For Quick Alerts
  ALLOW NOTIFICATIONS  
  For Daily Alerts

  28ನೇ ಚಿತ್ರಕ್ಕಾಗಿ ಪವನ್ ಕಲ್ಯಾಣ್ ಪಡೆದ ಸಂಭಾವನೆ 60 ಕೋಟಿ!

  |

  ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಪವನ್ ಕಲ್ಯಾಣ್ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ರಾಜಕೀಯಕ್ಕೆ ಹೋದ್ಮೇಲೆ ಮೂರು ವರ್ಷ ಯಾವುದೇ ಸಿನಿಮಾ ಮಾಡಿಲ್ಲ. ಆಮೇಲೆ 'ವಕೀಲ್ ಸಾಬ್' ಚಿತ್ರದೊಂದಿಗೆ ಕಂಬ್ಯಾಕ್ ಮಾಡಿದರು. ಬಾಲಿವುಡ್‌ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಈ ಚಿತ್ರ ನಿರ್ಮಿಸಿದ್ದು, ಪವನ್ ಕಲ್ಯಾಣ್‌ಗೆ ಭಾರಿ ಸಂಭಾವನೆ ಕೊಟ್ಟಿದ್ದರು. ಮೂರು ವರ್ಷದ ನಂತರ ಮತ್ತೆ ಕಂಬ್ಯಾಕ್ ಮಾಡಿದ ಕಾರಣಕ್ಕಾಗಿ ದಾಖಲೆಯ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನುವುದು ತೆಲುಗು ಮಾಯಾನಗರಿಯಲ್ಲಿ ಹೆಚ್ಚು ಸದ್ದು ಮಾಡಿತ್ತು.

  ವಕೀಲ್ ಸಾಬ್ ಚಿತ್ರದ ಸಕ್ಸಸ್ ನಂತರ ಪವನ್ ಕಲ್ಯಾನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಪ್ರಸ್ತುತ, ಮಲಯಾಳಂ ಹಿಟ್ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ರಿಮೇಕ್‌ನಲ್ಲಿ ನಟಿಸುತ್ತಿದ್ದು ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿದೆ. ಭಿಮ್ಲಾ ನಾಯಕ್ ಎಂದು ಈ ಚಿತ್ರಕ್ಕೆ ಹೆಸರಿಟ್ಟಿದ್ದು, ರಾಣಾ ದಗ್ಗುಬಾಟಿ ಸಹ ಅಭಿನಯಿಸುತ್ತಿದ್ದಾರೆ.

  ಆಧ್ಯಾತ್ಮ ಜೀವಿ ಕಲ್ಯಾಣ್ ಬಾಬು 'ಪವರ್ ಸ್ಟಾರ್' ಪವನ್ ಕಲ್ಯಾಣ್ ಆಗಿದ್ದು ಹೇಗೆ?ಆಧ್ಯಾತ್ಮ ಜೀವಿ ಕಲ್ಯಾಣ್ ಬಾಬು 'ಪವರ್ ಸ್ಟಾರ್' ಪವನ್ ಕಲ್ಯಾಣ್ ಆಗಿದ್ದು ಹೇಗೆ?

  ಅದಾದ ಮೇಲೆ ಕ್ರಿಶ್ ಜೊತೆ ಹೊಸ ಸಿನಿಮಾ ಆರಂಭಿಸಲಿದ್ದಾರೆ. ಈ ಚಿತ್ರದ ಬಳಿಕ 28ನೇ ಪ್ರಾಜೆಕ್ಟ್‌ಗೆ ಚಾಲನೆ ಕೊಡಲಿದ್ದಾರೆ. ಈಗ PSPK28 ಚಿತ್ರದ ಸಂಭಾವನೆ ಭಾರಿ ಸದ್ದು ಮಾಡ್ತಿದೆ. ಮುಂದೆ ಓದಿ...

  28ನೇ ಚಿತ್ರಕ್ಕೆ 60 ಕೋಟಿ?

  28ನೇ ಚಿತ್ರಕ್ಕೆ 60 ಕೋಟಿ?

  'ಗಬ್ಬರ್ ಸಿಂಗ್' ನಿರ್ದೇಶನದ ಮಾಡಿದ್ದ ಹರೀಶ್ ಶಂಕರ್ ನಿರ್ದೇಶನದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಈ ಚಿತ್ರದ ಪೂರ್ವ ತಯಾರಿ ನಡೆದಿದ್ದು, ಪವನ್ ಕಲ್ಯಾಣ್ ಕಾಲ್‌ಶೀಟ್ ಸಹ ನಿರ್ಮಾಪಕರು ಪಡೆದುಕೊಂಡಿದ್ದಾರೆ. ಸದ್ಯದ ವರದಿಗಳ ಪ್ರಕಾರ ಈ ಚಿತ್ರಕ್ಕಾಗಿ ಪವರ್ ಸ್ಟಾರ್ ಬರೋಬ್ಬರಿ 60 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

