»   » ಹಾಲಿವುಡ್ ಅಂಗಳಕ್ಕೆ ಹಾರಿದ ಕನ್ನಡದ ನಿಖಿಲ್ ಕುಮಾರ್

ಹಾಲಿವುಡ್ ಅಂಗಳಕ್ಕೆ ಹಾರಿದ ಕನ್ನಡದ ನಿಖಿಲ್ ಕುಮಾರ್

Posted By:
Subscribe to Filmibeat Kannada

ಕನ್ನಡದಲ್ಲಿ ಮೊದಲ ಸಿನಿಮಾ ದಲ್ಲೇ ಯಶಸ್ಸು ಕಂಡ ನಿಖಿಲ್ ಕುಮಾರ್, ಮುಂದೆ ಯಾವ ಸಿನಿಮಾ ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿತ್ತು. ಆದರೆ 'ಹೆಬ್ಬುಲಿ' ಖ್ಯಾತಿಯ ಕೃ‍ಷ್ಣ ಅವರು ಈ ಕುತೂಹಲಕ್ಕೆ ಬ್ರೇಕ್ ಹಾಕಿದ್ದರು. ಆ ಸಿನಿಮಾದ ಹೆಸರೇನು, ಯಾವಾಗ ಚಿತ್ರೀಕರಣ ಆರಂಭವಾಗುತ್ತೆ ಅನ್ನೋ ಮಾಹಿತಿ ಮಾತ್ರ ಇನ್ನೂ ಹೊರಬಿದ್ದಿಲ್ಲ.[2016 ರಲ್ಲಿ ಭರವಸೆ ಮೂಡಿಸಿದ ಯುವನಟ ಯಾರು?]

'ಜಾಗ್ವಾರ್' ಚಿತ್ರದಲ್ಲಿ ಆಕ್ಷನ್ ಗಳ ಮೂಲಕ ತಮ್ಮ ಟ್ಯಾಲೆಂಟ್ ತೋರಿಸಿದ ನಿಖಿಲ್ ಕುಮಾರ್ ಬಗ್ಗೆ ಈಗ ಆಶ್ಚರ್ಯಕರ ಮಾಹಿತಿಯೊಂದು ಹೊರಬಿದ್ದಿದೆ. ಹಾಗೆ ನಿಖಿಲ್ ಕುಮಾರ್ ನಟಿಸಿದ್ದು ಒಂದೇ ಸಿನಿಮಾ ಆದರೂ ಅವರ ಮಹತ್ವಾಕಾಂಕ್ಷೆಗೆ ಮಿತಿಯಿಲ್ಲ ಎಂಬುದು ತಿಳಿದು ಬಂದಿದೆ. ನಟ ನಿಖಿಲ್ ಕುಮಾರ್ ಬಗ್ಗೆ ಕೇಳಿಬರುತ್ತಿರುವ ಹೊಸ ವಿಷಯ ಏನು? ಇಲ್ಲಿದೆ ಮಾಹಿತಿ..

ನಿಖಿಲ್ ಕುಮಾರ್ ಹಾಲಿವುಡ್ ಗೆ ಜಂಪ್

ಹೌದು, 'ಜಾಗ್ವಾರ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ನಿಖಿಲ್ ಈಗ ಹಾಲಿವುಡ್ ಪ್ರವೇಶ ಪಡೆದಿದ್ದಾರಂತೆ.['ನಿಖಿಲ್ ಕುಮಾರ್'ಗೆ ಆಕ್ಷನ್ ಕಟ್ ಹೇಳುವ ಕನ್ನಡದ ನಿರ್ದೇಶಕ ಯಾರು?]

ಹಾಲಿವುಡ್ ಚಿತ್ರದಲ್ಲಿ ನಿಖಿಲ್ ಅಭಿನಯಿಸುತ್ತಾರಾ?

