For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಜೊತೆ ರಾಗಿಣಿ ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್

  |

  "ಇನ್ನುಂದೆ ಐಟಂ ಹಾಡಿಗೆ ಕುಣಿಯುವುದಿಲ್ಲ" ಹೀಗೆಂದು ಬಹಳಷ್ಟು ಬಾರಿ ಹೇಳಿದ್ದರು 'ಗ್ಲಾಮರ್ ರಾಣಿ' ರಾಗಿಣಿ. ಉದಯ ಪ್ರಕಾಶ್ ನಿರ್ದೇಶನದ ಕಳ್ಳ ಮಳ್ಳ ಸುಳ್ಳ' ಚಿತ್ರದಲ್ಲಿ ರಾಗಿಣಿ 'ಐಟಂ' ಹಾಡಿಗೆ ಕುಣಿದಿದ್ದೇ ತಡ, ರಾಗಿಣಿ ಇದ್ದಕ್ಕಿದ್ದಂತೆ ಕರ್ನಾಟಕದ ಮೂಲೆಮೂಲೆಯಲ್ಲೂ ಪ್ರಸಿದ್ಧರಾಗಿಬಿಟ್ಟರು. ನಂತರ ಒಂದಾದಮೇಲೊಂದು ಐಟಂ ಹಾಡಿನ ಆಫರ್ ರಾಗಿಣಿ ಬೆನ್ನು ಬಿದ್ದಿದ್ದವು.

  ಆದರೆ ಆಗ, ತಾವಿನ್ನು ಐಟಂ ಹಾಡಿಗೆ ಹೆಜ್ಜೆ ಹಾಕುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದರು ರಾಗಿಣಿ. ಆದರೆ ಈಗ ಅದೇ ರಾಗಿಣಿ ಮತ್ತೊಂದು ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಶಿವರಾಜ್ ಕುಮಾರ್ ನಟನೆಯ 'ಲಕ್ಷ್ಮೀ' ಹೆಸರಿನ ಚಿತ್ರದಲ್ಲಿ 'ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್... ಕಳೆದೋಯ್ದು ನನ್ನ ಪುಸ್ಸಿ ಕ್ಯಾಟ್...' ಎಂಬ ಹಾಡಿಗೆ ರಾಗಿಣಿ ಕಾಲು ಸದ್ಯದಲ್ಲೇ ಕುಣಿಯಲಿದೆ. ಈ ಮೂಲಕ ತಮ್ಮ ಮಾತನ್ನು ತಾವೇ ಮುರಿದಿದ್ದಾರೆ.

  ಅದೇನೂ ಮಹಾ ದೊಡ್ಡ ವಿಷಯವೇನಲ್ಲ ಬಿಡಿ! ಇತ್ತೀಚಿಗೆ ಹಿರಿಯ ನಿರ್ದೇಶಕ ಎಸ್ ನಾರಾಯಣ್ ತಾವಿನ್ನು ನಿರ್ದೇಶನ ಮಾಡುವುದಿಲ್ಲ ಎಂದು ಘೋಷಿಸಿ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ನಾರಾಯಣ್ ನಿರ್ದೇಶನದ 'ಚೆಲುವಿನ ಚಿತ್ತಾರ'ದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದ ನಟಿ 'ಅಮೂಲ್ಯಾ' ಕೂಡ ನಾರಾಯಣ್ ಹಾದಿ ಹಿಡಿದು ಇನ್ನುಂದೆ ನಟಿಸುವುದಿಲ್ಲ ಎಂದಿದ್ದವರು ಇದೀಗ ಮತ್ತೆ ಗಣೇಶ್ ಜೊತೆ ನಟಿಸುತ್ತಿರುವ ಸುದ್ದಿಯಿದೆ.

  ಹೀಗಿರುವಾಗ ರಾಗಿಣಿಯದೇನೂ ತಪ್ಪಿಲ್ಲ ಬಿಡಿ. 'ಕಾಲಾಯ ತಸ್ಮೈ ನಮಃ' ಎಂದುಕೊಂಡಿರುವ ರಾಗಿಣಿ 'ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್... ಕಳೆದೋಯ್ದು ನನ್ನ ಪುಸ್ಸಿ ಕ್ಯಾಟ್... ಎನ್ನುತ್ತಾ ಕುಣಿಯಲಿದ್ದಾರೆ. ಕವಿರಾಜ್ ಸಾಹಿತ್ಯಕ್ಕೆ ಗುರುಕಿರಣ್ ಸಂಗೀತ ನೀಡಿರುವ ಈ ಹಾಡು, ಈ ಹಿಂದೆ 'ಕಳ್ಳ ಮಳ್ಳ ಸುಳ್ಳ'ದ ಹಾಡಿನಂತೆ ಸೂಪರ್ ಹಿಟ್ ಆಗಲಿರುವುದು ಗ್ಯಾರಂಟಿ ಎಂದಿದೆ ಚಿತ್ರತಂಡ.

  ಶಿವರಾಜ್ ಕುಮಾರ್ ನಾಯಕತ್ವ 'ಲಕ್ಷ್ಮಿ' ಚಿತ್ರದಲ್ಲಿ ಪ್ರಿಯಾಮಣಿ ನಾಯಕಿ. ನಿರ್ದೇಶಕರು ರಾಘವ ಲೋಕಿ. ಚಿತ್ರದ ಕಥೆ ವಿಭಿನ್ನವಾಗಿದ್ದು ಶಿವಣ್ಣರಿಗೆ ತುಂಬಾ ಇಷ್ಟವಾಗಿದೆಯಂತೆ. ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಒಂದೆರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಆಗಸ್ಟ್ 14ರಂದು ಶಿವಣ್ಣ ಮತ್ತು ಪ್ರಿಯಾಮಣಿ ಹಾಡಿನ ಚಿತ್ರೀಕರಣಕ್ಕಾಗಿ ಸ್ವಿಜರ್ಲೆಂಡ್‌ ನತ್ತ ಪ್ರಯಾಣಬೆಳೆಸಲಿದ್ದಾರೆ. 'ಶಿವ' ಚಿತ್ರದ ನಂತರ ಈ ಚಿತ್ರ ತೆರೆ ಕಾಣಿಲಿದೆ. (ಒನ್ ಇಂಡಿಯಾ ಕನ್ನಡ)

  English summary
  Actress Ragini Dwivedi acts again in a Item Dance after her movie 'Kalla Malla Sulla'. Raghav Loki is the director for this Shivarajkumar and Priyamani lead movie Lakshmi. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X