇಶಕ ರಾಘವೇಂದ್ರ ಹೆಗಡೆ ಅವರಿಗೆ 'ಜಗ್ಗು ದಾದಾ' ಚೊಚ್ಚಲ ಸಿನಿಮಾ. ಬಾಲಿವುಡ್ ನಲ್ಲಿ ಹೆಚ್ಚು ಪಳಗಿರುವ ರಾಘವೇಂದ್ರ ಹೆಗಡೆ ಅವರಿಗೆ ಸ್ಯಾಂಡಲ್ ವುಡ್ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಆದರೂ ದರ್ಶನ್ ಅವರ ಇಮೇಜ್ ಗೆ ತಕ್ಕಂತೆ ರಾಘವೇಂದ್ರ ಹೆಗಡೆ 'ಜಗ್ಗು ದಾದಾ' ಸಿನಿಮಾ ಮಾಡ್ತಿದ್ದಾರೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅನುಷ್ಕಾ ಶೆಟ್ಟಿ ನಾಯಕಿ?]

Neha Shetty rejects lead role in Darshan starrer 'Jaggu Dada'

ದರ್ಶನ್ ಅಂತೂ ರಾಘವೇಂದ್ರ ಹೆಗಡೆ ಅವರ ಮೇಲೆ ಅಪಾರ ನಂಬಿಕೆ ಇಟ್ಟು ಕಾಲ್ ಶೀಟ್ ಕೊಟ್ಟಿದ್ದಾರೆ. ಆದರೆ, ಮೊದಲೆರಡು ಚಿತ್ರಗಳಲ್ಲೇ ರಿಸ್ಕ್ ತೆಗೆದುಕೊಳ್ಳುವುದಕ್ಕೆ ನೇಹಾ ಶೆಟ್ಟಿ ರೆಡಿಯಿಲ್ಲ. ಹೀರೋ ಯಾರೇ ಆಗಿರಲಿ, ಪಳಗಿರುವ ನಿರ್ದೇಶಕರೊಂದಿಗೆ ಮಾತ್ರ ಕೆಲಸ ಮಾಡ್ಬೇಕು ಅಂತ ನಿರ್ಧರಿಸಿ ದರ್ಶನ್ ಅವರ 'ಜಗ್ಗು ದಾದಾ'ಗೆ ನೇಹಾ ಕೆಂಪು ಬಾವುಟ ತೋರಿಸಿದ್ದಾರೆ.

ಹಾಗ್ನೋಡಿದ್ರೆ, 'ಮುಂಗಾರು ಮಳೆ-2' ಚಿತ್ರವನ್ನ ನೇಹಾ ಒಪ್ಪಿಕೊಂಡಿದ್ದು ನಿರ್ದೇಶಕ ಶಶಾಂಕ್ ಅವರ ಪತ್ರಿಭೆ ನೋಡಿ ಅಂತೆ.!

English summary
According to the Grapevine, Neha Shetty, who has been selected as the Heroine for 'Mungaru Male-2' has turned down the offer of paring opposite Darshan in 'Jaggu Dada'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada