For Quick Alerts
  ALLOW NOTIFICATIONS  
  For Daily Alerts

  ತೆಲುಗು ಸಿನಿಮಾ ಫ್ಲಾಪ್ ಆಗಲು ಕಾರಣ ಪವನ್ ಕಲ್ಯಾಣ್ ಅಂತೆ: ಇದೆಂಥಾ ನಂಬಿಕೆ!

  |

  ನಟ ಪವರ್‌ಸ್ಟಾರ್ ಪವನ್ ಕಲ್ಯಾಣ್ ಸದ್ಯ ಕಮ್ ಬ್ಯಾಕ್ ಮಾಡಿ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪವನ್ ಕಲ್ಯಾಣ್ ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಹಿಟ್ ಲಿಸ್ಟ್ ಸೇರಿವೆ. ಇನ್ನು ಸಾಕಷ್ಟು ಹೊಸ ಹೊಸ ಸಿನಿಮಾಗಳನ್ನು ಮಾಡಲು ಕೂಡ ಪವನ್ ಕಲ್ಯಾಣ್ ಮುಂದಾಗಿದ್ದಾರೆ.

  ಪವನ್ ಕಲ್ಯಾಣ್ ರಾಜಕೀಯದ ಸಲುವಾಗಿ ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಮತ್ತೆ ವಾಪಸ್ ಆದ ಪವನ್ ಕಲ್ಯಾಣ್ ಕ್ರೇಜ್ ಮಾತ್ರ ಹಾಗೆಯೇ ಇದೆ. ಇದೇ ಕಾರಣಕ್ಕೆ ನಟ ಪವನ್ ಕಲ್ಯಾಣ್ ಸಿನಿಮಾಗಳು ಮತ್ತೆ ಗೆಲುವಿನ ಹಾದಿ ಹಿಡಿದಿದೆ.

  ರೈತರ ಕಲ್ಯಾಣಕ್ಕೆ 35 ಲಕ್ಷ ದೇಣಿಗೆ ನೀಡಿದ ಪವನ್ ಕಲ್ಯಾಣ್ ಕುಟುಂಬ: ಚಿರಂಜೀವಿ ಮೌನವೇಕೆ?ರೈತರ ಕಲ್ಯಾಣಕ್ಕೆ 35 ಲಕ್ಷ ದೇಣಿಗೆ ನೀಡಿದ ಪವನ್ ಕಲ್ಯಾಣ್ ಕುಟುಂಬ: ಚಿರಂಜೀವಿ ಮೌನವೇಕೆ?

  ಆದರೆ ಇದ್ದಕ್ಕಿದ್ದ ಹಾಗೆ ಪವನ್ ಕಲ್ಯಾಣ್ ಮೇಲೆ ಆರೋಪ ಒಂದು ಕೇಳಿ ಬಂದಿದೆ. ನಟ ಪವನ್ ಕಲ್ಯಾಣ್ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಹೊಸ ಗುಸು ಗುಸು ಹಬ್ಬಿದೆ. ಪವನ್ ಕಲ್ಯಾಣ್ ಅದೃಷ್ಟ ಸರಿ ಇಲ್ಲವಂತೆ. ಪವನ್ ಕಲ್ಯಾಣ್‌ರಿಂದಾಗಿ ಹಲವು ಸಿನಿಮಾಗಳು ಫ್ಲಾಪ್ ಆಗಿವೆ ಎನ್ನುವ ಸಮಾಚಾರ ಹಬ್ಬಿದೆ.

  ಪವನ್ ಅವ್ರದ್ದು ಐರನ್ ಲೆಗ್ ಅಂತೆ?

  ಪವನ್ ಅವ್ರದ್ದು ಐರನ್ ಲೆಗ್ ಅಂತೆ?

  ನಟ ಪವನ್ ಕಲ್ಯಾಣ್ ಸಿನಿಮಾರಂಗದಲ್ಲಿ ದಶಕಗಳಿಂದ ನಾಯಕನಾಗಿ ಮಿಂಚುತ್ತಿದ್ದಾರೆ. ಸೂಪರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ ಪವರ್‌ ಫುಲ್‌ ಸಿನಿಮಾಗಳಿಂದ ಪವರ್‌ ಸ್ಟಾರ್ ಅಂತಲೇ ಹೆಸರು ಮಾಡಿದ್ದಾರೆ. ಆದರೆ, ಚಿತ್ರರಂಗದಲ್ಲಿ ಈಗ ಪವನ್ ಕಲ್ಯಾಣ್ ಬಗ್ಗೆ ಅಪಸ್ವರ ಕೇಳಿ ಬರ್ತಿದೆ. ನಟ ಪವನ್ ಕಲ್ಯಾಣ್ ಅವ್ರದ್ದು ಐರನ್ ಲೆಗ್ ಎನ್ನುವ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಬೇರೆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿರುವುದು. ಅದು ಹೇಗೆ ಎನ್ನುವುದನ್ನು ಮುಂದೆ ಓದಿ.

  ಮಹೇಶ್‌ ಬಾಬುಗಾಗಿ ಪವನ್ ಕಲ್ಯಾಣ್ ಸಿನಿಮಾ ಬಿಟ್ಟ ಪೂಜಾ ಹೆಗ್ಡೆ!ಮಹೇಶ್‌ ಬಾಬುಗಾಗಿ ಪವನ್ ಕಲ್ಯಾಣ್ ಸಿನಿಮಾ ಬಿಟ್ಟ ಪೂಜಾ ಹೆಗ್ಡೆ!

  ಪವನ್ ಕಾರ್ಯಕ್ರಮಕ್ಕೆ ಹೋದ್ರೆ ಫ್ಲಾಪ್!

