»   » ರಾಜಮೌಳಿ ಮತ್ತು ನಿಖಿಲ್ ಬಗ್ಗೆ ಹೊರಬಿತ್ತು ರೋಚಕ ಸುದ್ದಿ.!

ರಾಜಮೌಳಿ ಮತ್ತು ನಿಖಿಲ್ ಬಗ್ಗೆ ಹೊರಬಿತ್ತು ರೋಚಕ ಸುದ್ದಿ.!

Posted By:
Subscribe to Filmibeat Kannada
ಎಸ್ ಎಸ್ ರಾಜಮೌಳಿ ಹಾಗು ನಿಖಿಲ್ ಕುಮಾರಸ್ವಾಮಿ ಬಗ್ಗೆ ಹೊರಬಿದ್ದ ರೋಚಕ ವಿಷಯ | Filmibeat kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ', ಶಿವಣ್ಣ ಮತ್ತು ಸುದೀಪ್ ಅಭಿನಯದ 'ದಿ ವಿಲನ್', ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ,ಎಫ್' ಅಂತಹ ದೊಡ್ಡ ಚಿತ್ರಗಳ ನಿರೀಕ್ಷೆಯಲ್ಲಿರುವ ಕನ್ನಡ ಪ್ರೇಕ್ಷಕರಿಗೆ ಸ್ಪೋಟಕ ಸುದ್ದಿಯೊಂದು ಸಿಕ್ಕಿದೆ.

ಹೌದು, ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಜೆಡಿಎಸ್ ರಾಜ್ಯಾದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ನಿಖಿಲ್ ಕುಮಾರ್ ಸ್ವಾಮಿ ಕೂಡ ಸುದೀಪ್ ಜೊತೆಯಲ್ಲಿದ್ದರು. ಹೀಗಾಗಿ, ಈ ಭೇಟಿಯ ಬಗ್ಗೆ ದೊಡ್ಡ ಮಟ್ಟದ ಕುತೂಹಲ ಇತ್ತು. ಈ ಭೇಟಿಯ ನಂತರ ನಿಖಿಲ್ ಬಗ್ಗೆ ಒಂದು ಸುಳಿವು ಸಿಕ್ಕಿದೆ.

ಇದರ ಪರಿಣಾಮ ತೆಲುಗು ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸ್ ನಿಖಿಲ್ ಕುಮಾರ್ ಅವರ ಬಗ್ಗೆ ಟ್ವಿಟ್ಟರ್ ದೊಡ್ಡ ಚರ್ಚೆಯಾಗ್ತಿದೆ. ಅಷ್ಟಕ್ಕೂ, ಸುದೀಪ್ ಮತ್ತು ಹೆಚ್.ಟಿ.ಕೆ ಭೇಟಿಗೂ ನಿಖಿಲ್ ಮತ್ತು ರಾಜಮೌಳಿ ಬಗ್ಗೆ ಚರ್ಚೆಗೂ ಏನ್ ಸಂಬಂಧ ಅಂತ ತಿಳಿಯಲು ಮುಂದೆ ಓದಿ.....

ನಿಖಿಲ್ ಗೆ ಆಕ್ಷನ್ ಕಟ್ ಹೇಳ್ತಾರಂತೆ ರಾಜಮೌಳಿ

ಜಾಗ್ವಾರ್ ಸ್ಟಾರ್ ನಿಖಿಲ್ ಕುಮಾರ್ ಗೆ ತೆಲುಗು ನಿರ್ದೇಶಕ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬು ಸುದ್ದಿ ಈಗ ಟ್ವಿಟ್ಟರ್ ನಲ್ಲಿ ಚರ್ಚೆಯಾಗುತ್ತಿದೆ. ನಿಖಿಲ್ ಕುಮಾರ್ ಅವರ ಫ್ಯಾನ್ಸ್ ಕ್ಲಬ್ ಗಳೇ ಈ ಸುದ್ದಿಯ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸುದೀಪ್-ಹೆಚ್.ಡಿ.ಕೆ ಭೇಟಿಯಲ್ಲಿ ಲೀಕ್

ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಆದ್ರೆ, ಇತ್ತೀಚಿಗಷ್ಟೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದರು. ಈ ವೇಳೆ ರಾಜಮೌಳಿ ಜೊತೆ ನಿಖಿಲ್ ಸಿನಿಮಾ ಮಾಡುವ ಬಗ್ಗೆ ಪ್ರಸ್ತಾಪವಾಗಿದೆ ಎನ್ನಲಾಗಿದೆ. ಅಲ್ಲಿಂದ ಈ ಸುದ್ದಿ ವೈರಲ್ ಆಗಿದ್ದು, ಈಗ ಟ್ವಿಟ್ಟರ್ ನಲ್ಲಿ ದೊಡ್ಡ ಡಿಬೆಟ್ ಆಗ್ತಿದೆಯಂತೆ.