ನಿಖಿಲ್ ಹಾಲಿವುಡ್ ಗೆ ಹಾರಿರುವುದಂತು ನಿಜ. ಯಾಕಂದ್ರೆ ಹಾಲಿವುಡ್ ನಿರ್ದೇಶಕರೊಬ್ಬರ ಜೊತೆಗೆ ಗೌಪ್ಯ ಒಪ್ಪಂದಕ್ಕೆ ನಿಖಿಲ್ ಕುಮಾರ್ ಸಹಿ ಹಾಕಿದ್ದರಂತೆ. ಈ ಯೋಜನೆ ಖಚಿತ ವಾಗುವವರೆಗೆ ಯಾವುದೇ ಮಾಹಿತಿ ಬಿಟ್ಟುಕೊಡುವಂತಿಲ್ಲವಂತೆ. ಹೀಗಂತ ನಿಖಿಲ್ ಸಿನಿಮಾಗಳ ಕಾರ್ಯಕಾರಿ ನಿರ್ಮಾಪಕ ಸುನಿಲ್ ಗೌಡ ಅವರು ಹೇಳಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿಯಲಾಗಿದೆ. ಆದರೆ ನಿಖಿಲ್ ಹಾಲಿವುಡ್ ಚಿತ್ರಗಳಲ್ಲಿ ನಟಿಸಲು ಸಹಿ ಹಾಕಿದ್ದಾರೋ ಅಥವಾ ಏಕೆ ಎಂಬ ಮಾಹಿತಿ ಇನ್ನೂ ಖಚಿತವಾಗಿಲ್ಲ.

ಹಾಲಿವುಡ್ ಸಿನಿಮಾ 2018 ಕ್ಕೆ ಶುರು

ನಿಖಿಲ್ ಕುಮಾರ್ ಹಾಲಿವುಡ್ ನಿರ್ದೇಶಕನ ಜೊತೆಗೆ ಸಹಿ ಹಾಕಿರುವ ಯೋಜನೆ ಕನ್ಫರ್ಮ್ ಆದಲ್ಲಿ, ಅವರ ಹಾಲಿವುಡ್ ಸಿನಿಮಾ 2018 ಜನವರಿ ಇಂದ ಚಿತ್ರೀಕರಣ ಆರಂಭವಾಗುವುದು ಪಕ್ಕಾ ಅಂತೆ.

ಈಗ ನಿಖಿಲ್ ಏನ್ಮಾಡ್ತಿದ್ದಾರೆ ?

ನಿಖಿಲ್ ಕುಮಾರ್ ಪ್ರಸ್ತುತ ದುಬೈ ನಲ್ಲಿ ಆಕ್ಷನ್ ದೃಶ್ಯಗಳ ತರಬೇತಿ ಪಡೆಯುತ್ತಿದ್ದಾರಂತೆ.

ನಿಖಿಲ್ ಕುಮಾರ್ ಕನ್ನಡ ಸಿನಿಮಾ ಯಾವಾಗ?

ನಿಖಿಲ್ ಅವರು ನಿರ್ದೇಶಕರಾದ ಎಸ್ ಕೃಷ್ಣ, ಹರ್ಷ, ಮತ್ತು ಚೇತನ್ ಕುಮಾರ್ ಅವರನ್ನು ಭೇಟಿ ಮಾಡಿ, ಒಂದು ಬಾರಿ ಕಥೆಗಳನ್ನು ಕೇಳಿದ್ದಾರಂತೆ. ಮತ್ತೆ ಕೆಲವು ಬಾರಿ ಚರ್ಚೆಗಳು ಆಗಿ ನಂತರ ಗ್ರೀನ್ ಸಿಗ್ನಲ್ ಕೊಡುತ್ತಾರಂತೆ. ಭಾಗಶಃ ಅವರ ಕನ್ನಡ ಚಿತ್ರದ ಬಗ್ಗೆ ಮಾರ್ಚ್‌ ನಲ್ಲಿ ಘೋಷಣೆ ಆಗಲಿದೆಯಂತೆ.

ಗಣರಾಜ್ಯೋತ್ಸವಕ್ಕೆ ಶುಭಕೋರಿದ ನಿಖಿಲ್

ನಿಖಿಲ್ ಕುಮಾರ್ 68 ನೇ ಗಣರಾಜ್ಯೋತ್ಸವಕ್ಕೆ ತಮ್ಮ ಅಭಿಮಾನಿಗಳನ್ನು ಕುರಿತು 'ಎಲ್ಲಾ ನನ್ನ ಸಹೋದರ ಮತ್ತು ಸಹೋದರಿಯರಿಗೆ ಬೆಳಗಿನ ಶುಭೋದಯಗಳು' ಎಂದು ಹೇಳಿ ಗಣರಾಜ್ಯೋತ್ಸವ ಕುರಿತು ತಮ್ಮ ಫೇಸ್‌ಬುಕ್ ಪೇಜ್ ನಲ್ಲಿ ಬರೆದು, ಶುಭಾಷಯಗಳನ್ನು ಸಹ ತಿಳಿಸಿದ್ದಾರೆ.

English summary
Nikhil Kumar is just one film old, but his ambitions aren’t limited. The actor, who debuted with Kannada and Telugu versions of Jaguar, has got a Hollywood break.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada