Don't Miss!
- Lifestyle
ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಕೆ ತುಂಬಾ ಕಷ್ಟ, ಏಕೆ?
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puneeth Remuneration: ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್'ಗೆ ಪಡೆದ ಸಂಭಾವನೆ ಎಷ್ಟು?
ಕಳೆದೊಂದು ವಾರದಿಂದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಜಾತ್ರೆ. ತಮ್ಮದೇ ಸಿನಿಮಾ ಎನ್ನುವಂತೆ ಪವರ್‌ಸ್ಟಾರ್ ಫ್ಯಾನ್ಸ್ 'ಜೇಮ್ಸ್' ಜಾತ್ರೆ ಮಾಡಿದ್ದರು. ಮಾರ್ಚ್ 17ರಂದು ಪುನೀತ್ ಹುಟ್ಟುಹಬ್ಬದಂದು ರಿಲೀಸ್ ಆಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಕನ್ನಡ ಸಿನಿಮಾ ಕೂಡ ನಾಲ್ಕು ದಿನಕ್ಕೆ 100 ಕೋಟಿ ಗಳಿಸಬಹುದು ಎಂಬುದನ್ನು ಈ ಸಿನಿಮಾ ತೋರಿಸಿಕೊಟ್ಟಿದೆ.
Recommended Video

ಎಲ್ಲಾ ಕಡೆಯಲ್ಲೂ 'ಜೇಮ್ಸ್' ಸಿನಿಮಾ ಹಾಗೂ ಬಾಕ್ಸಾಫೀಸ್ ಗಳಿಕೆ ಬಗ್ಗೆನೇ ಮಾತು. ಇನ್ನೇನು 'ಜೇಮ್ಸ್' ಸಿನಿಮಾ ರಿಲೀಸ್ ಆಗಿದೆ. ಕೊನೆಯ ಸಿನಿಮಾ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಈಗ ನಿಧಾನವಾಗಿ ಸ್ಯಾಂಡಲ್‌ವುಡ್ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅಪ್ಪು ಕೊನೆಯ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಎಂಬುದು ಚರ್ಚೆಯಾಗುತ್ತಿದೆ. ಹಾಗಿದ್ದರೆ, ಕೊನೆಯ ಸಿನಿಮಾ 'ಜೇಮ್ಸ್'ಗೆ ಅಪ್ಪು ಪಡೆದ ಸಂಭಾವನೆ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಆಗುತ್ತಿರುವ ಚರ್ಚೆ ಏನು ತಿಳಿಯಲು ಮುಂದೆ ಓದಿ.
'ಕನ್ನಡ
ಸಿನಿಮಾ
ಮಾರ್ಕೆಟ್
ಏನೆಂದು
ಅಪ್ಪು
ಪರಿಚಯಿಸಿದ್ದಾರೆ,
ಉಳಿಸುವ
ಜವಾಬ್ದಾರಿ
ನಿಮ್ಮದು'

ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದ 'ಜೇಮ್ಸ್'
'ಜೇಮ್ಸ್' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಅಪ್ಪು ಸಿನಿಮಾ ನೋಡಲು ಕರ್ನಾಟಕದ ಜನತೆ ಕಾತುರರಾಗಿತ್ತು. ಇನ್ನೊಂದು ಕಡೆ ಚಿತ್ರತಂಡ ಕೂಡ 'ಜೇಮ್ಸ್' ಸಿನಿಮಾವನ್ನು ಹುಟ್ಟುಹಬ್ಬದಂದೇ ಬಿಡುಗಡೆ ಮಾಡಲು ಸಜ್ಜಾಗಿ ನಿಂತಿತ್ತು. ಅದರಂತೆ 'ಜೇಮ್ಸ್' ತೆರೆಕಂಡು ನಾಲ್ಕು ದಿನಗಳಲ್ಲೇ 100 ಕೋಟಿ ಕ್ಲಬ್ ಸೇರಿದೆ. ಕನ್ನಡ ಚಿತ್ರರಂಗದಲ್ಲಿಯೇ ಅತಿ ವೇಗವಾಗಿ 100 ಕೋಟಿ ಗಳಿಸಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

