For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ನಿರಾಸೆ ಮಾಡಿದ ಪವನ್ ಕಲ್ಯಾಣ್!

  |

  ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಮತ್ತೆ ಬಣ್ಣ ಹಚ್ಚಲು ತಯಾರಾಗಿದ್ದಾರೆ. ಆದರೆ, ಕಂಬ್ಯಾಕ್ ಸಿನಿಮಾ ಯಾವುದು ಎನ್ನುವುದು ಅಧಿಕೃತವಾಗಿ ಅಂತಿಮವಾಗಿಲ್ಲ. ಸದ್ಯದ ಮಟ್ಟಿಗೆ ಬಾಲಿವುಡ್ ಹಿಟ್ ಸಿನಿಮಾ ಪಿಂಕ್ ರೀಮೇಕ್ನಲ್ಲಿ ಪಿಕೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  ಈ ಚಿತ್ರಕ್ಕಾಗಿ ಸುಮಾರು 40 ಕೋಟಿವರೆಗೂ ಸಂಭಾವನೆ ನೀಡಲಾಗುತ್ತಿದೆ. ಜೊತೆಗೆ ಚಿತ್ರದ ಲಾಭದಲ್ಲೂ ಷೇರು ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಆದ್ರೀಗ, ಪಿಂಕ್ ರೀಮೇಕ್ನಲ್ಲಿ ನಟಿಸಲು ಪವನ್ ಕಲ್ಯಾಣ್ ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿ ಚರ್ಚೆಯಾಗ್ತಿದೆ. ಈ ಚಿತ್ರವನ್ನ ದಿಲ್ ರಾಜು ಮತ್ತು ಬೋನಿ ಕಪೂರ್ ಜಂಟಿ ನಿರ್ಮಾಣ ಮಾಡಲು ಚಿಂತಿಸಿದ್ದರು.

  ಸೌತ್ ಚಿತ್ರರಂಗದ ಮತ್ತೊಂದು ಭಾಷೆಗೆ 'ಪಿಂಕ್ ರಿಮೇಕ್': ಪವರ್ ಸ್ಟಾರ್ ನಾಯಕಸೌತ್ ಚಿತ್ರರಂಗದ ಮತ್ತೊಂದು ಭಾಷೆಗೆ 'ಪಿಂಕ್ ರಿಮೇಕ್': ಪವರ್ ಸ್ಟಾರ್ ನಾಯಕ

  ಕಂಬ್ಯಾಕ್ ಸಿನಿಮಾಗಾಗಿ ರಾಜಕೀಯ ಕಥೆ ಆಧರಿತ ಸಿನಿಮಾ ಮಾಡಲು ಪವನ್ ಆಸಕ್ತಿ ಹೊಂದಿದ್ದು, ಅದಕ್ಕಾಗಿ ಸ್ಕ್ರಿಪ್ಟ್ ಹುಡುಕುತ್ತಿದ್ದಾರಂತೆ. ಹಾಗಾಗಿ, ಪಿಂಕ್ ರೀಮೇಕ್ನಿಂದ ದೂರು ಉಳಿಯಲು ನಿರ್ಧರಿಸಿದ್ದಾರೆ ಎಂಬ ಮಾತು ಟಾಲಿವುಡ್ನಲ್ಲಿ ಕೇಳಿ ಬಂದಿದೆ.

  ಪವನ್ ಕಲ್ಯಾಣ್ ಕಂಬ್ಯಾಕ್ ಗೆ ಭಾರಿ ಸಂಭಾವನೆ ಜೊತೆ ಷರತ್ತು!ಪವನ್ ಕಲ್ಯಾಣ್ ಕಂಬ್ಯಾಕ್ ಗೆ ಭಾರಿ ಸಂಭಾವನೆ ಜೊತೆ ಷರತ್ತು!

  ಮತ್ತೊಂದೆಡೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡಿದ್ದ ಸುರೇಂದರ್ ರೆಡ್ಡಿ ಜೊತೆ ಪವನ್ ಕಲ್ಯಾಣ್ ಸಿನಿಮಾ ಮಾಡಬಹುದು ಎಂಬ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಬಂಡವಾಳ ಹಾಕಲು ಮುಂದಾಗಿದ್ದಾರಂತೆ. ಇದುವರೆಗೂ ಇದ್ಯಾವುದು ಪಕ್ಕಾ ಆಗಿಲ್ಲ. ಹಾಗಾಗಿ, ಸದ್ಯಕ್ಕೆ ತೆಲುಗಿನ ಪಿಂಕ್ ರೀಮೇಕ್ನಲ್ಲಿ ಪವನ್ ಕಲ್ಯಾಣ್ ಕಾಣಿಸುವುದು ಅನುಮಾನ?

  English summary
  Tollywood star Pawan Kalyan not interested to do Bollywood super hit movie pink remake in telugu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X