For Quick Alerts
  ALLOW NOTIFICATIONS  
  For Daily Alerts

  'ಯುವರತ್ನ' ಚಿತ್ರಕ್ಕಾಗಿ ಬರ್ತಾರಾ ಬಾಲಿವುಡ್ ಬಿಗ್ ಸ್ಟಾರ್ ಮಗಳು.!

  |
  ಯುವರತ್ನ' ಚಿತ್ರಕ್ಕಾಗಿ ಬರ್ತಾರಾ ಬಾಲಿವುಡ್ ಬಿಗ್ ಸ್ಟಾರ್ ಮಗಳು.! | FILMIBEAT KANNADA

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ಇದೇ ವಾರ ವರ್ಲ್ಡ್ ವೈಡ್ ಬಿಡುಗಡೆಯಾಗ್ತಿದೆ. ಮುಂದಿನ ವಾರದಿಂದ ಹೊಸ ಸಿನಿಮಾದ ಚಿತ್ರೀಕರಣವನ್ನ ಅಪ್ಪು ಶುರು ಮಾಡಲಿದ್ದಾರೆ.

  ಹೌದು, ರಾಜಕುಮಾರ ಚಿತ್ರದ ಯಶಸ್ಸಿನ ನಂತರ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಮತ್ತೆ ಒಂದಾಗಿದ್ದು, 'ಯುವರತ್ನ' ಎಂಬ ಸಿನಿಮಾ ಮಾಡುತ್ತಿದ್ದಾರೆ.

  ಫೆಬ್ರವರಿ 14 ರಿಂದ 'ಯುವರತ್ನ'ನ ಆಕ್ಷನ್ ಆರಂಭ

  ಫೆಬ್ರವರಿ 14 ರಿಂದ 'ಯುವರತ್ನ' ಆಕ್ಷನ್ ದೃಶ್ಯಗಳನ್ನ ಶೂಟ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಸಿಕ್ತಿದೆ. ಅಂದ್ಹಾಗೆ, ಈ ಚಿತ್ರದಲ್ಲಿ ಅಪ್ಪುಗೆ ಹೀರೋಯಿನ್ ಯಾರು ಎಂಬುದು ಸದ್ಯದ ಕುತೂಹಲ. ಈ ಕುತೂಹಲಕ್ಕೆ ಬಾಲಿವುಡ್ ಸ್ಟಾರ್ ನಟನ ಮಗಳ ಹೆಸರು ಕೇಳಿಬರ್ತಿದೆ. ಯಾರದು? ಮುಂದೆ ಓದಿ.....

  'ಯುವರತ್ನ'ನ ಹೀರೋಯಿನ್ ಸಯೇಶಾ ಸೈಗಲ್

  'ಯುವರತ್ನ'ನ ಹೀರೋಯಿನ್ ಸಯೇಶಾ ಸೈಗಲ್

  ಬಾಲಿವುಡ್ ನಟ ಮತ್ತು ನಿರ್ಮಾಪಕ ಸುಮೀತ್ ಸೈಗಲ್ ಅವರ ಮಗಳು ಸಯೇಶಾ ಸೈಗಲ್ ಈಗ ಯುವರತ್ನ ಚಿತ್ರದ ಮೂಲಕ ಕನ್ನಡಕ್ಕೆ ಬರಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕೇಳಿಬರ್ತಿದೆ. ಆದ್ರೆ, ಇದು ಅಧಿಕೃತವಾಗಿ ಘೋಷಣೆಯಾಗಿಲ್ಲ.

  ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಈ ಸಯೇಶಾ?

  ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಈ ಸಯೇಶಾ?

  ಬಾಲಿವುಡ್ ತಾರಾ ದಂಪತಿಯ ಮಗಳಾಗಿದ್ದರೂ ಈಕೆ ಮೊದಲ ನಟಿಸಿದ್ದು, ತೆಲುಗಿನ ಅಖಿಲ್ ಚಿತ್ರದಲ್ಲಿ. ನಾಗಾರ್ಜುನ ಅವರ ಎರಡನೇ ಪುತ್ರ ಅಕ್ಕಿನೇನಿ ಅಖಿಲ್ ಅಭಿನಯದ ಚೊಚ್ಚಲ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಇದು ಸಯೇಶಾ ಅವರ ಮೊದಲ ಸಿನಿಮಾ.

  ರಾಜಕುಮಾರ ನಂತರ 'ಯಜಮಾನ'ನಿಗೆ ಹಾಡು ಬರೆದ ಸಂತೋಷ್

  ಬಾಲಿವುಡ್ ಗೂ ಎಂಟ್ರಿ

  ಬಾಲಿವುಡ್ ಗೂ ಎಂಟ್ರಿ

  ಅಖಿಲ್ ಚಿತ್ರದ ಬಳಿಕ ಅಜಯ್ ದೇವಗನ್ ಅಭಿನಯಿಸಿದ್ದ ಶಿವಾಯ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು. ನಂತರ ತಮಿಳಿನಲ್ಲಿ ವನಮಗನ್ ಸಿನಿಮಾದ ಮೂಲಕ ಕಾಲಿವುಡ್ ನಲ್ಲಿ ಕಾಣಿಸಿಕೊಂಡರು. ವಿಜಯ್ ಸೇತುಪತಿ ಜೊತೆ ಜುಂಗ ಸೇರಿದಂತೆ ಗಜನಿಕಾಂತ್, ಕಾಪ್ಪಾನ್ ಅಂತಹ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  'ಯುವರತ್ನ' ಅಪ್ಪುಗೆ ಜೋಡಿಯಾಗ್ತಾರೆ ಸ್ಟಾರ್ ನಾಯಕಿ.!

  ಮದ್ವೆ ಸುದ್ದಿಯೂ ಇದೆ.!

  ಮದ್ವೆ ಸುದ್ದಿಯೂ ಇದೆ.!

  ಈ ಕಡೆ ಯುವರತ್ನ ಚಿತ್ರಕ್ಕೆ ನಾಯಕಿಯಾಗುವ ಸುದ್ದಿ ಕೇಳಿಬಂದಿದ್ದರೇ, ಆ ಕಡೆ ತಮಿಳು ನಟ ಆರ್ಯ ಜೊತೆ ಸಯೇಶಾ ಸೈಗಲ್ ಮದ್ವೆ ಆಗುತ್ತಿದ್ದಾರೆ ಎಂಬ ಸುದ್ದಿ ಚರ್ಚೆಯಾಗ್ತಿದೆ. ಮಾರ್ಚ್ ತಿಂಗಳಲ್ಲಿ ಸಯೇಶಾ ಸೈಗಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ.

  English summary
  According to source bollywood actor sumeet saigal daughter sayesha saigal will debut to sandalwood with puneeth rajkumar's yuvaratna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X