Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮತ್ತೊಂದು ಚಿತ್ರಕ್ಕೆ ಪ್ರಭಾಸ್ ಗ್ರೀನ್ ಸಿಗ್ನಲ್: ಬಾಲಿವುಡ್ ನಿರ್ಮಾಪಕನ ಜೊತೆ ತಗ್ಗೋದೇ ಇಲ್ಲ ಎಂದ ಡಾರ್ಲಿಂಗ್
'ಬಾಹುಬಲಿ' ಸರಣಿ ನಂತರ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ಪ್ರಭಾಸ್ ನಟಿಸ್ತಿದ್ದಾರೆ. ಸದ್ದಿಲ್ಲದೇ ಇದೀಗ ಮತ್ತೊಂದು ಚಿತ್ರಕ್ಕೆ ಡಾರ್ಲಿಂಗ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. 2024ಕ್ಕೆ ಈ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.
ಈಗಾಗಲೇ ಪ್ರಭಾಸ್ 'ಆದಿಪುರುಷ್' ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ಆದರೆ ಒಂದಷ್ಟು ರೀಶೂಟ್‌ಗಾಗಿ ಕೆಲಸ ಮಾಡಲಿದ್ದಾರೆ. 'ಸಲಾರ್' ಸಿನಿಮಾ ಚಿತ್ರೀಕರಣ 85% ರಷ್ಟು ಕಂಪ್ಲೀಟ್ ಆಗಿದೆ. 'ಪ್ರಾಜೆಕ್ಟ್'- K ಶೂಟಿಂಗ್ ಭರದಿಂದ ಸಾಗಿದೆ. ಇದರ ನಡುವೆ ಮೀಡಿಯಂ ಬಜೆಟ್ ಸಿನಿಮಾ ಮಾಡ್ತಿದ್ದಾರೆ. ಮಾರುತಿ ನಿರ್ದೇಶನದಲ್ಲಿ 'ರಾಜಾ ಡೀಲಕ್ಸ್' ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ನಡೀತಿದೆ. ಇತ್ತೀಚೆಗೆ ಸೆಟ್‌ನಿಂದ ವರ್ಕಿಂಗ್ ಸ್ಟಿಲ್ ಒಂದು ಲೀಕ್ ಆಗಿತ್ತು. 'ಸ್ಪಿರಿಟ್' ಅನ್ನುವ ಮತ್ತೊಂದು ಚಿತ್ರಕ್ಕೂ ಪ್ರಭಾಸ್ ಓಕೆ ಅಂದಿದ್ದಾರೆ.
ಪ್ರಭಾಸ್-
ಸಂಜಯ್
ದತ್
'ರಾಜಾ
ಡೀಲಕ್ಸ್'
ಶೂಟಿಂಗ್:ಲೀಕ್
ಆಯ್ತು
ಸಿನಿಮಾ
ವರ್ಕಿಂಗ್
ಸ್ಟಿಲ್
'ಸಲಾರ್', 'ಪ್ರಾಜೆಕ್ಟ್'- K, 'ರಾಜಾ ಡೀಲಕ್ಸ್', 'ಸ್ಪಿರಿಟ್' ನಂತರ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ತಿದೆ. ಸದ್ದಿಲ್ಲದೇ ಯಂಗ್ ರೆಬಲ್ ಸ್ಟಾರ್ ಮತ್ತೊಂದು ಕಥೆ ಕೇಳಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಫಿಲ್ಮ್‌ನಗರ್‌ನಲ್ಲಿ ಕೇಳಿಬರ್ತಿದೆ.

ಸುಕುಮಾರ್ ನಿರ್ದೇಶನದಲ್ಲಿ ಪ್ರಭಾಸ್
ಹೌದು ಸ್ಟಾರ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಭಾಸ್ ನಟಿಸ್ತಾರೆ ಎನ್ನಲಾಗ್ತಿದೆ. ಈಗಾಗಲೇ ಸುಕ್ಕು ಹೇಳಿರುವ ಕಥೆ ಡಾರ್ಲಿಂಗ್‌ಗೆ ಇಷ್ಟ ಆಗಿದೆಯಂತೆ. ಆದಷ್ಟು ಬೇಗ ಸಿನಿಮಾ ಶುರು ಮಾಡೋಣ ಎಂದು ಕೂಡ ಹೇಳಿದ್ದಾರಂತೆ. ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅಭಿಮಾನಿಗಳಂತೂ ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದು ಆದಷ್ಟು ಬೇಗ ಈ ಬಗ್ಗೆ ಅಧಿಕೃತ ಘೋಷಣೆ ಬರಲಿ ಎನ್ನುತ್ತಿದ್ದಾರೆ.
ಒಟ್ಟಿಗೆ
ಕಾಣಿಸಿಕೊಂಡ
ಮಾಜಿ
ವೈರಿಗಳು,
ಒಂದಾಯ್ತ
ಮೆಗಾ-ನಂದಮೂರಿ
ಫ್ಯಾಮಿಲಿ

