For Quick Alerts
  ALLOW NOTIFICATIONS  
  For Daily Alerts

  ಅಭಿಮತ: ಶೀರ್ಷಿಕೆಯಲ್ಲ, ನಿಮ್ಮ ಬುದ್ಧಿ ಬದಲಿಸಿಕೊಳ್ಳಿ

  By Mahesh
  |

  'ಉಪ್ಪಿ ಚಿತ್ರ ಬಸವಣ್ಣ ಶೀರ್ಷಿಕೆ ಕೊನೆಗೂ ಬದಲು', 'ಬಸವಣ್ಣ, ಬ್ರಾಹ್ಮಣ ಟೈಟಲ್ ಗೆ ಕೆಎಫ್ಸಿಸಿ ಆಕ್ಷೇಪ', ಟೈಟಲ್ ಇಲ್ಲದೆ ಉಪ್ಪಿ ಸಿನ್ಮಾ ರಿಲೀಸ್ ಎಂಬ ಲೇಖನಗಳಿಗೆ ಒನ್ ಇಂಡಿಯಾ ಕನ್ನಡ ಓದುಗರಿಂದ ಭರಪೂರ ಪ್ರತಿಕ್ರಿಯೆ ಸಿಕ್ಕಿದೆ. ಬಸವಣ್ಣ, ಬ್ರಾಹ್ಮಣ ಪರ -ವಿರೋಧ ಪ್ರತಿಕ್ರಿಯೆಗಳ ಜೊತೆಗೆ ಉಪೇಂದ್ರ ಅವರ ಕುರಿತ ಹಲವು ಪ್ರತಿಸ್ಪಂದನಗಳನ್ನು ಇಲ್ಲಿ ಹೆಕ್ಕಿ ನೀಡಲಾಗಿದೆ.

  ನಿರ್ದೇಶಕರ ಬೇಸರದ ನುಡಿ: ಟೈಟಲ್ ಇಲ್ಲದೆ ಸಿನ್ಮಾ ರಿಲೀಸ್ ಮಾಡೋಕೆ ನಾವು ರೆಡಿ. ಪ್ರೇಕ್ಷಕರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಪೂರ್ವಗ್ರಹ ಪೀಡಿತರಾಗಿ ಬರೀ ಟೈಟಲ್, ಪೊಸ್ಟರ್ ನೋಡಿ ಚಿತ್ರದ ಬಗ್ಗೆ ತಿರುಗಿಬಿದ್ದಿರುವುದು ಬೇಸರ ಮೂಡಿಸಿದೆ.

  ಬ್ರಾಹ್ಮಣ ಎಂದು ಟೈಟಲ್ ಇಟ್ಟರೆ ಅದಕ್ಕೆ ತಕ್ಕಂತೆ ಕಥೆ ಇರುತ್ತದೆ. ಬ್ರಾಹ್ಮಣರ ಅವಹೇಳನ ಮಾಡಲು ಹೊರಟಿಲ್ಲ. ದಂಡುಪಾಳ್ಯ ಹೆಸರಿಗೆ ತಕ್ಕಂತೆ ಕ್ರೈಂ ಸ್ಟೋರಿಯಾಗಿತ್ತು. ನಾವು ಮನರಂಜನೆ ನೀಡಲು ಬಂದಿರುವುದು ಚಿತ್ರದಿಂದ ಸಂಘರ್ಷ ಹುಟ್ಟು ಹಾಕಿ ಮಜಾ ತೆಗೆದುಕೊಳ್ಳುವ ಮನಸ್ಸು ನಮಗಿಲ್ಲ ಎಂದಿದ್ದಾರೆ

  ಶ್ರೀರಾಮ, ಕೃಷ್ಣ, ಶಿವ ಎಂದು ಟೈಟಲ್ ಬದಲು ಪಪ್ಪಿ, ಜಪ್ಪಿ, ಜಿಮ್ಮಿ, ಲಾರಿ ಬಸ್ಸು ಎಂದು ಹೆಸರಿಡಬೇಕಾಗುತ್ತದೆ. ಮುಂದೆ ಎಲ್ಲರಿಗೂ ಸಮಸ್ಯೆ ಆಗಲಿದೆ ಎಚ್ಚರ. ನಮ್ಮ ಮಕ್ಕಳಿಗೆ ಒಳ್ಳೆ ಹೆಸರು ದೇವರ ಹೆಸರು ಇಡುತ್ತೇವೆ. ಹಾಗೆ ಚಿತ್ರಕ್ಕೆ ಒಳ್ಳೆ ಟೈಟಲ್ ಇಟ್ಟು ಕೆಟ್ಟದಾಗಿ ತೋರಿಸಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.

