twitter
    For Quick Alerts
    ALLOW NOTIFICATIONS  
    For Daily Alerts

    'ಸ್ಪಿರಿಟ್' ಚಿತ್ರಕ್ಕೆ ಭಾರತೀಯ ಸಿನಿಮಾರಂಗದಲ್ಲೇ ದಾಖಲೆಯ ಸಂಭಾವನೆ ಪಡೆದ ಪ್ರಭಾಸ್

    By ರವೀಂದ್ರ ಕೊಟಕಿ
    |

    ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಅವರ ಜೊತೆ ಸಿನಿಮಾ ಮಾಡಬೇಕು ಅಂದರೆ ನಿರ್ಮಾಪಕ 500 ಕೋಟಿ ಬಂಡವಾಳ ಹೂಡಲೇಬೇಕು. ಯಾಕೆಂದರೆ ಪ್ರಭಾಸ್ ಸಿನಿಮಾದ ಬಿಸಿನೆಸ್ ಕೂಡ ಅದೇ ಮಟ್ಟದಲ್ಲಿರುತ್ತದೆ. ಸೌತ್ ಮತ್ತು ಹಿಂದಿ ಬೆಲ್ಟ್ ಎರಡರಲ್ಲೂ ಒಂದೇ ಥರದ ಬಿಜಿನೆಸ್ ಮಾಡುವ ಏಕೈಕ ನಟ ಪ್ರಭಾಸ್.

    ಅಲ್ಲದೆ ಪ್ರಭಾಸ್ ಚಿತ್ರಗಳಿಗೆ ಈಗ ವಿದೇಶಗಳಲ್ಲಿ ಕೂಡ ದೊಡ್ಡಮಟ್ಟದ ಮಾರುಕಟ್ಟೆ ಇದೆ. 'ಸಾಹೋ' ಚಿತ್ರ ಫ್ಲಾಪ್ ಸಿನಿಮಾ ಅಂತ ಕರೆಸಿಕೊಂಡರೂ ಸುಮಾರು 350 ಕೋಟಿ ಕಲೆಕ್ಷನ್ ಮಾಡಿದೆ. ಒಬ್ಬ ಸ್ಟಾರ್ ನಟನ ಸಿನಿಮಾ ಫ್ಲಾಪ್ ಅಂದರು 350 ಬಿಜಿನೆಸ್ ಮಾಡುತ್ತೆ ಅಂದರೆ ಇನ್ನು ಹಿಟ್, ಸೂಪರ್ ಹಿಟ್ ಅಥವಾ ಮೆಗಾ ಹಿಟ್ ಆದರೆ, ಆ ಸಿನಿಮಾಗಳ ಬಿಸಿನೆಸ್ ರೇಂಜ್ ಯಾವ ಮಟ್ಟದಲ್ಲಿರುತ್ತದೆ ಉಳಿಸಿಕೊಳ್ಳಿ!

    ಹೀಗಾಗಿಯೇ ಪ್ರಸ್ತುತ ಪ್ರಭಾಸ್ ನಟಿಸುತ್ತಿರುವ ಚಿತ್ರಗಳ ಮೇಲೆ ಈಗಾಗಲೇ 300ರಿಂದ 500 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ ನಿರ್ಮಾಪಕರು. 'ರಾಧೆಶ್ಯಾಮ್' 300 ಕೋಟಿ, 'ಸಲಾರ್' 250 ಕೋಟಿ, 'ಆದಿಪುರುಷ್' 500 ಕೋಟಿ, 'ಪ್ರಾಜೆಕ್ಟ್ K ' 600 ಕೋಟಿ ಬಂಡವಾಳವನ್ನು ನಿರ್ಮಾಪಕರು ಈಗಾಗಲೇ ಹೂಡಿದ್ದಾರೆ. ಇಷ್ಟು ದೊಡ್ಡ ಮಟ್ಟದ ಬಂಡವಾಳವನ್ನು ಬಾಲಿವುಡ್ ನ ಯಾವ ಸೂಪರ್ ಸ್ಟಾರ್ ಮೇಲು ಕೂಡ ನಿರ್ಮಾಪಕರು ಹೂಡುವ ಧೈರ್ಯ ಮಾಡುತ್ತಿಲ್ಲ. ದೇಶದ ಅತಿ ದೊಡ್ಡ ಬಜೆಟ್ಟಿನ ಬಹುತೇಕ ಚಿತ್ರಗಳ ಏಕೈಕ ನಾಯಕ ನಟ ಪ್ರಭಾಸ್ ಎಂದರೆ ನಂಬಲೇಬೇಕು.

