For Quick Alerts
  ALLOW NOTIFICATIONS  
  For Daily Alerts

  ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಪಡೆದ ಮೊದಲ ನಟ ಪ್ರಭಾಸ್?

  |

  'ಬಾಹುಬಲಿ' ಚಿತ್ರಗಳ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡ ಪ್ರಭಾಸ್ ಭಾರತೀಯ ಚಿತ್ರರಂಗದ ಬೇಡಿಕೆಯ ನಟ. ಕೆಲವೇ ಕೆಲವು ಭಾರತೀಯ ನಟರು ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇದರಲ್ಲಿ ಪ್ರಸ್ತುತ ಪ್ರಭಾಸ್ ಹೆಸರು ಹೆಚ್ಚು ಸದ್ದು ಮಾಡ್ತಿದೆ.

  ಸಂಭಾವನೆ ವಿಚಾರಕ್ಕೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಎಲ್ಲರ ಗಮನ ಸೆಳೆದಿದ್ದಾರೆ. ಪಿಂಕ್ ವಿಲ್ಲಾ ವೆಬ್‌ಸೈಟ್ ವರದಿ ಮಾಡಿರುವಂತೆ ಭಾರತೀಯ ನಟರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆದಿರುವ ನಟ ಪ್ರಭಾಸ್ ಎಂದು ಹೇಳಲಾಗಿದೆ. ಇದುವರೆಗೂ ಯಾವ ನಟ ಪಡೆದಿರದಷ್ಟು ಸಂಭಾವನೆಯನ್ನು ಪ್ರಭಾಸ್ ಪಡೆದಿದ್ದಾರೆ ಎಂದು ವರದಿ ಮಾಡಿದೆ. ಮುಂದೆ ಓದಿ...

  100 ಕೋಟಿ ಸಂಭಾವನೆ ಪಡೆದ ಪ್ರಭಾಸ್?

  100 ಕೋಟಿ ಸಂಭಾವನೆ ಪಡೆದ ಪ್ರಭಾಸ್?

  ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಮಿಂಚುತ್ತಿರುವ ನಟ ಪ್ರಭಾಸ್ ಚಿತ್ರವೊಂದಕ್ಕೆ 100 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಪಿಂಕ್ ವಿಲ್ಲ ವರದಿ ಮಾಡಿರುವಂತೆ ಸಾಹೋ ಚಿತ್ರಕ್ಕೆ ಪ್ರಭಾಸ್ ಅತಿ ಹೆಚ್ಚು ಸಂಭಾವನೆ ತೆಗೆದುಕೊಂಡಿದ್ದಾರೆ. ಇದುವರೆಗೂ ಯಾವ ನಟ ಸಹ ಇಷ್ಟೊಂದು ಸಂಭಾವನೆ ಪಡೆದಿಲ್ಲ ಎಂದು ವರದಿ ಮಾಡಿದೆ.

  ದಿಲ್ ರಾಜು ಮೆಗಾ ಪ್ಲಾನ್: ಪ್ರಶಾಂತ್ ನೀಲ್-ವಿಜಯ್ ಜೊತೆ ಒಪ್ಪಂದ?

  ನಿರ್ಮಾಪಕ ನಷ್ಟ ಎದುರಿಸಬೇಕಾಗಿಲ್ಲ

  ನಿರ್ಮಾಪಕ ನಷ್ಟ ಎದುರಿಸಬೇಕಾಗಿಲ್ಲ

  ''ಪ್ರಭಾಸ್ ಹೆಚ್ಚು ಜನಪ್ರಿಯತೆ ಹೊಂದಿರುವ ನಟ. ಭಾಷೆಯ ಗಡಿ ಮೀರಿ ಬೆಳೆದಿದ್ದಾರೆ. ಯಾವುದೇ ಭಾಷೆಯಲ್ಲಿ ಪ್ರಭಾಸ್ ಸಿನಿಮಾ ನೋಡಲು ಪ್ರೇಕ್ಷಕರಿದ್ದಾರೆ. ಉತ್ತರ ಭಾರತ, ದಕ್ಷಿಣ ಭಾರತ ಹಾಗೂ ವಿದೇಶಗಳಲ್ಲಿಯೂ ಪ್ರಭಾಸ್‌ಗೆ ಪ್ರೇಕ್ಷಕರಿದ್ದಾರೆ. ಈ ನಿಟ್ಟಿನಲ್ಲಿ ನಿರ್ಮಾಪಕರಿಗೆ ನಷ್ಟ ಆಗುವುದಿಲ್ಲ'' ಎಂದು ಮೂಲವೊಂದು ಹೇಳಿರುವುದಾಗಿ ವರದಿ ಮಾಡಿದೆ.

  ರಾಧೇ ಶ್ಯಾಮ್ ಬಿಡುಗಡೆಗೆ ತಯಾರಿ

  ರಾಧೇ ಶ್ಯಾಮ್ ಬಿಡುಗಡೆಗೆ ತಯಾರಿ

  ಬಹುವರ್ಷದ ನಂತರ ಪ್ರಭಾಸ್ ಬಾಲವರ್ ಯ್ ಇಮೇಜ್‌ ಮೂಲಕ ಬರ್ತಿದ್ದಾರೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ರಾಧೇ ಶ್ಯಾಮ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಮಿರ್ಚಿ, ಡಾರ್ಲಿಂಗ್ ಚಿತ್ರಗಳ ಬಳಿಕ ಪ್ರಭಾಸ್ ತಮ್ಮ ಹಳೇ ಇಮೇಜ್‌ನಲ್ಲಿ ಮಾಡಿರುವ ಚಿತ್ರ ರಾಧೇ ಶ್ಯಾಮ್. ಜುಲೈ 30, 2021 ರಂದು ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರವೂ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ.

  ದುಬಾರಿ ಕಾರು ಖರೀದಿಸಿದ ನಟ ಪ್ರಭಾಸ್: ಇದರ ಬೆಲೆ ಎಷ್ಟು?

  ಪ್ರಭಾಸ್ ಮುಂದಿನ ಚಿತ್ರಗಳು

  ಪ್ರಭಾಸ್ ಮುಂದಿನ ಚಿತ್ರಗಳು

  ರಾಧೇ ಶ್ಯಾಮ್ ಮುಗಿಸಿರುವ ಪ್ರಭಾಸ್ ಸದ್ಯ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ 'ಸಲಾರ್' ಚಿತ್ರ ಮಾಡ್ತಿದ್ದಾರೆ. ಅದರ ಜೊತೆಗೆ ಓಂ ರಾವತ್ ನಿರ್ದೇಶನದ 'ಆದಿಪುರುಷ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಜೊತೆಯೂ ಸಿನಿಮಾ ಮಾಡ್ತಿದ್ದಾರೆ.

  English summary
  Tollywood Actor Prabhas Is first Indian actor to Receive 100 Remuneration in film history.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X