  ಆದರೆ, ಓದುಗರ ಅಭಿಪ್ರಾಯ ಬೇರೆಯದೇ ಇದೆ. ಬುದ್ಧಿವಂತ ನಿರ್ದೇಶಕ, ನಟನ ಜೋಡಿಯಿಂದ ಉತ್ತಮ ಚಿತ್ರ ನಿರೀಕ್ಷೆಯಲ್ಲಿದ್ದವರಿಗೆ ಆರಂಭದಲ್ಲೇ ರಸಭಂಗವಾಗಿದೆ. ಅನಗತ್ಯ ವಿವಾದಗಳಿಗೆ ಸಹೃದಯ ಓದುಗರು ನೀಡಿದ ಅಭಿಮತ ಇಲ್ಲಿದೆ ನೋಡಿ...

  ಕನ್ನಡಿಗನ ಮಾತು

  ಕನ್ನಡಿಗನ ಮಾತು

  ಶ್ರೀನಿವಾಸರಾಜು ಮತ್ತು ಉಪೇಂದ್ರ, ಬಸವಣ್ಣ ಅಂದ್ರೆ ಕರ್ನಾಟಕದಲ್ಲಿ ಲಕ್ಷಾಂತರ ಜನಗಳ ಮನಸಲ್ಲಿ ಒಂದು ಕಲ್ಪನೆ ಇದೆ ಅದು ಏನಪಾ ಅಂದ್ರೆ ಶಾಂತವಾಗಿರೋ ಮುಖದಲ್ಲಿ ಹೊಳೆಯುವ ವಿಭೂತಿ, ಶುದ್ದತೆ ಸಂದೇಶ ಸಾರುವ ಬಿಳಿಯಾದ ಬಟ್ಟೆ.

  ನಿರ್ವಿಕಾರ, ಸುಪ್ರಕಾಶವಾದ ಲಿಂಗು.ಶಾಂತಿ ಮತ್ತು ಆನಂದದ ಪ್ರತೀಕವಾದ ರುದ್ರಾಕ್ಸಿ.ಈಗ ನೀವು ಮಾಡ್ತಾ ಇರೋದು ಏನು ಗೊತ್ತಾ? ಲಕ್ಷಾಂತರ ಜನಗಳ ಭಾವನೆಗಳಿಗೆ ಅವಮಾನ.ನಿಜವಾಗಲು ಒಳ್ಳೆ ಸುಸಂಕೃತ ಮನೆಯಲ್ಲಿ ಹುಟ್ಟಿದರೆ ಮೊದಲು ಹೆಸರು ಬದಲಾಯಿಸು.

  ರವಿ ಅವರ ಹೇಳಿಕೆ

  ರವಿ ಅವರ ಹೇಳಿಕೆ

  ಬಸವಣ್ಣನವರ ತತ್ವಗಳಿಗೆ ತಿಲಾಂಜಲಿ ಇಟ್ಟ ಯಡಿಯೂರಪ್ಪ ಇವರಿಗೆ ನಾಯಕ...ನಿಮಗೆ ನಾಚಿಕೆ ಆಗಲ್ವಾ? ಹೋಮ ಹವನ ಜ್ಯೋತಿಷ್ಯ ಮಾಟ ಮಂತ್ರ ಮಾಡಿದವರು ಬಸವಣ್ಣ'ನವರಿಗೆ ಅವಮಾನ ಮಾಡಲಿಲ್ವ?

  ವಿಧಾನಸಭೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ವೀರಶೈವ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಅವರ ಕೂಗಾಟದ ನಂತರ ಕೆಎಫ್ ಸಿಸಿ ಕೂಡಾ ತಕ್ಷಣವೇ ಟೈಟಲ್ ಗೆ ನಕಾರ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

  ರಮೇಶ್ ನಾಯಕ ಹೇಳಿಕೆ

  ರಮೇಶ್ ನಾಯಕ ಹೇಳಿಕೆ

  ನೀವು ಏನಾದ್ರು ಈ ಹೆಸರಿನ ಚಿತ್ರ ತೆಗೆದರೆ ಇಡಿ ಉತ್ತರ ಕರ್ನಾಟಕದ ಜನ ಹೋರಾಟ ಮಾಡಬೇಕಾಗುತ್ತೆ ಹುಷಾರ್. ಇಂತ ದಾರ್ಶನಿಕರ ಹೆಸರು ಇಟ್ಟು ಚಿತ್ರ ಮಾಡ್ತಿದ್ದೀರ ನಿಮಗೆ ನಾಚಿಕೆಯಾಗೋದಿಲ್ವ. ಬೇರೆ ಹೆಸರೇ ಸಿಗಲಿಲ್ಲ. ಇದನ್ನ ಮಾಡಿದರೆ ನಾವು ಸುಮ್ಮನಿರೊಲ್ಲ.

  ರಾಘವೇಂದ್ರ ನಾವಡ

  ರಾಘವೇಂದ್ರ ನಾವಡ

  ಶ್ರೀ ಶಾಂತಾರಾಧ್ಯ ಸ್ವಾಮಿಗಳ ಈ ಮಾತು ಅಕ್ಷರಶಃ ನಿಜ 'ಬಸವಣ್ಣ' ಎಂಬ ದಾರ್ಶನಿಕನ ಹಾಗು ಸಚ್ಚಾರಿತ್ರ್ಯ ಇರುವ ವ್ಯಕ್ತಿಯ ಹೆಸರನ್ನು ಒಂದು ಅರ್ಥಹೀನ ಕಮರ್ಷಿಯಲ್ ಸಿನೆಮಾಗೆ ಶೀರ್ಷಿಕೆಯಾಗಿ ಬಳಸಿ ಅದನ್ನ ತೀರಾ ಅಸಹ್ಯಕರ ರೀತಿಯಲ್ಲಿ ಬಳಸಲು ಪ್ರಯತ್ನ ಮಾಡ್ತಾ ಇರುವುದು ಖಂಡನಾರ್ಹ.

  ಸಮಾಜಕ್ಕೆ ಉತ್ತಮ ನೈತಿಕ ಸಂದೇಶ ಕೊಡುವ ಸದುದ್ದೇಶ ಇದ್ದ ಪಕ್ಷದಲ್ಲಿ, ಬಸವಣ್ಣನ ಶೀರ್ಷಿಕೆಯಲ್ಲೇ ಅವರ ಕುರಿತಾದ ಒಂದು ಒಳ್ಳೇ ಕಲಾತ್ಮಕ ಚಿತ್ರವನ್ನು ಮಾಡಿ, ಅವರ ಆಶೋತ್ತರಗಳನ್ನು ಕನ್ನಡ ನಾಡಿನ ಜನರಿಗೆ ಮಾತ್ರವಲ್ಲ, ಇಡೀ ವಿಶ್ವದ ಜನತೆಗೆ ಸಾರಿ ಹೇಳಿ.

  TG ಹೇಳಿಕೆ

  TG ಹೇಳಿಕೆ

  The great Basavanna fought his whole life to remove "cast-ism" from this society and make it a better place to live for everyone.. and now these stupid people are fighting so much for cast-ism using Basavanna's name only.

  This top-to-bottom corrupted BSY speaks about Basavanna as if its his birth right to speak about Basavanna, thought he doesn't even follow a single principle that he thought.

  And the people who never care to read/understand what he has done, because they born in that caste so its their birth right to speak about him. People same on you.. before using his name, understand his principles.

  ವಿವೇಕ ಅವರ ವಾಣಿ

  ವಿವೇಕ ಅವರ ವಾಣಿ

  ಬುದ್ಧಿವಂತ ಉಪೇಂದ್ರ ನಾನು ನಿಮ್ಮ ಅಭಿಮಾನಿ.ಈ ನಡುವೆ ನೀವು ಬಹಳ ದುಡ್ಡಿಗೆ ಪ್ರಾಮುಖ್ಯತೆ ಕೊಡುತ್ತಿದ್ದೀರಾ, ದಯವಿಟ್ಟು ಇಂಥ ಅಮಾನುಷ ಕೆಲಸ ಮಾಡಬೇಡಿ.ಬಸವಣ್ಣನವರ ಹೆಸರು ಉಪಯೋಗಿಸಿ ಬಸವಣ್ಣ ಹೇಗಿದರೋ ಹಾಗೆ ಸಿನಿಮಾ ತೆಗಿರಿ.. ಬಹುಸಂಖ್ಯ ಜನರ ಮನಸ್ಸು ನೋಯಿಸಿ ಸಿನಿಮಾದ ಪ್ರಚಾರ ತಗೊಂಡು ದುಡ್ದು ಮಾಡೋ ಬುದ್ಧಿವಂತನಾಗಬೇಡಿ. ಈ ಸಿನಿಮಾದ ನಿರ್ದೇಶಕ ಹೇಳ್ತಾನೆ ನಮಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇಲ್ವಾ ಅಂತ ..ಪೋಸ್ಟರ್ ನಲ್ಲಿ ಚಿತ್ರ ಹಾಕೋ ಹಕ್ಕು ಇಲ್ವಾ ಅಂತಾನೆ ಯಾಕೆ ಇವರ ಮನೆಯವರ ಹೆಸರು ಚಿತ್ರಗಳನ್ನ ಉಪಯೋಗಿಸಿ ಯಾರಾದರು ಸಿನಿಮಾ ತೆಗಿಯಬಹುದೇ ಕೇಳಿ

  English summary
  Here is Oneindia Kananda readers response to Director Srinivas Raju and Upendra's decision to change Veera Basavanna title and release movie without title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X