For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೂ ಮುಂಚೆ ಕಲೆಕ್ಷನ್ ಶುರು: 'ಪೈಲ್ವಾನ್' ಖಾತೆಗೆ 14 ಕೋಟಿ.!

  |
  ಪೈಲ್ವಾನ್ ತಂಡದಿಂದ ಅಚ್ಚರಿಯ ಸುದ್ದಿ | FILMIBEAT KANNADA

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ಬರಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಪೈಲ್ವಾನ್ ಈಗಾಗಲೇ ಬಿಸಿನೆಸ್ ಆರಂಭಿಸಿದೆ.

  ದಕ್ಷಿಣ ಭಾರತದ ನಾಲ್ಕು ಭಾಷೆ ಸೇರಿದಂತೆ ಉತ್ತರ ಭಾರತದ ಮರಾಠಿ, ಬೋಜ್ ಪುರಿ, ಬೆಂಗಾಳಿ, ಪಂಜಾಬಿ ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ. ಈ ಮಧ್ಯೆ ಬಾಲಿವುಡ್ ನಿಂದ ಪೈಲ್ವಾನ್ ಚಿತ್ರಕ್ಕೆ ಭರ್ಜರಿ ಅಫರ್ ಬಂದಿದೆಯಂತೆ.

  ಹಿಂದಿ ಭಾಷೆಯ ಸ್ಯಾಟ್ ಲೈಟ್ ಹಕ್ಕು ಹಾಗೂ ಡಿಜಿಟಲ್ ಹಕ್ಕು ಸೇರಿ 14 ಕೋಟಿ ರೂಪಾಯಿಗೆ ಬೇಡಿಕೆ ಬಂದಿದೆಯಂತೆ. ಅದ್ಹಾಗೆ, ಪೈಲ್ವಾನ್ ಚಿತ್ರದ ಸುಮಾರು 50 ನಿಮಿಷದ ವಿಶ್ಯೂಲ್ ನೋಡಿ ಮೆಚ್ಚಿಕೊಂಡಿರುವ ಬಾಲಿವುಡ್ ಮಂದಿ ಥ್ರಿಲ್ ಆಗಿದ್ದಾರಂತೆ

  ಹೊಸ ಇತಿಹಾಸ ಸೃಷ್ಟಿಸಿದ 'ಪೈಲ್ವಾನ್': ಇದು ಕನ್ನಡದಲ್ಲಿ ಮೊದಲು

  ಮತ್ತೊಂದೆಡೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಪೈಲ್ವಾನ್ ಟಿವಿ ಹಕ್ಕಿಗೂ ಭಾರಿ ಬೇಡಿಕೆ ಇದೆಯಂತೆ. ಬಟ್, ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ ಕೆಲಸ ಆಗುತ್ತಿರುವುದರಿಂದ ಎಲ್ಲವೂ ಮಾತುಕತೆ ಹಂತದಲ್ಲಿದೆಯಂತೆ. ಯಾವುದು ಖಚಿತವಾಗಿಲ್ಲ ಎಂಬ ಮಾಹಿತಿ ಇದೆ.

  ಅಂದು 'ಪೈಲ್ವಾನ್' ಕಾಲೆಳೆದವರಿಗೆ ಇಂದು ಮಾಂಜ ಕೊಟ್ಟ 'ಹೆಬ್ಬುಲಿ'

  ಕುಸ್ತಿಪಟು ಪಾತ್ರದಲ್ಲಿ ಸುದೀಪ್ ಅಭಿನಯಿಸಿದ್ದು, ಆಕಾಂಕ್ಷ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದು, ಕಬೀರ್ ದುಹಾನ್ ಸಿಂಗ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹೆಬ್ಬುಲಿ ನಂತರ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಅವರದ್ದೇ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ.

  English summary
  Kiccha sudeep starrer Pailwaan movie have huge demand in hindi. TV and digital rights for Hindi dubbed version offered Rs 14 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X