ಸುದೀಪ್-ಕುಮಾರಸ್ವಾಮಿ ಭೇಟಿ ಹಿಂದಿರುವ 3 ಕಾರಣ

ಸುದೀಪ್ ಮತ್ತು ನಿಖಿಲ್ ಸಿನಿಮಾ.?

ಇನ್ನೊಂದು ಕಡೆ ಕಿಚ್ಚ ಸುದೀಪ್ ಅವರು ನಿಖಿಲ್ ಕುಮಾರ್ ಅವರ ಜೊತೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದಾರೆ. ಇವರಿಬ್ಬರ ಜುಗಲ್ ಬಂದಿಯಲ್ಲಿ ಬಹುದೊಡ್ಡ ಪ್ರಾಜೆಕ್ಟ್ ವೊಂದು ಸೆಟ್ಟೇರಲಿದೆ. ಇದಕ್ಕೆ ಕುಮಾರಸ್ವಾಮಿ ಅವರೇ ಬಂಡವಾಳ ಕೂಡ ಹಾಕಲಿದ್ದಾರೆ. ಹೀಗಾಗಿ, ಕಿಚ್ಚ ಮತ್ತು ಕುಮಾರಸ್ವಾಮಿ ಭೇಟಿ ರಾಜಕೀಯಕ್ಕಿಂ ಸಿನಿಮಾ ವಿಚಾರವಾಗಿ ಹೆಚ್ಚು ಮಹತ್ವ ಪಡರೆದುಕೊಂಡಿದೆ ಎನ್ನಲಾಗುತ್ತಿದೆ.

ಎಷ್ಟು ನಿಜಾನೋ ಕಾದುನೋಡಬೇಕು.?

ನಿಖಿಲ್ ಅಭಿನಯದ ಮೊದಲ ಚಿತ್ರಕ್ಕೆ ರಾಜಮೌಳಿ ಅವರ ತಂದೆ ವಿಜೇಂದ್ರ ಪ್ರಸಾದ್ ಕಥೆ ಬರೆದಿದ್ದರು. ರಾಜಮೌಳಿಯ ಅಸಿಸ್ಟಂಟ್ ಮಹದೇವ ಆಕ್ಷನ್ ಕಟ್ ಹೇಳಿದ್ದರು. ಕನ್ನಡದ ಜೊತೆ ತೆಲುಗಿನಲ್ಲೂ ಜಾಗ್ವಾರ್ ಸಿನಿಮಾ ಬಿಡುಗಡೆಯಾಗಿತ್ತು. ಹೀಗಾಗಿ, ರಾಜಮೌಳಿ ಮತ್ತು ತೆಲುಗು ಇಂಡಸ್ಟ್ರಿಯ ಜೊತೆ ನಿಖಿಲ್ ಸಂಬಂಧ ಚೆನ್ನಾಗಿದೆ. ಮೊದಲ ಸಿನಿಮಾದ ಮೂಲಕ ಟಾಲಿವುಡ್ ಮಂದಿಯನ್ನ ಕೂಡ ಆಕರ್ಷಿಸಿದ್ದಾರೆ ನಿಖಿಲ್. ಈ ಎಲ್ಲ ಅಂಶಗಳನ್ನ ಗಮನಿಸಿದ್ರೆ ರಾಜಮೌಳಿ, ನಿಖಿಲ್ ಗೆ ನಿರ್ದೇಶನ ಮಾಡಲು ಮುಂದಾದ್ರು ಅಚ್ಚರಿಯಿಲ್ಲ.

ಇಲ್ಲಿ 'ಸೀತಾರಾಮ ಕಲ್ಯಾಣ' ಅಲ್ಲಿ 'RRR'

ಸದ್ಯ, ಎ ಹರ್ಷ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಿಖಿಲ್ ಅಭಿನಯಿಸುತ್ತಿದ್ದಾರೆ. ಆ ಕಡೆ ರಾಜಮೌಳಿ, ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಜೊತೆ ಮಲ್ಟಿಸ್ಟಾರ್ ಸಿನಿಮಾ ಮಾಡ್ತಿದ್ದಾರೆ. ಬಹುಶಃ ಈ ಸಿನಿಮಾಗಳು ಮುಗಿದ ಮೇಲೆ ಏನಾದರೂ ನಿಖಿಲ್ ಜೊತೆ ಸಿನಿಮಾ ಮಾಡಬಹುದು.

'ಸೀತಾರಾಮ ಕಲ್ಯಾಣ'ಕ್ಕಾಗಿ ಬೆಂಗಳೂರಿಗೆ ಬಂದ 'ರನ್ನ'ನ ಅತ್ತೆ ಮಧೂ

English summary
According to Report telugu successful director ss rajamouli to direct Kannada Young hero nikhil kumar in 2019. now presently nikhil busy in seetharama kalyana in kannada and rajamouli busy in multistar movies in telugu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X