    ಪ್ರಭಾಸ್ ಡೇಟ್ಸ್‌ಗಾಗಿ ಕ್ಯೂನಲ್ಲಿ ನಿಂತಿದ್ದಾರೆ ನಿರ್ಮಾಪಕರು

    ಪ್ರಭಾಸ್ ಡೇಟ್ಸ್‌ಗಾಗಿ ಕ್ಯೂನಲ್ಲಿ ನಿಂತಿದ್ದಾರೆ ನಿರ್ಮಾಪಕರು

    ಸದ್ಯಕ್ಕೆ 5 ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಪ್ರಭಾಸ್ ಜೊತೆ ಮತ್ತೆ 5 ಚಿತ್ರಗಳ ನಿರ್ಮಾಣಕ್ಕೆ 500 ಕೋಟಿ ಬಂಡವಾಳದೊಂದಿಗೆ ನಿರ್ಮಾಪಕರು ಮತ್ತು ನಿರ್ದೇಶಕರು ಕ್ಯೂನಲ್ಲಿ ನಿಂತಿದ್ದಾರೆ. ಹೀಗಾಗಿ ಸಹಜವಾಗಿಯೇ ಪ್ರಭಾಸ್ ಅವರ ಸಂಭಾವನೆ ಕೂಡ ಭಾರಿ ಮಟ್ಟದಲ್ಲೇ ಇರುವುದು ಸಹಜ. ಪ್ರಭಾಸ್ ಸಿನಿಮಾಗಳಿಗೆ ಮಾರುಕಟ್ಟೆ ಸಹ ಕಡಿಮೆ ಏನಿಲ್ಲ. ಬಿಡುಗಡೆಗೆ ಮುನ್ನವೇ ಸಿನಿಮಾದ ಒಟ್ಟು ಬಂಡವಾಳದ ಅರ್ಧದಷ್ಟು ವಾಪಸ್ಸಾಗಿರುತ್ತದೆ.

    ಪ್ರಭಾಸ್ 25 'ಸ್ಪಿರಿಟ್'

    ಪ್ರಭಾಸ್ 25 'ಸ್ಪಿರಿಟ್'

    ಪ್ರಭಾಸ್ ಸಿನಿ ಕೆರಿಯರ್ ನ 25ನೇ ಚಿತ್ರ 'ಸ್ಪಿರಿಟ್' ಇತ್ತೀಚಗಷ್ಟೇ ಘೋಷಣೆಯಾಗಿದೆ. ಇನ್ನು ಈ ಚಿತ್ರವನ್ನು 't-series'ಮತ್ತು 'ಭದ್ರಕಾಳಿ ಮೂವೀಸ್' ಒಟ್ಟಿಗೆ ನಿರ್ಮಿಸುತ್ತಿದ್ದು ಈ ಚಿತ್ರವನ್ನು ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳಂ ಜೊತೆಗೆ ಚೈನೀಸ್ ಕೊರಿಯನ್ ಮತ್ತು ಜಪಾನೀಸ್ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಭಾರೀ ಆಕ್ಷನ್ ಡ್ರಾಮಾ ಹೊಂದಿರುವ ಈ ಚಿತ್ರದಲ್ಲಿ ಪ್ರಭಾಸ್ ಪವರ್ಫುಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರವನ್ನು 'ಅರ್ಜುನ್ ರೆಡ್ಡಿ' ಅದರ ರಿಮೇಕ್ 'ಕಬೀರ್ ಸಿಂಗ್' ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರಗಳ ಮೂಲಕ ಸ್ಟಾರ್ ನಿರ್ದೇಶಕನಾಗಿ ತೆಲುಗು ಮತ್ತು ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದಾರೆ.

    'ಸ್ಪಿರಿಟ್' ಗೆ ದಾಖಲೆಯ ಸಂಭಾವನೆ

    'ಸ್ಪಿರಿಟ್' ಗೆ ದಾಖಲೆಯ ಸಂಭಾವನೆ

    ಭಾರತದಲ್ಲಿ ಮೊದಲ 100 ಕೋಟಿ ಸಂಭಾವನೆ ಪಡೆದ ನಟ ಪ್ರಭಾಸ್. ಪ್ರಸ್ತುತ ಸಲ್ಮಾನ್ ಖಾನ್ , ಅಮೀರ್ ಖಾನ್ ಅವರ ಸಂಭಾವನೆ ಕೂಡ 100 ಕೋಟೆಯಲ್ಲಿದೆ. ಆದರೆ ಸಂಭಾವನೆಯ ವಿಷಯದಲ್ಲಿ ಇವರೆಲ್ಲರಿಗಿಂತ ಒಂದು ಹೆಜ್ಜೆ ಮತ್ತೆ ಮುಂದೆ ಹೋಗಿರುವ ಪ್ರಭಾಸ್ 'ಸ್ಪಿರಿಟ್' ಚಿತ್ರಕ್ಕೆ ಬರೋಬ್ಬರಿ 150 ಕೋಟಿ ಸಂಭಾವನೆ ಪಡೆದಿದ್ದಾರೆ ಅಂತ ಬಾಲಿವುಡ್ ಟಾಕ್. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ನಡೆಯುವ ನಾಯಕ ನಟನಾಗಿ ಪ್ರಭಾಸ್ ಹೊಸ ದಾಖಲೆಯನ್ನು ಬರೆದಿದ್ದಾರೆ. ಬಹುಶಃ ಪ್ರಸ್ತುತ ಸಂದರ್ಭದಲ್ಲಿ ಪ್ರಭಾಸ್ ಹತ್ತಿರಕ್ಕೆ ಸಂಭಾವನೆಯ ವಿಷಯದಲ್ಲಿ ಮತ್ತೊಬ್ಬ ನಟ ಹತ್ತಿರವಿದ್ದಂತೆ ಕಾಣುತ್ತಿಲ್ಲ. ಮುಂಬರುವ ದಿನಗಳಲ್ಲಿ ಪ್ರಭಾಸ್ ಸಂಭಾವನೆ ಮತ್ತಷ್ಟು ಹೆಚ್ಚಾಗುವ ಸಂಭಾವನೆಗಳಿವೆ. ಒಟ್ಟಾರೆ 150 ಕೋಟಿ ಸಂಭಾವನೆ ಪಡೆದ ಮೊಟ್ಟ ಮೊದಲ ಭಾರತೀಯ ಸಿನಿಮಾ ನಟನೆಂಬ ಹೆಗ್ಗಳಿಕೆ ಪ್ರಭಾಸ್ ಅವರ ಪಾಲಾಗಿದೆ.

    ಬಿಡುಗಡೆ ಆಗಲಿರುವ ಸಿನಿಮಾಗಳು

    ಬಿಡುಗಡೆ ಆಗಲಿರುವ ಸಿನಿಮಾಗಳು

    ಪ್ರಭಾಸ್ ನಟನೆಯ ಮೂರು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. 'ರಾಧೆ-ಶ್ಯಾಮ್' ಸಿನಿಮಾವು ಜನವರಿ 14 ರಂದು ಬಿಡುಗಡೆ ಆಗಲಿದೆ. ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಬಿಡುಗಡೆ ಆಗಲಿದೆ. ಭಾರತದ ಅತಿದೊಡ್ಡ ಬಜೆಟ್‌ನ ಸಿನಿಮಾ 'ಆದಿಪುರುಷ್' ಸಿನಿಮಾ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಆ ಸಿನಿಮಾ ಮುಂದಿನ ವರ್ಷ ಜೂನ್ ತಿಂಗಳ ವೇಳೆಗೆ ಬಿಡುಗಡೆ ಆಗುವ ಸಾಧ್ಯೆತೆ ಇದೆ. 'ಸ್ಪಿರಿಟ್' ಸಿನಿಮಾಗೂ ಮುನ್ನ ನಾಗ ಚೈತನ್ಯ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಸಹ ನಟಿಸಲಿದ್ದಾರೆ.

    English summary
    Prabhas hiked his remuneration for his next movie spirit. Prabhas taking 150 crore rs for his movie. Sandeep Reddy Vanga directing this movie.
    Sunday, October 17, 2021, 11:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X