ಅಭಿಷೇಕ್ ಅಗರ್‌ವಾಲ್ ಪ್ಲ್ಯಾನ್
'ದಿ ಕಾಶ್ಮೀರ್ ಫೈಲ್ಸ್' ಹಾಗೂ 'ಕಾರ್ತಿಕೇಯ- 2' ಸಿನಿಮಾಗಳನ್ನು ನಿರ್ಮಿಸಿದ ಅಭಿಷೇಕ್ ಅಗರ್‌ವಾಲ್ ಪ್ರಭಾಸ್ ಹಾಗೂ ಸುಕುಮಾರ್‌ನ ಒಟ್ಟಿಗೆ ಸೇರಿಸಿದ್ದಾರೆ ಎನ್ನಲಾಗ್ತಿದೆ. ಇಬ್ಬರ ಭೇಟಿ ಮಾಡಿಸಿ ಸಿನಿಮಾ ಐಡಿಯಾ ಓಕೆ ಆಗುತ್ತಿದ್ದಂತೆ ನಿರ್ಮಾಪಕರು ಇಬ್ಬರಿಗೂ ಅಡ್ವಾನ್ಸ್ ಕೂಡ ಕೊಟ್ಟಿದ್ದಾರಂತೆ. 'ರಂಗಸ್ಥಳಂ' ಚಿತ್ರಕ್ಕೂ ಮೊದಲೇ ಸುಕ್ಕು ಪ್ರಭಾಸ್‌ಗೆ ಒಂದು ಕಥೆ ಹೇಳಿದ್ದರಂತೆ. ಆದರೆ ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ.

'ಪುಷ್ಪ-2' ಚಿತ್ರದಲ್ಲಿ ಸುಕ್ಕು ಬ್ಯುಸಿ
ಕಳೆದ ವರ್ಷ ಸುಕುಮಾರ್ 'ಪುಷ್ಪ' ರೀತಿಯ ಸೆನ್ಸೇಷನಲ್ ಹಿಟ್ ಸಿನಿಮಾ ಕೊಟ್ಟಿದ್ದು ಗೊತ್ತೇಯಿದೆ. ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಅಬ್ಬರಿಸಿ ಬಾಕ್ಸಾಫೀಸ್ ಶೇಕ್ ಮಾಡಿದ್ದರು. ಬಾಲಿವುಡ್‌ನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಪಕ್ಕಾ ಮಾಸ್ ಮಸಾಲಾ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಂಡು ಸುಕುಮಾರ್ ಗೆದ್ದಿದ್ದರು. ಸದ್ಯ 'ಪುಷ್ಪ' ಸೀಕ್ವೆಲ್ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಮುಂದಿನ ವರ್ಷಾಂತ್ಯಕ್ಕೆ 'ಪುಷ್ಪ'-2 ಕಂಪ್ಲೀಟ್ ಆಗಲಿದೆ.

2024ರಲ್ಲಿ ಸೆಟ್ಟೇರಲಿದೆ ಸಿನಿಮಾ
ಪ್ರಭಾಸ್ ಸಿನಿಮಾ ಅಂದ್ರೇನೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕುತೂಹಲ ಶುರುವಾಗುತ್ತೆ. ಇನ್ನು ಸುಕುಮಾರ್ ಕೂಡ ಕೈ ಜೋಡಿಸುತ್ತಾರೆ ಅಂದ್ಮೇಕೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. ಪ್ರಭಾಸ್ ಹಾಗೂ ಸುಕುಮಾರ್ ತಮ್ಮ ಸದ್ಯದ ಕಮೀಟ್‌ಮೆಂಟ್‌ಗಳನ್ನು ಮುಗಿಸಿ 2024ರ ವೇಳೆಗೆ ಒಟ್ಟಿಗೆ ಕೆಲಸ ಮಾಡುವ ಸಾಧ್ಯತೆಯಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣದ ಪ್ಲ್ಯಾನ್ ನಡೀತಿದೆ.