»   » ಅಂದು ಸುದೀಪ್, ಇಂದು ಅಣ್ಣಾವ್ರ ಮಗ ಪುನೀತ್.! ಏನಿದು ಲಿಂಕು.?

ಅಂದು ಸುದೀಪ್, ಇಂದು ಅಣ್ಣಾವ್ರ ಮಗ ಪುನೀತ್.! ಏನಿದು ಲಿಂಕು.?

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್....ಇವ್ರು ಸ್ಯಾಂಡಲ್ ವುಡ್ ನ ಸದ್ಯದ ಗೆಲ್ಲುವ ಕುದುರೆಗಳು.

ಇವರುಗಳ ಕಾಲ್ ಶೀಟ್ ಸಿಗ್ಬೇಕು ಅಂದ್ರೆ ನಿರ್ಮಾಪಕರು ವರ್ಷಾನುಗಟ್ಟಲೆ ಕಾಯಬೇಕು. ಹಾಗೆ ಸಮಯ ವ್ಯರ್ಥ ಮಾಡಿದ್ರೂ ಪರ್ವಾಗಿಲ್ಲ, ಕಲೆಕ್ಷನ್ ವಿಷಯದಲ್ಲಿ ಎಲ್ಲರೂ ಮಿನಿಮಂ ಗ್ಯಾರೆಂಟಿ ಎಂಬ ನಂಬಿಕೆ ನಿರ್ಮಾಪಕರದ್ದು. [ಸುದೀಪ್ ಗೆ ಬಹಿರಂಗ ಕ್ಷಮೆ ಕೇಳಿದ ಸೂರಪ್ಪ ಬಾಬು! ಏನಿದು ವಿವಾದ?]

ಈ ನಂಬಿಕೆಯಿಂದ್ಲೇ ವರ್ಷಗಳ ಕಾಲ ಚಿತ್ರ ನಿರ್ಮಾಣಕ್ಕೆ ಕೈ ಹಾಕದ ನಿರ್ಮಾಪಕ ಸೂರಪ್ಪ ಬಾಬು, 'ಕೋಟಿಗೊಬ್ಬ-2' ಚಿತ್ರಕ್ಕೆ ಬಂಡವಾಳ ಹಾಕಿ ಈಗ ಲಾಭ ಮಾಡಿಕೊಂಡಿದ್ದಾರೆ. ಅದರ ಪರಿಣಾಮ ಹೊಸ ಚಿತ್ರಕ್ಕೆ ಸದ್ಯದಲ್ಲೇ ಕೈ ಹಾಕುವ ಮುನ್ಸೂಚನೆ ನೀಡಿದ್ದಾರೆ. ಮುಂದೆ ಓದಿ....

ಸೂರಪ್ಪ ಬಾಬು ಹೊಸ ಚಿತ್ರ ಯಾರ ಜೊತೆ?

'ಕೋಟಿಗೊಬ್ಬ-2' ಚಿತ್ರದ ಕಲೆಕ್ಷನ್ ವಿಚಾರದಲ್ಲಿ ಬಂಪರ್ ಲಾಟರಿ ಹೊಡೆದಿರುವ ನಿರ್ಮಾಪಕ ಸೂರಪ್ಪ ಬಾಬುಗೆ ಕನ್ನಡದ ಮತ್ತೊಬ್ಬ 'ಸ್ಟಾರ್' ಕಾಲ್ ಶೀಟ್ ನೀಡಿದ್ದಾರಂತೆ. ಯಾರದು ಅಂತ ತಿಳಿಯಲು ಮುಂದಿನ ಫೋಟೋ ಸ್ಲೈಡ್ ನೋಡಿರಿ....

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಗಾಂಧಿನಗರ ಗಾಸಿಪ್ ಪಂಡಿತರ ಪ್ರಕಾರ, ಪುನೀತ್ ರಾಜ್ ಕುಮಾರ್ ರವರ ಕಾಲ್ ಶೀಟ್ ಪಡೆಯುವಲ್ಲಿ ನಿರ್ಮಾಪಕ ಸೂರಪ್ಪ ಬಾಬು ಯಶಸ್ವಿ ಆಗಿದ್ದಾರಂತೆ.

ಪುನೀತ್ ಜೊತೆ ಸೂರಪ್ಪ ಬಾಬು ಹೊಸ ಸಿನಿಮಾ?

ಪವರ್ ಸ್ಟಾರ್ ಪುನೀತ್ ಗೆ ಒಂದು ಸೂಪರ್ ಡ್ಯೂಪರ್ ಸಿನಿಮಾ ಮಾಡೋಕೆ ನಿರ್ಮಾಪಕ ಸೂರಪ್ಪ ಬಾಬು ಮನಸ್ಸು ಮಾಡಿದ್ದಾರಂತೆ.

ಇದು ಮೊದಲ ಬಾರಿ ಅಲ್ಲ.!

ಜೇಕಬ್ ವರ್ಗೀಸ್ ನಿರ್ದೇಶನದ ಪುನೀತ್ ಅಭಿನಯದ 'ಪೃಥ್ವಿ' ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹಾಕಿದ್ದರು.

ಪುನೀತ್ ಶೆಡ್ಯೂಲ್ ಸಖತ್ ಬಿಜಿ

'ರಾಜಕುಮಾರ' ಶೂಟಿಂಗ್ ನಲ್ಲಿ ಬಿಜಿ ಆಗಿರುವ ಅಪ್ಪು ಕೈಯಲ್ಲಿ 'ಜೇಮ್ಸ್' ಮತ್ತು 'ಆಹ್ವಾನ' ಚಿತ್ರಗಳಿವೆ. ಅದು ಮುಗಿದ ಬಳಿಕ ಸೂರಪ್ಪ ಬಾಬು ಕೈಗೆ ಸಿಗ್ತಾರೋ, ಇಲ್ಲ...ಮೊದಲು ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಪುನೀತ್ ಜೈ ಎನ್ನುತ್ತಾರೋ...ನೋಡ್ಬೇಕು.

English summary
According to the Grapevine, Producer Soorappa Babu has bagged the dates of Power Star Puneeth Rajkumar for a new film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada