»   » ಗಾಂಧಿನಗರಕ್ಕೆ ಬರ್ತಾಳಂತೆ ರಸಪೂರಿ ಬೆಡಗಿ ಪೂನಂ

ಗಾಂಧಿನಗರಕ್ಕೆ ಬರ್ತಾಳಂತೆ ರಸಪೂರಿ ಬೆಡಗಿ ಪೂನಂ

Posted By:
Subscribe to Filmibeat Kannada

ಕನ್ನಡ ನಿರ್ಮಾಪಕ, ನಿರ್ದೇಶಕರೆಲ್ಲರ ಚಿತ್ತ ಈಗ ಸಂಪೂರ್ಣವಾಗಿ ಬಾಲಿವುಡ್ ಕಡೆ ತಿರುಗಿ ನಿಂತಂತಿದೆ. ದೇಶ, ವಿದೇಶದ ಹಾಟ್ ಬೆಡಗಿಯರನ್ನೆಲ್ಲ ಕನ್ನಡದಲ್ಲಿ ಮುಖ ತೋರುವಂತೆ ಮಾಡುವುದೇ ಅಜೆಂಡ ಮಾಡಿಕೊಂಡು ಅನೇಕರು ಸಿದ್ಧರಾಗಿದ್ದಾರೆ. ವೀಣಾಮಲಿಕ್ ಎಂಟ್ರಿಯೊಂದಿಗೆ 'ಡರ್ಟಿಪಿಕ್ಚರ್'ಗೆ ಸಿಕ್ಕ ಪಬ್ಲಿಸಿಟಿ, ಇಡೀ ಗಾಂಧಿನಗರಕ್ಕೆ ಹೊಸ ಬಗೆಯಲ್ಲಿ ಗಾಳಿ ತುಂಬಿದಂತಿದೆ.

ಐಟಂ ಸಾಂಗ್ ಗಳಿಗೆ ಮುಂಬೈನ ಲೋಕಲ್ ಮಾಡೆಲ್ ಗಳನ್ನ ಹುಡುಕಿಕೊಂಡು ಬರುತ್ತಿದ್ದ ನಿರ್ದೇಶಕರು, ಈಗ ಬಿಚ್ಚಮ್ಮಗಳಾಗಿಯೇ ದೇಶದ ತುಂಬಾ ಸುದ್ದಿ ಮಾಡಿರುವ ಕಾಮ ಕನ್ನಿಕೆಯರನ್ನ ಹುಡುಕಿಕೊಂಡು ಹೊರಡುತ್ತಿದ್ದಾರೆ. ಪ್ರೇಮ್ ತಮ್ಮ 'ಪ್ರೇಮ್ ಅಡ್ಡಾ' ಸಿನಿಮಾಗೆ ಸನ್ನಿ ಲಿಯೋನ್ ಕರೆಸುವುದಾಗಿ ಹೇಳಿ ಬೆಚ್ಚಿಬೀಳಿಸಿದ್ದರು. ಆದರೆ ಅದೂ ಕೂಡಾ ಪ್ರೇಮ್ ಪುಂಗಿಗಳಲ್ಲಿ ಮತ್ತೊಂದು ಎಂಬಂತಾಯ್ತು.

ಈಗ ಸ್ಕಾರ್ಲೆಟ್ ವಿಲ್ಸನ್ ಹೆಸರು ಹೇಳಿಕೊಂಡು ಪ್ರೇಮ್ ಅಡ್ಡಾ ಚಿತ್ರತಂಡ ಸುದ್ದಿ ಮಾಡುತ್ತಿದೆ. ಆದರೆ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಹೊಸ ವಿಷಯ ಏನಪ್ಪಾ ಎಂದರೆ, 'ಡರ್ಟಿಪಿಕ್ಚರ್'ಗೆ ವೀಣಾ ಮಲ್ಲಿಕ್ ಕರೆದುಕೊಂಡುಬಂದ ಹೆಸರು ಮಾಡಿದ ಡರ್ಟಿ ತಂಡ, ಈಗ ಮತ್ತೊಬ್ಬ ಬಿಚ್ಚಮ್ಮ ಪೂನಂ ಪಾಂಡೆಯನ್ನೂ ಅದೇ ಪಿಕ್ಚರ್ ಗಾಗಿ ಐಟಂ ಹಾಡೊಂದಕ್ಕೆ ಕರೆತರುವ ಬಗ್ಗೆ ಮಾತಾಡುತ್ತಿದೆ. ಪೂನಂ ಪಾಂಡೆ ಅವಾಂತರಗಳೆಲ್ಲ ಗೊತ್ತಿರಬೇಕು.

ಭಾರತ ತಂಡ ವಿಶ್ವಕಪ್ ಗೆದ್ದರೆ ಬೆತ್ತಲಾಗಿ ಪೋಸ್ ಕೊಡುವುದಾಗಿ ಹೇಳಿಕೆ ಕೊಟ್ಟು ಬೆಚ್ಚಿಬೀಳಿಸಿದ್ದ ಪೂನಂ, ಆಗ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರುಯಾಗಿದ್ದರು. ಭಾರತ ತಂಡ ವಿಶ್ವಕಪ್ ಗೆದ್ದಾಗ ರಸಿಕ ಮಹಾಶಯರು ಹುಡುಕಿದ್ದೇ ಪೂನಂಪಾಂಡೆಯನ್ನ. ಆದರೆ ಏನೇನೋ ಸಬೂಬು ಕೊಟ್ಟು ಪೂನಂ ತನ್ನ ಮಾತನ್ನ ಮುರಿದುಕೊಂಡಿದ್ದಳು.

ಆದರೆ ಅದಾದ ಮೇಲೂ ಆಕೆಯ ಅಬ್ಬರ ಕಡಿಮೆಯಾಗಲಿಲ್ಲ. ತಾನು ಅರೆನಗ್ನಾವಸ್ಥೆಯಲ್ಲಿ ಸ್ನಾನ ಮಾಡುವ ದೃಶ್ಯವನ್ನ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದು, ಮ್ಯಾಗಝಿನ್ ಒಂದಕ್ಕಾಗಿ ಸಂಪೂರ್ಣ ಬೆತ್ತಲಾದ ಪೋಸ್ ಕೊಟ್ಟಿದ್ದು... ಆಕೆಯ ಸಾಧನೆಗಳು.

ಅವತ್ತಿನಿಂದ ಇವತ್ತಿನವರೆಗೂ ಪೂನಂ ಒಂದಲ್ಲಾ ಒಂದು ರೀತಿ ಸದ್ದು ಮಾಡುತ್ತಲೇ ಇದ್ದಾಳೆ. ಅಂತಹ ಎದೆಗಾತಿಯನ್ನು ತನ್ನ 'ಡರ್ಟಿಪಿಕ್ಚರ್' ಐಟಂ ಸಾಂಗ್ ಒಂದಕ್ಕೆ ತಂದು ಕುಣಿಸಲು ನಿಶ್ಚಯಿಸಿರುವುದಾಗಿ 'ಡರ್ಟಿಪಿಕ್ಚರ್' ನಿರ್ದೇಶಕ ತ್ರಿಶೂಲ್ ಹೇಳಿಕೊಂಡಿದ್ದಾರೆ.

ವೀಣಾ ಮಲ್ಲಿಕ್ ಕರೆತಂದವರು ಪೂನಂಗೆ ಬಲೆ ಬೀಸುವುದು ಕಷ್ಟವೇನಾಗಲಿಕ್ಕಿಲ್ಲ ಅನ್ನೋದು ಗಾಂಧಿನಗರದ ಅಭಿಪ್ರಾಯ. ಹಾಗಾಗಿ ಪ್ರೇಮ್ ಹೇಳಿಕೆಗಳನ್ನ ನೋಡಿದಷ್ಟು ಅನುಮಾನದಿಂದ ತ್ರಿಶೂಲ್ ಹೇಳಿಕೆಗಳನ್ನ ಸಿನೆಮಾ ಪ್ರೇಕ್ಷಕರು ನೋಡುತ್ತಿಲ್ಲ. ಕಮಲ್ ಹಾಸನ್ ಹಾಗೂ ಸಿಲ್ಕ್ ಸ್ಮಿತಾ 'ಸಕಲಕಲಾವಲ್ಲವನ್' ಎಂಬ ಚಿತ್ರವೊಂದರಲ್ಲಿ ಜೋಡಿಯಾಗಿ ಕುಣಿದಿದ್ದರು.

ಅದೇ ಹಾಡನ್ನೇ ತ್ರಿಶೂಲ್ ರಿಮಿಕ್ಸ್ ಮಾಡಿಸಿ ತನ್ನ ಡರ್ಟಿಪಿಕ್ಚರ್ ಗೆ ಬಳಸಿಕೊಳ್ಳಲಿದ್ದಾರೆ. ಈಗ ಪೂನಂ ಬರುತ್ತಿರುವುದೂ ಅದೇ ಹಾಡಿಗೆ. ಹರ್ಷಾ ಕೊರಿಯೋಗ್ರಫಿ ಈ ಹಾಡಿಗಿರಲಿದೆ ಅನ್ನೋದು ಸದ್ಯದ ವರ್ತಮಾನ. (ಏಜೆನ್ಸೀಸ್)

English summary
The Kingfisher Calendar girls for year 2011 Poonam Pandey may act in Kannada film Dirty Picture: Silk Sakkath Hot Maga. After Veena Malik the makes of the film to bring Poonam Pandey for a special song.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada