'ಪುಷ್ಪ' ಚಿತ್ರದಲ್ಲಿ ಸ್ಟಾರ್ ನಟನ ಜೀವನ ಕಥೆ, ಅನುಮತಿ ಸಹ ಸಿಕ್ಕಿದೆಯಂತೆ!

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟಿಸುತ್ತಿರುವ ಪುಷ್ಪ ಸಿನಿಮಾ ಸೌತ್ ಇಂಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ಅಲ್ಲು ಅರ್ಜುನ್ ಅವರ ಲುಕ್, ಪೋಸ್ಟರ್ ಹಾಗೂ ಮೇಕಿಂಗ್ ಚಿತ್ರಗಳು ಚಿತ್ರಪ್ರೇಮಿಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದೆ.

ಪುಷ್ಪ ಸಿನಿಮಾದ ಕಥೆ ಬಗ್ಗೆ ಹಲವು ಚರ್ಚೆಗಳು ನಡೆದಿದೆ. ಚಿತ್ರದ ಟೈಟಲ್ ನೋಡಿದ್ಮೇಲೆ ಇದು ಬೆಂಗಳೂರಿನ 'ಕಾಟನ್ ಪೇಟೆ ಪುಷ್ಪ' ಎಂಬ ರೌಡಿ ಶೀಟರ್ ಕಥೆ ಎಂದು ಹೇಳಲಾಯಿತು. ನಂತರ ಆಂಧ್ರದ ವ್ಯಕ್ತಿಯೊಬ್ಬನ ಕಥೆ ಎಂದು ಚರ್ಚೆಯಾಯಿತು. ಇದೀಗ, ಪುಷ್ಪ ಸಿನಿಮಾದಲ್ಲಿ ತೆಲುಗು ಸೂಪರ್ ಸ್ಟಾರ್ ನಟನೊಬ್ಬನ ಜೀವನ ಕಥೆಯೂ ಸೇರಿದೆ ಎಂಬ ವಿಚಾರ ಬಹಿರಂಗವಾಗಿದೆ. ಮುಂದೆ ಓದಿ...

ಪುಷ್ಪ ಕಥೆ ರಿಯಲ್ ಸ್ಟೋರಿ

ಪುಷ್ಪ ಕಥೆ ರಿಯಲ್ ಸ್ಟೋರಿ

ಪುಷ್ಪ ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಕಥೆ ಮಾಡಿದ್ದಾರೆ. ಸುಕುಮಾರ್ ಸಿನಿಮಾಗಳಲ್ಲಿ ಸಹಜವಾಗಿ ನೈಜತೆಗೆ ಹತ್ತಿರವಿರುತ್ತದೆ. ಸುಕುಮಾರ್ ನಿರ್ದೇಶಿಸಿದ್ದ ಕೊನೆಯ ಚಿತ್ರ ರಂಗಸ್ಥಲಂ ಮೇಕಿಂಗ್ ಹಾಗು ಕಥೆ ವಿಚಾರಕ್ಕೆ ದೊಡ್ಡ ಹಿಟ್ ಆಗಿತ್ತು.

ಜೂ ಎನ್‌ಟಿಆರ್ ಕಥೆ ಸೇರಿದೆ!

ಜೂ ಎನ್‌ಟಿಆರ್ ಕಥೆ ಸೇರಿದೆ!

ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿರುವ ಲೇಟೆಸ್ಟ್ ವಿಷಯ ಏನಪ್ಪಾ ಅಂದ್ರೆ, ಪುಷ್ಪ ಸಿನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ಅವರ ಜೀವನ ಕಥೆ ಸೇರಿದೆಯಂತೆ. ಎನ್ ಟಿ ಆರ್ ಜೀವನದಲ್ಲಿ ನಡೆದಿರುವ ಕೆಲವು ಘಟನೆಗಳನ್ನು ಆಧರಿಸಿ ಪುಷ್ಪ ಸಿನಿಮಾದ ಕಥೆ ಮಾಡಿದ್ದಾರಂತೆ ಸುಕುಮಾರ್. ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಸಿನಿಮಾದ ಮೇಲಿನ ಕುತೂಹಲ ದೊಡ್ಡಮಟ್ಟದಲ್ಲಿ ಹೆಚ್ಚಾಗಿದೆ.

ಅನುಮತಿ ಪಡೆದು ಕಥೆ ಬರೆದಿದ್ದಾರಂತೆ

ಅನುಮತಿ ಪಡೆದು ಕಥೆ ಬರೆದಿದ್ದಾರಂತೆ

ಈ ಹಿಂದೆ ಎನ್‌ ಟಿ ಆರ್ ಜೊತೆಯಲ್ಲಿ 'ನಾನ್ನತೋ ಪ್ರೇಮತೋ' ಎಂಬ ಸಿನಿಮಾ ಮಾಡಿದ್ದರು. ಈ ಸಿನಿಮಾ ಬಳಿಕ ಸುಕುಮಾರ್ ಮತ್ತು ಯಂಗ್ ಟೈಗರ್ ನಡುವಿನ ಸ್ನೇಹ ಮತ್ತಷ್ಟು ಆತ್ಮೀಯವಾಯಿತು. ಈ ವೇಳೆ ಎನ್‌ಟಿಆರ್ ಕೆಲವು ಘಟನೆಗಳನ್ನು ಸುಕುಮಾರ್ ಬಳಿ ಹೇಳಿಕೊಂಡಿದ್ದರಂತೆ. ಅದೇ ವಿಚಾರವನ್ನಿಟ್ಟು ಪುಷ್ಪ ಕಥೆ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ನಟನ ಬಳಿಯೂ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.

ದೊಡ್ಡ ಬಜೆಟ್‌ನಲ್ಲಿ ಸಿನಿಮಾ

ದೊಡ್ಡ ಬಜೆಟ್‌ನಲ್ಲಿ ಸಿನಿಮಾ

ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಪುಷ್ಪ ಸಿನಿಮಾ ಸುಮಾರು 250 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಅಲ್ಲು ಅರ್ಜುನ್ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಪುಷ್ಪ ಸಿನಿಮಾದ ಅರ್ಧದಷ್ಟು ಭಾಗ ಚಿತ್ರೀಕರಣ ಆಗಿದೆ. ನಿಹಾರಿಕಾ ಮದುವೆ ವಿಶೇಷವಾಗಿ ಉದಯ್‌ಫುರ್ ಹೋಗಿರುವ ಅಲ್ಲು ಅರ್ಜುನ್ ಅಲ್ಲಿಂದ ಬಂದ ನಂತರ ಮತ್ತೆ ಶೂಟಿಂಗ್ ಆರಂಭಿಸಲಿದ್ದಾರೆ.

More from Filmibeat

English summary
Director Sukumar revealed that Pushpa movie story line based on junior Ntr life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X