  'ಪಿಂಕ್' ಚಿತ್ರಕ್ಕೂ ಅಷ್ಟೇ ಸಂಭಾವನೆ

  'ಪಿಂಕ್' ಚಿತ್ರಕ್ಕೂ ಅಷ್ಟೇ ಸಂಭಾವನೆ

  ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ ಸಿನಿಮಾ ವಕೀಲ್ ಸಾಬ್. ರಾಜಕೀಯಕ್ಕೆ ಹೋದ್ಮೇಲೆ ಪವನ್ ಮತ್ತೆ ಸಿನಿಮಾಗಳನ್ನೇ ಮಾಡುವುದಿಲ್ಲ ಎನ್ನುವ ಅಭಿಪ್ರಾಯ ಹುಟ್ಟಿಕೊಂಡಿತ್ತು. ಆದರೆ, ಎಲೆಕ್ಷನ್‌ನಲ್ಲಿ ಸೋತ ಮೇಲೆ ಮತ್ತೆ ಸಿನಿಮಾ ಇಂಡಸ್ಟ್ರಿಗೆ ಬರುವುದು ಪವರ್ ಸ್ಟಾರ್‌ಗೆ ಅನಿವಾರ್ಯವೂ ಆಯಿತು. ಆಗ ಮಾಡಿದ ವಕೀಲ್ ಸಾಬ್ ಚಿತ್ರಕ್ಕಾಗಿ ಚಿರಂಜೀವಿ ಸಹೋದರ 60 ಕೋಟಿ ಸಂಭಾವನೆ ಪಡೆದಿದ್ದರಂತೆ.

  'ಪಿಂಕ್' ರೀಮೇಕ್ ಗಾಗಿ ಪವನ್ ಕಲ್ಯಾಣ್ ಪಡೆಯುತ್ತಿರುವ ಸಂಭಾವನೆ ಎಷ್ಟು ಅಂತ ಗೊತ್ತಾದ್ರೆ ಕಣ್ಣರಳಿಸುತ್ತೀರಾ.!'ಪಿಂಕ್' ರೀಮೇಕ್ ಗಾಗಿ ಪವನ್ ಕಲ್ಯಾಣ್ ಪಡೆಯುತ್ತಿರುವ ಸಂಭಾವನೆ ಎಷ್ಟು ಅಂತ ಗೊತ್ತಾದ್ರೆ ಕಣ್ಣರಳಿಸುತ್ತೀರಾ.!

  ಮೈತ್ರಿ ಮೂವಿ ಮೇಕರ್ಸ್

  ಮೈತ್ರಿ ಮೂವಿ ಮೇಕರ್ಸ್

  ತೆಲುಗಿನ ದೊಡ್ಡ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. 'ಸರ್ಕಾರು ವಾರಿ ಪಾಟ', 'ಪುಷ್ಪ' ಅಂತಹ ಚಿತ್ರಗಳನ್ನು ನಿರ್ಮಿಸುತ್ತಿರುವ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರು ಪವನ್ ಕಲ್ಯಾಣ್ ಜೊತೆ ಕೈ ಜೋಡಿಸಿದ್ದು, ಒಪ್ಪಂದ ಸಹ ಮುಗಿಸಿದ್ದಾರೆ. ಸದ್ಯಕ್ಕೆ ಎಷ್ಟು ದಿನ ಕಾಲ್‌ಶೀಟ್ ಕೊಟ್ಟಿದ್ದಾರೆ, ಯಾವಾಗನಿಂದ ಚಿತ್ರೀಕರಣ ಪ್ರಾರಂಭ ಎನ್ನುವ ಬಗ್ಗೆ ಮಾಹಿತಿ ಇಲ್ಲ.

  ಹರಿ ಹರಿ ವೀರ ಮಲ್ಲು

  ಹರಿ ಹರಿ ವೀರ ಮಲ್ಲು

  'ಭಿಮ್ಲಾ ನಾಯಕ್' ಚಿತ್ರೀಕರಣ ಮುಗಿಸುತ್ತಿದ್ದಂತೆ ನಿರ್ದೇಶಕ ಕ್ರಿಶ್ ಜೊತೆ 'ಹರಿ ಹರ ವೀರ ಮಲ್ಲು' ಎಂಬ ಸಿನಿಮಾ ಆರಂಭಿಸುತ್ತಿದ್ದಾರೆ. ನಿಧಿ ಅಗರ್‌ವಾಲ್, ಅರ್ಜುನ್ ರಾಂಪಾಲ್, ಜಾಕ್ವೆಲಿನ್ ಫರ್ನಾಂಡಿಸ್ ಅಂತಹ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಎಎಂ ರತ್ನಂ ಮತ್ತು ದಯಾಕರ್ ನಿರ್ಮಾಣ ಮಾಡುತ್ತಿದ್ದಾರೆ.

  ನಿತ್ಯಾ ಮೆನನ್, ಐಶ್ವರ್ಯ ನಟನೆ

  ನಿತ್ಯಾ ಮೆನನ್, ಐಶ್ವರ್ಯ ನಟನೆ

  'ಭೀಮ್ಲ ನಾಯಕ್' ಸಿನಿಮಾದಲ್ಲಿ ಪವನ್ ಕಲ್ಯಾಣ್, ರಾಣಾ ದಗ್ಗುಬಾಟಿ ಜೊತೆಗೆ ಕನ್ನಡತಿ ನಿತ್ಯಾ ಮೆನನ್ ಹಾಗೂ ಐಶ್ವರ್ಯಾ ರಾಜೇಶ್ ಸಹ ನಟಿಸುತ್ತಿದ್ದಾರೆ. ಜೊತೆಗೆ ತಮಿಳಿನ ನಟ ಸಮುದ್ರಕಣಿ ಸಹ ಇದ್ದಾರೆ. ಸಾಗರ್ ಕೆ ಚಂದ್ರ ನಿರ್ದೇಶನ ಮಾಡುತ್ತಿದ್ದು, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕತೆ ಮಾಡಿದ್ದಾರೆ. ಸೂರ್ಯದೇವರ ನಾಗವಂಶಿ ನಿರ್ಮಾಪಕ. ಎಸ್.ತಮನ್ ಸಂಗೀತವಿದೆ.

  English summary
  A whopping ₹60cr will be given to powerstar Pawan Kalyan as salary for PSPK28. The movie will be directed by Harish Shankar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X