»   » ತಮಿಳಿನ 'ತಗರಾರು' ರಿಮೇಕ್ ನಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್

ತಮಿಳಿನ 'ತಗರಾರು' ರಿಮೇಕ್ ನಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್

Posted By:
Subscribe to Filmibeat Kannada

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗೆ ಮಲ್ಟಿ ಸ್ಟಾರರ್ ಚಿತ್ರ 'ಚೌಕ' ಅವರ ಹಿಂದಿನ ಕೆಲವು ಸಿನಿಮಾಗಳಿಗಿಂತ ಒಂದು ಹಂತದಲ್ಲಿ ಉತ್ತಮ ಹೆಸರು ತಂದುಕೊಟ್ಟಿತು. ಅಲ್ಲದೇ ಅವರ ಇಮೇಜ್ ಗೂ ಈಗ ಹೆಚ್ಚಿನ ಬ್ರೈಟ್ ನೆಸ್ ಸಿಕ್ಕಿದೆ.[ದೇವರಾಜ್ ಸೊಸೆ ರಾಗಿಣಿ ಚಂದ್ರನ್ ಬಗ್ಗೆ ಗಾಂಧಿನಗರದಲ್ಲಿ ಕಿವಿಗೆ ಬಿದ್ದ ಹೊಸ ಸುದ್ದಿ ಇದು.!]

ಅಂದಹಾಗೆ ಪ್ರಜ್ವಲ್ ದೇವರಾಜ್ ಬಗೆಗಿನ ಲೇಟೆಸ್ಟ್ ಸುದ್ದಿ ಅಂದ್ರೆ, ಡೈನಾಮಿಕ್ ಪ್ರಿನ್ಸ್ ತಮಿಳಿನ 'ತಗರಾರು(ತಕರಾರು)' ಚಿತ್ರದ ಕನ್ನಡ ರಿಮೇಕ್ ನಲ್ಲಿ ಅಭಿನಯಿಸಲಿದ್ದಾರೆ ಎಂಬುದು. ಈ ಸುದ್ದಿ ಈಗ ಗಾಂಧಿನಗರದ ಗಲ್ಲಿಯಲ್ಲಿ ಹಬ್ಬಿದೆ. ಮುಂದೆ ಓದಿ

ಎರಡು ಚಿತ್ರಗಳಿಗೆ ಸಹಿ ಹಾಕಿದ ಪ್ರಜ್ವಲ್ ದೇವರಾಜ್

ಹೌದು, ನಟ ಪ್ರಜ್ವಲ್ ದೇವರಾಜ್ 'ಚೌಕ' ಚಿತ್ರದ ನಂತರ ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದು. ಅದರಲ್ಲಿ ಒಂದು ತಮಿಳು ಭಾಷೆಯ 'ತಗರಾರು' ಕನ್ನಡ ರಿಮೇಕ್ ಚಿತ್ರವಂತೆ.

'ತಗರಾರು' ಚಿತ್ರ

ಅಂದಹಾಗೆ ತಮಿಳು ಭಾಷೆಯ 'ತಗರಾರು' ಚಿತ್ರ 2013 ರಲ್ಲಿ ಗಣೇಶ್ ವಿನಾಯಕ್ ನವ ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳಿದ ಸಿನಿಮಾ. ಈ ಚಿತ್ರದಲ್ಲಿ ಎಂ.ಕರುಣಾನಿಧಿ ಮೊಮ್ಮಗನಾದ ಅರುಳ್‌ನಿಥಿ ನಾಯಕ ನಟನಾಗಿ ಅಭಿನಯಿಸಿದ್ದರು. ಅಲ್ಲದೆ 'ತಗರಾರು' ಚಿತ್ರ ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದಿತ್ತು.

ಪ್ರಜ್ವಲ್ ರಿಮೇಕ್ ಚಿತ್ರದ ನಿರ್ದೇಶಕ ಯಾರು?

ಪ್ರಜ್ವಲ್ ದೇವರಾಜ್ ನಟನೆಯ 'ತಗರಾರು' ಕನ್ನಡ ರಿಮೇಕ್ ಚಿತ್ರಕ್ಕೆ ಸಾಯಿ ಪ್ರಕಾಶ್ ರವರ ಮಗ ಸಾಯಿ ಕೃಷ್ಣ ರವರು ಆಕ್ಷನ್ ಕಟ್ ಹೇಳಲಿದ್ದಾರೆ.

ಪ್ರಜ್ವಲ್ ಸಹಿ ಹಾಕಿರುವ ಮತ್ತೊಂದು ಚಿತ್ರ ಯಾವುದು?

ಡೈನಾಮಿಕ್ ಪ್ರಿನ್ಸ್ ಸಹಿ ಹಾಕಿರುವ ಮತ್ತೊಂದು ಚಿತ್ರವನ್ನು ಸಂಭಾಷಣೆ ಬರಹಗಾರ ಮನು ಎಂಬುವವರು ನಿರ್ದೇಶನ ಮಾಡಲಿದ್ದಾರಂತೆ. ಇದು ಅವರ ಚೊಚ್ಚಲ ನಿರ್ದೇಶನದ ಔಟ್-ಅಂಡ್-ಔಟ್ ಕಮರ್ಸಿಯಲ್ ಚಿತ್ರವಾಗಿರಲಿದೆಯಂತೆ. ಆದರೆ ಈ ಚಿತ್ರದ ಹೆಸರು ಏನು ಮತ್ತು ಇತರೆ ಯಾವುದೇ ಮಾಹಿತಿಗಳು ಹೊರಬಿದ್ದಿಲ್ಲ.

'ರಾಜ ಮಾಣಿಕ್ಯ'ದಲ್ಲಿ ಪ್ರಜ್ವಲ್ ಬಿಜಿ

ಅಂದಹಾಗೆ ಸದ್ಯದಲ್ಲಿ ಪ್ರಜ್ವಲ್ ದೇವರಾಜ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಂದಿಗಿನ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ರಾಜ ಮಾಣಿಕ್ಯ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರಕ್ಕೆ ಗುರು ದೇಶ್ ಪಾಂಡೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ತಗರಾರು' ಚಿತ್ರೀಕರಣ ಯಾವಾಗ?

ಸಾಯ್ ಕೃಷ್ಣ ನಿರ್ದೇಶನದ 'ತಗರಾರು' ಕನ್ನಡ ರಿಮೇಕ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಟಿಸುವುದು ಪಕ್ಕಾ ಆದಲ್ಲಿ, ಅವರು ಪ್ರಸ್ತುತ ತಮ್ಮ ಕೈಯಲ್ಲಿರುವ 'ರಾಜ ಮಾಣಿಕ್ಯ' ಚಿತ್ರೀಕರಣ ಪೂರ್ಣಗೊಂಡ ನಂತರ 'ತಗರಾರು'ಗೆ ಚಾಲನೆ ನೀಡಲಿದ್ದಾರೆ.

English summary
Kannada Actor Prajwal Devaraj to be act in Tamil 'Thagaraaru' kannada remake movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X