For Quick Alerts
  ALLOW NOTIFICATIONS  
  For Daily Alerts

  ಇದುವರೆಗೂ ನೋಡದ ಪೂಜಾಗಾಂಧಿ ಹಾಟ್ ಚಿತ್ರ

  By Rajendra
  |

  'ದಂಡುಪಾಳ್ಯ' ಚಿತ್ರದಲ್ಲಿ ಅರೆಬೆತ್ತಲಾಗಿ ಗಮನಸೆಳೆದಿದ್ದ ತಾರೆ ಪೂಜಾಗಾಂಧಿ ಅವರ ಮತ್ತೊಂದು ಹಾಟ್ ಚಿತ್ರವೊಂದು ಅಂತರ್ಜಾಲದಲ್ಲಿ ಸದ್ದಿಲ್ಲದಂತೆ ಸರಿದಾಡುತ್ತಿದೆ. ಇದುವರೆಗೂ ಬಿಡುಗಡೆಯಾಗಿರದ ಫೋಟೊ ಇದು ಎಂದು ಬಿಂಬಿಸಲಾಗಿದೆ.

  ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಇತ್ತೀಚೆಗಿನ ಫೋಟೋವಂತೂ ಅಲ್ಲವೇ ಅಲ್ಲ ಅನ್ನಿಸುತ್ತದೆ. ಸಾಕಷ್ಟು ಸಮಯದ ಹಿಂದೆಯೇ ಈ ಫೋಟೋ ತೆಗೆದಿದ್ದಾರೆ ಎಂಬ ಅನುಮಾನ ಬರುತ್ತದೆ. ಪೂಜಾಗಾಂಧಿ ಫೋಟೋದಲ್ಲಿ ತುಂಬ ತೆಳ್ಳಗಿರುವುದೇ ಇದಕ್ಕೆ ಕಾರಣ.

  ಇದು ಯಾವುದೋ ಚಿತ್ರದ ಫೋಟೋಶೂಟ್ ಗಾಗಿ ತೆಗೆದ ಚಿತ್ರವೇ ಅಥವಾ ಪೂಜಾಗಾಂಧಿ ಅಭಿನಯದ ಇನ್ನೂ ಬಿಡುಗಡೆಯಾಗದ ಚಿತ್ರದ ಫೋಟೋಗಳೇ ಎಂಬುದು ತಿಳಿದುಬಂದಿಲ್ಲ. ಒಟ್ಟಿನಲ್ಲಿ ಈ ಹಾಟ್ ಫೋಟೋ ಮಾತ್ರ ಸರಿದಾಡುತ್ತಿದೆ.

  ನೈಜ ಕತೆಯಾಧಾರಿತ 'ದಂಡುಪಾಳ್ಯ' ಚಿತ್ರದಲ್ಲಿ ಪೂಜಾ ಗಾಂಧಿ ಬೆತ್ತಲೆ ಸೀನ್ ಕೇವಲ 20 ರಿಂದ 30 ಸೆಕೆಂಡ್ ಮಾತ್ರ ಇದೆ. ಈ ಬಗ್ಗೆ ಹಿಂದೊಮ್ಮೆ ಪೂಜಾಗಾಂಧಿ ಮಾತನಾಡುತ್ತಾ, ಬೆತ್ತಲೆ ಎಂದರೆ ಬಟ್ಟೆ ಇಲ್ಲದೆ ನಟಿಸುವುದು. ಆದರೆ ಚಿತ್ರದಲ್ಲಿ ನಾನು ಎಲ್ಲೂ ಬಟ್ಟೆ ಕಳಚಿಲ್ಲ ಎಂದು ಪೂಜಾ ಸಮರ್ಥಿಸಿಕೊಂಡಿದ್ದರು.

  ದಂಡುಪಾಳ್ಯ ಚಿತ್ರದ ಪಾತ್ರಕ್ಕೆ ನೈಜತೆ ತುಂಬಲು ನಿಜವಾಗಿಯೂ ಬೀಡಿ ಸೇದಿದ್ದರು. 'ದಂಡುಪಾಳ್ಯ'ದ ಲಕ್ಷ್ಮಿ ಪಾತ್ರ ನೈಜವಾಗಿ ಮೂಡಿಬರಬೇಕು ಎಂಬ ಕಾರಣಕ್ಕೆ ಬೀಡಿ ಸೇದಿದ್ದರು. ಬಾಲಿವುಡ್‌ನಲ್ಲಿ ರೇಖಾ, ವಿದ್ಯಾ ಬಾಲನ್, ಶಬಾನಾ ಅಜ್ಮಿ ಇವರೆಲ್ಲಾ ಸಿಗರೇಟು ಸೇದಿದ್ದಾರೆ, ಡ್ರಿಂಗ್ಸ್ ಮಾಡಿದ್ದಾರೆ. ಆದರೆ ತಾವು ಶೋಕಿಗಾಗಿ ಬೀಡಿ ಸೇದಿಲ್ಲ. ಪಾತ್ರಕ್ಕಾಗಿ ಮಾತ್ರ ಎಂದಿದ್ದರು.

  ಸಾಕಷ್ಟು ರಿಸ್ಕ್ ತೆಗೆದುಕೊಂಡು 'ದಂಡುಪಾಳ್ಯ' ಚಿತ್ರದ ಹಾಟ್ ಸೀನ್ ನಲ್ಲಿ ಪೂಜಾಗಾಂಧಿ ಅಭಿನಯಿಸಿದ್ದರು. ಅದು ಕ್ಲಿಕ್ ಕೂಡಾ ಆಗಿದೆ. 'ದಂಡುಪಾಳ್ಯ' ಚಿತ್ರ ಅರ್ಧ ಶತಕದತ್ತ ಮುನ್ನುಗ್ಗುತ್ತಿದೆ. ಬಾಕ್ಸಾಫೀಸಲ್ಲೂ ದುಡ್ಡು ಬಾಚಿದೆ. ಬೆತ್ತಲೆ ಬೆನ್ನಿನ ವಿವಾದವೂ ತಣ್ಣಗಾಗಿದೆ. ಈಗ ಈ ಹಾಟ್ ಫೋಟೋ ಅದೆಲ್ಲಿಂದ ಬಂದು ದಿಢೀರ್ ಎಂದು ಅಪ್ಪಳಿಸಿದೆ. (ಏಜೆನ್ಸೀಸ್)

  English summary
  Dandupalya fame Kannada actress Pooja Gandhi's unseen bikini photo doing the rounds in the Internet have shocked many. But doesn't the photos details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X