For Quick Alerts
  ALLOW NOTIFICATIONS  
  For Daily Alerts

  10 ಕೋಟಿ ರೂ. ಆಫರ್ ತಿರಸ್ಕರಿಸಿದ ಅಲ್ಲು ಅರ್ಜುನ್ ಗ್ರೇಟ್ ಎಂದ ಫ್ಯಾನ್ಸ್!

  |

  'ಪುಷ್ಪ'ರಾಜ್ ಅವತಾರದಲ್ಲಿ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದು ಗೊತ್ತೇಯಿದೆ. ಮತ್ತೊಂದ್ಕಡೆ 'ಪುಷ್ಪ'-2 ಸಿನಿಮಾ ಯಾವಾಗ ಶುರುವಾಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಇಂತಹ ಹೊತ್ತಲ್ಲೇ ಐಕಾನ್ ಸ್ಟಾರ್ ಒಂದು ಭಾರೀ ಆಫರ್‌ ತಿರಸ್ಕರಿಸಿದ್ದಾರಂತೆ. ಈ ಸುದ್ದಿ ಕೇಳಿ ಟಾಲಿವುಡ್ ದಂಗಾಗಿದೆ.

  ಸುಕುಮಾರ್ 'ಪುಷ್ಪ' ಸೀಕ್ವೆಲ್ ಶೂಟಿಂಗ್ ತಡ ಮಾಡ್ತಿದ್ದಾರೆ. ಈ ಗ್ಯಾಪ್‌ನಲ್ಲಿ ಸ್ಟೈಲಿಶ್ ಸ್ಟಾರ್ ಒಂದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಇತ್ತೀಚೆಗೆ ಬನ್ನಿ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಲ್ಲು ಅರ್ಜುನ್‌ಗೆ ಕ್ರೇಜ್ ಇರುವುದರಿಂದ ಸಾಕಷ್ಟು ಜಾಹೀರಾತುಗಳ ಅವಕಾಶಗಳು ಸಿಗುತ್ತಿದೆ. ಕೋಟಿ ಕೋಟಿ ರೂ. ಕೊಟ್ಟು ಐಕಾನ್ ಸ್ಟಾರ್‌fನ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳುವುದಕ್ಕೆ ಕಂಪನಿಗಳು ಮುಗಿಬಿದ್ದಿವೆ.

  'ಊ ಅಂಟಾವಾ ಮಾವ..' ಅಂದಿದ್ದ ಸಮಂತಾ 'ಪುಷ್ಪ 2' ನಲ್ಲೂ ಇರ್ತಾರಾ? ಟಾಲಿವುಡ್‌ನಲ್ಲೇನಿದು ಗುಸು ಗುಸು?'ಊ ಅಂಟಾವಾ ಮಾವ..' ಅಂದಿದ್ದ ಸಮಂತಾ 'ಪುಷ್ಪ 2' ನಲ್ಲೂ ಇರ್ತಾರಾ? ಟಾಲಿವುಡ್‌ನಲ್ಲೇನಿದು ಗುಸು ಗುಸು?

  ಲಿಕ್ಕರ್, ಗುಟ್ಕ ಬ್ರಾಂಡ್ ಕಂಪೆನಿಗಳು ಕೂಡ ಜಾಹೀರಾತಿನಲ್ಲಿ ನಟಿಸುವಂತೆ ಸ್ಟೈಲಿಶ್ ಸ್ಟಾರ್‌ಗೆ ದುಂಬಾಲು ಬಿದ್ದಿವೆಯಂತೆ. ಸದ್ಯ ಒಂದು ಜಾಹೀರಾತಿನಲ್ಲಿ ನಟಿಸಲು ಅಲ್ಲು ಅರ್ಜುನ್ 7.5 ಕೋಟಿ ರೂ. ಸಂಭಾವನೆ ಪಡೀತ್ತಾರೆ ಅಂತಿವೆ ಟಾಲಿವುಡ್ ಮೂಲಗಳು. ಆದರೆ ಲಿಕ್ಕರ್, ಗುಟ್ಕ ಬ್ರಾಂಡ್ ಕಂಪೆನಿವೊಂದು ತಮ್ಮ ಜಾಹೀರಾತಿಗಾಗಿ ಐಕಾನ್‌ ಸ್ಟಾರ್‌ಗೆ 10 ಕೋಟಿ ರೂ. ಆಫರ್ ಮಾಡಿದೆಯಂತೆ. ಅಬ್ಬಬ್ಬಾ ಅಂದರೆ ಒಂದು ಅಥವಾ ಎರಡು ದಿನ ಜಾಹೀರಾತು ಚಿತ್ರೀಕರಣ ನಡೆಯುತ್ತದೆ. ಇಷ್ಟಕ್ಕೇ 10 ಕೋಟಿ ರೂ. ಸಂಭಾವನೆ ಅಂದರೆ ತಮಾಷೆ ಮಾತಲ್ಲ.

   ಆಫರ್ ತಿರಸ್ಕರಿಸಿದ್ದೇಕೆ ಬನ್ನಿ?

  ಆಫರ್ ತಿರಸ್ಕರಿಸಿದ್ದೇಕೆ ಬನ್ನಿ?

  ಜನರಿಗೆ ಹಾನಿಕಾರಕವಾಗುವಂತಹ ಉತ್ಪನ್ನಗಳನ್ನು ಪ್ರಮೋಟ್ ಮಾಡುವುದಿಲ್ಲ ಎಂದು ಹೇಳಿ ಐಕಾನ್ ಸ್ಟಾರ್ ಈ ಭಾರೀ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ನಮ್ ಬಾಸ್ ಗ್ರೇಟ್ ಎಂದು ಕಾಲರ್ ಎಗರಿಸುತ್ತಿದ್ದಾರೆ. ಇಂತಹ ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳಲ್ಲಿ ಮಾತ್ರವಲ್ಲ ಪ್ರೇಕ್ಷಕರಲ್ಲಿ ನೆಗೆಟಿವಿಟಿ ಸ್ಪ್ರೆಡ್ ಆಗುತ್ತದೆ ಎಂದು ಹೇಳಿ ಬನ್ನಿ ಈ ನಿರ್ಧಾರ ಕೈಗೊಂಡಿದ್ದಾರೆ. ಹಣಕ್ಕೆ ಆಸೆ ಬೀಳದೇ ಇಂತಹದನ್ನು ದೂರ ಇಟ್ಟಿದ್ದು ಒಳ್ಳೆದಾಯಿತು ಎಂದು ಟಾಲಿವುಡ್ ಮಂದಿ ಹೇಳುತ್ತಿದ್ದಾರೆ.

   ಬಾಲಿವುಡ್ ಸ್ಟಾರ್ಸ್ ಎಡವಟ್ಟು

  ಬಾಲಿವುಡ್ ಸ್ಟಾರ್ಸ್ ಎಡವಟ್ಟು

  ಕೆಲವೇ ದಿನಗಳ ಹಿಂದೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸೂಪರ್‌ ಸ್ಟಾರ್‌ಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಕೊನೆಗೆ ತಪ್ಪಿನ ಅರಿವಾಗಿ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೂಡ ಕೇಳಿದ್ದರು.

   'ಪುಷ್ಪ'-2 ಮೇಲೆ ಭಾರೀ ನಿರೀಕ್ಷೆ

  'ಪುಷ್ಪ'-2 ಮೇಲೆ ಭಾರೀ ನಿರೀಕ್ಷೆ

  'ಬಾಹುಬಲಿ' ಹಾಗೂ 'ಕೆಜಿಎಫ್' ಸರಣಿ ನಂತರ 'ಪುಷ್ಪ' ಸರಣಿ ಕುತೂಹಲ ಕೆರಳಿಸಿದೆ. ನಿರೀಕ್ಷೆ ಹೆಚ್ಚಾಗ್ತಿದ್ದಂತೆ ನಿರ್ದೇಶಕ ಸುಕುಮಾರ್ ಕಥೆಯನ್ನು ತಿದ್ದಿ ತೀಡುವ ಕೆಲಸ ಶುರು ಮಾಡಿದ್ದಾರೆ. ಹಾಗಾಗಿ ಸಿನಿಮಾ ಸೆಟ್ಟೇರುವುದು ತಡವಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ಚಿತ್ರೀಕರಣ ಶುರುವಾಗಬೇಕಿತ್ತು. ಕಥೆಯಲ್ಲಿ ಬದಲಾವಣೆ ಮಾಡುತ್ತಿರುವ ಕಾರಣಕ್ಕೆ ತಡವಾಗುತ್ತಿದೆ.

   'ಪುಷ್ಪ'-2ಗೆ ಹೆಚ್ಚಾಯ್ತು ಸಂಭಾವನೆ?

  'ಪುಷ್ಪ'-2ಗೆ ಹೆಚ್ಚಾಯ್ತು ಸಂಭಾವನೆ?

  ಕಳೆದ ವರ್ಷ ತೆರೆಗಪ್ಪಳಿಸಿದ್ದ 'ಪುಷ್ಪ' ಸಿನಿಮಾ 350 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಆದರೆ 'ಪುಷ್ಪ'-2 ಚಿತ್ರವನ್ನು 300 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡುವ ಮಾತುಗಳು ಕೇಳಿಬರ್ತಿದೆ. ಅದಕ್ಕೆ ತಕ್ಕಂತೆ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಪ್ರೀಕ್ವೆಲ್‌ಗೆ 18 ಕೋಟಿ ರೂ. ಸಂಭಾವನೆ ಪಡೆದಿದ್ದ ಸುಕ್ಕು ಸೀಕ್ವೆಲ್‌ಗೆ 40 ಕೋಟಿ ರೂ. ಕೋಟಿ ಪಡಿತ್ತಿದ್ದಾರಂತೆ. ಅದೇ ರೀತಿ ಅಲ್ಲು ಅರ್ಜುನ್ 90 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಅನ್ನಲಾಗುತ್ತಿದೆ.

   ಶೀಘ್ರದಲ್ಲೇ ಸೆಟ್ಟೇರಲಿದೆ ಸಿನಿಮಾ

  ಶೀಘ್ರದಲ್ಲೇ ಸೆಟ್ಟೇರಲಿದೆ ಸಿನಿಮಾ

  ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ'-2 ಮುಗಿಯುವವರೆಗೂ ಬೇರೆ ಸಿನಿಮಾ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಈಗಾಗಲೇ ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್‌ ಜೋರಾಗಿ ನಡೀತಿದ್ದು, ಇದೇ ತಿಂಗಳು ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಮುಂದಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ 'ಪುಷ್ಪ'ರಾಜ್ ವರ್ಸಸ್ ಭನ್ವರ್ ಸಿಂಗ್ ಶೇಖಾವತ್ ಕದನ ನೋಡಬಹುದು.

  English summary
  Pushpa Star Allu Arjun Turns Down 10 crore ad Deal For Pan Masala Brand.Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X