  ಪವನ್ ಕಾರ್ಯಕ್ರಮಕ್ಕೆ ಹೋದ್ರೆ ಫ್ಲಾಪ್!

  ನಟ ಪವನ್ ಕಲ್ಯಾಣ್ ಕಮ್ ಬ್ಯಾಕ್ ಬಳಿಕ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದು, ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಾರೆ. ಹಾಗೆ ಹಲವು ಸಿನಿಮಾಗಳ ಪ್ರೀ-ರಿಲೀಸ್ ಕಾರ್ಯಕ್ರಮಗಳಲ್ಲೂ ಕೂಡ ಭಾಗಿ ಆಗಿದ್ದಾರೆ. ಹೀಗೆ ಪವನ್ ಕಲ್ಯಾಣ್ ಅತಿಥಿಯಾಗಿ ಹಲವು ಸಿನಿಮಾ ಕಾರ್ಯಕ್ರಮಗಳಿಗೆ ಹೋಗಿದ್ದಾರೆ. ಪವನ್ ಕಲ್ಯಾಣ್ ಅತಿಥಿಯಾಗಿ ಹೋಗಿದ್ದ ಹಲವು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋತಿವೆ. ಇದಕ್ಕೆ ಕಾರಣ ಪವನ್ ಕಲ್ಯಾಣ್ ಐರನ್ ಲೆಗ್ ಅಂತೆ.

  ಚಿರು, ನಾನಿ, ರವಿತೇಜ ಸಿನಿಮಾಗಳು ಫ್ಲಾಪ್!

  ಚಿರು, ನಾನಿ, ರವಿತೇಜ ಸಿನಿಮಾಗಳು ಫ್ಲಾಪ್!

  ಇತ್ತೀಚೆಗೆ ನಟ ನಾನಿ ಅಭಿನಯದ 'ಅಂತೆ ಸುಂದರನಿಕಿ' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಫ್ಲಾಪ್ ಸಿನಿಮಾಗಳ ಲಿಸ್ಟ್ ಸೇರಿದೆ. ಈ ಚಿತ್ರದ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಮುಖ್ಯ ಅತಿಥಿಯಾಗಿ ಮಿಂಚಿದ್ದರು. ಇನ್ನು ಈ ಚಿತ್ರಕ್ಕೂ ಮೊದಲು ರವಿತೇಜ ಅಭಿನಯದ 'ನೆಲ ಟಿಕೆಟ್', ಚಿರಂಜೀವಿ ಸೈರಾ ನರಸಿಂಹ ರೆಡ್ಡಿ, ಸಾಯಿ ಧರಂ ತೇಜ ಅಭಿನಯದ 'ರಿಪಬ್ಲಿಕ್' ಸಿನಿಮಾಗಳ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಚಿತ್ರಗಳು ಕೂಡ ಫ್ಲಾಪ್ ಲಿಸ್ಟ್‌ ಸೇರಿವೆ. ಅಂತು ಕೊಂಡ ಮಟ್ಟಿಗೆ ದೊಡ್ಡ ಯಶಸ್ಸು ಕಂಡಿಲ್ಲ. ಹಾಗಾಗಿ ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಎಂಬಂತೆ, ಇದಕ್ಕೆಲ್ಲಾ ಪವನ್ ಕಲ್ಯಾಣ್ ಬ್ಯಾಕ್ ಲಕ್ ಕಾರಣ ಎನ್ನಲಾಗುತ್ತಿದೆ.

  ಪವನ್ ಕಲ್ಯಾಣ್ ಪುತ್ರ ಅಕಿರಾ ಪಿಯಾನೋ ನುಡಿಸುವುದರಲ್ಲಿ ಎಕ್ಸ್‌ಪರ್ಟ್!ಪವನ್ ಕಲ್ಯಾಣ್ ಪುತ್ರ ಅಕಿರಾ ಪಿಯಾನೋ ನುಡಿಸುವುದರಲ್ಲಿ ಎಕ್ಸ್‌ಪರ್ಟ್!

  ಹರಿಹರ ವೀರ ಮಲ್ಲು ಅವತಾರವೆತ್ತಲಿರೋ ನಟ!

  ಹರಿಹರ ವೀರ ಮಲ್ಲು ಅವತಾರವೆತ್ತಲಿರೋ ನಟ!

  ಕಮ್ ಬ್ಯಾಕ್ ಬಳಿಕ 'ವಕೀಲ್ ಸಾಬ್' ಮತ್ತು 'ಭೀಮ್ಲಾ ನಾಯಕ್' ಚಿತ್ರದ ಮೂಲಕ ಪವನ್ ಕಲ್ಯಾಣ್ ಯಶಸ್ಸು ಕಂಡಿದ್ದಾರೆ. ಹಾಗಾಗಿ ಮತ್ತೆ ಪವನ್‌ಗೆ ಸಾಕಷ್ಟು ಬೇಡಿಕೆ ಹೆಚ್ಚಾಗಿದೆ. ಸದ್ಯ ಕಲ್ಯಾಣ್ 'ಹರಿಹರ ವೀರ ಮಲ್ಲು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೇಲು ಸಾಕಷ್ಟು ಕುತೂಹಲ ಮೂಡಿದೆ. ಈ ಸಿನಿಮಾ ಬಳಿಕ ಮತ್ಯಾವ ಅವತಾರದಲ್ಲಿ ಪವನ್ ಕಲ್ಯಾಣ್ ಬರಲಿದ್ದಾರೆ ಎನ್ನುವ ಬಗ್ಗೆ ನೋಡ್ಬೇಕಿದೆ.

  English summary
  Pawan Kalyan is The Reason For Chiranjeevi, Naani, Ravitheja Movies Flop, Know more,
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X