'ಜೇಮ್ಸ್' ಗೆಲ್ಲಿಸಿದ ಅಭಿಮಾನಿಗಳು
'ಜೇಮ್ಸ್' ಅಭಿಮಾನಿಗಳ ಪಾಲಿಗೆ ಭಾವನಾತ್ಮಕ ಸಿನಿಮಾ. ಈ ಸಿನಿಮಾವನ್ನು ಒಂದು ವಾರ ಹೌಸ್‌ಫುಲ್ ಪ್ರದರ್ಶನ ಕಾಣುತ್ತೆ ಅನ್ನುವುದು ಬಹುತೇಕ ಫಿಕ್ಸ್ ಆಗಿತ್ತು. ಪುನೀತ್ ಕೊನೆಯ ಸಿನಿಮಾ ನಿರೀಕ್ಷೆಯಂತೆ ಬಾಕ್ಸಾಫೀಸ್‌ನಲ್ಲಿ ಅಭೂತ ಪೂರ್ವ ಯಶಸ್ಸು ಕಂಡಿದೆ. ಆದರೆ, ಇಷ್ಟು ದೊಡ್ಡ ಯಶಸ್ಸನ್ನು ನೋಡಲು ಪುನೀತ್ ಜೊತೆಯಲ್ಲಿ ಎನ್ನುವ ಕೊರಗು ಕೂಡ ಅಭಿಮಾನಿಗಳಲ್ಲಿ ಇದ್ದೇ ಇದೆ. 'ಜೇಮ್ಸ್' ಬಾಕ್ಸಾಫೀಸ್ ದಾಖಲೆಯನ್ನು ಕಂಡು ಇಡೀ ಸ್ಯಾಂಡಲ್‌ವುಡ್ ದಂಗಾಗಿ ಹೋಗಿದೆ.

'ಜೇಮ್ಸ್'ಗೆ ಅಪ್ಪು ಪಡೆದ ಸಂಭಾವನೆ ಎಷ್ಟು?
ಒಂದ್ಕಡೆ 'ಜೇಮ್ಸ್' ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಚರ್ಚೆಯಾಗುತ್ತಿದ್ದರೆ, ಇನ್ನೊಂದು ಕಡೆ 'ಜೇಮ್ಸ್'ಗೆ ಅಪ್ಪು ಪಡೆದ ಸಂಭಾವನೆ ಬಗ್ಗೆ ಸಿನಿಮಾ ಮಂದಿ ಮಾತಾಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ, ಪುನೀತ್ ರಾಜ್‌ಕುಮಾರ್ ಈ ಚಿತ್ರಕ್ಕೆ 6 ರಿಂದ 7 ಕೋಟಿ ಸಂಭಾವನೆ ಪಡೆದಿರಬಹುದು ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಇದು ಕೇವಲ ಗಾಂಧಿನಗರದಲ್ಲಿ ನಡೆಯುತ್ತಿರುವ ಚರ್ಚೆ. ಅಪ್ಪು ಸಂಭಾವನೆ ಬಗ್ಗೆ 'ಜೇಮ್ಸ್' ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಜೊತೆ ಸಂಭಾವನೆ ಬಗ್ಗೆ ಚರ್ಚೆ ಮಾಡಿಲ್ಲ. ಚಿತ್ರರಂಗವನ್ನು ಹತ್ತಿರದಿಂದ ಬಲ್ಲ ನಿರ್ಮಾಪಕರ ವಲಯ ಅಪ್ಪು 6 ರಿಂದ 7 ಕೋಟಿ ಪಡೆದಿರಬಹುದು ಎಂದು ಅಂದಾಜಿಸಿದೆ.

ಅಪ್ಪು ಸಂಭಾವನೆ ಬಗ್ಗೆ ಟಾಕ್ ಏನು?
ಪುನೀತ್ ರಾಜ್ ಕುಮಾರ್ ಸಂಭಾವನೆ ಬಗ್ಗೆ ಗಾಂಧಿನಗರದಲ್ಲಿ ಒಬ್ಬೊಬ್ಬರು ಒಂದೊಂದು ಮಾತಾಡುತ್ತಿದ್ದಾರೆ. ಪುನೀತ್ ಒಂದು ಸಿನಿಮಾ ಮೊದಲು 5 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಸಿನಿಮಾ ಎರಡು ಭಾಷೆಗಳಲ್ಲಿ ಬಿಡುಗಡೆಯಾಗಿವೆ. ಕನ್ನಡ ಹಾಗೂ ತೆಲುಗಿನಲ್ಲಿ 'ಯುವರತ್ನ' ರಿಲೀಸ್ ಆಗಿತ್ತು. 'ಜೇಮ್ಸ್' ಕೂಡ ತೆಲುಗಿನಲ್ಲಿ ಬಿಡುಗಡೆ ಮಾಡುವ ಆಲೋಚನೆ ಮಾಡಿರಲು ಸಾಧ್ಯವಿದೆ. ಈ ಕಾರಣಕ್ಕೆ 5 ಕೋಟಿಯಿಂದ 6 ಅಥವಾ 7 ಕೋಟಿಗೆ ಹೆಚ್ಚಿಸಿಕೊಂಡಿರಬಹುದು ಎನ್ನುತ್ತಿವೆ ಮೂಲಗಳು. ಆದರೆ, ಕನ್ನಡದ ಸ್ಟಾರ್ ತಾವು ಪಡಯೋ ಸಂಭಾವನೆ ಎಷ್ಟು ಅನ್ನುವುದನ್ನು ರಿವೀಲ್ ಮಾಡುವುದಿಲ್ಲ. ಅವರ ಸಿನಿಮಾ ನಿರ್ಮಸಿದ ನಿರ್ಮಾಪಕರೂ ಕೂಡ ಈ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ.