For Quick Alerts
  ALLOW NOTIFICATIONS  
  For Daily Alerts

  ರಾಗಿಣಿ ಕಣ್ಣುಮುಚ್ಚಾಲೆ; ಐಂದ್ರಿತಾಗೆ ಐಟಂ ಸಾಂಗ್

  |

  ರಾಗಿಣಿ ದ್ವಿವೇದಿ ಯಾಕೋ ಯಾರ ಕೈಗೂ ಸಿಗುತ್ತಿಲ್ಲ. ಇತ್ತೀಚಿಗಂತೂ ರಾಗಿಣಿ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಮೇಲೇರಿದ್ದಾರೆ. ಜೊತೆಗೆ ರಾಗಿಣಿ ಕಾಲ್ ಶೀಟ್ ಗಳೂ ಕೂಡ ಮೊದಲಿನಷ್ಟು ಸುಲಭವಾಗಿ ಸಿಗುತ್ತಿಲ್ಲ. ಅದು ಹಾಗಿರಲಿ, ಇತ್ತೀಚಿಗೆ ರಾಗಿಣಿ ಐಟಂ ಸಾಂಗ್ ಗಳನ್ನು ಒಪ್ಪಿಕೊಳ್ಳುವುದು ಹಾಗೂ ನಂತರ 'ಆಗೊಲ್ಲ' ಎಂದು ಹೇಳುವ ನಾಟಕ ನಡೆಯುತ್ತಿದೆಯಂತೆ. ಆದರೆ ಈ ಆರೋಪವನ್ಉ ರಾಗಿಣಿ ನಿರಾಕರಿಸಿದ್ದಾರೆ. ಆಗಿದ್ದಿಷ್ಟು...

  ಹಿಂದೊಮ್ಮೆ, ಶಿವರಾಜ್ ಕುಮಾರ್ ಹಾಗೂ ಪ್ರಿಯಾಮಣಿ ಜೋಡಿಯ 'ಲಕ್ಷ್ಮೀ' ಚಿತ್ರದಲ್ಲಿ 'ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್...' ಎಂಬ ಐಟಂ ಹಾಡಿಗೆ ಇದೇ ರಾಗಿಣಿ ಹೆಜ್ಜೆಹಾಕಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದು ನೋಡಿದರೆ, ಮೊದಲು ಆ ಹಾಡಿಗೆ ಕುಣಿಯಲು ಓಕೆ ಅಂದಿದ್ದ ರಾಗಿಣಿ ನಂತರ 'ನೋ' ಅಂದುಬಿಟ್ಟರಂತೆ. ಇದೀಗ ಮತ್ತೊಂದು ಹಾಡಿಗೆ ರಾಗಿಣಿ ಒನ್ಸ್ ಅಗೇನ್ ಕೈಎತ್ತಿದ್ದಾರೆ ಎನ್ನಲಾಗುತ್ತಿದೆ. ಅದು 'ಪ್ರೇಮ್ ಅಡ್ಡ' ಚಿತ್ರದ ಐಟಂ ಸಾಂಗ್.

  ಮೊದಲು ರಾಗಿಣಿ ದ್ವಿವೇದಿ ಹೆಜ್ಜೆಹಾಕಲು ಒಪ್ಪಿದ್ದ ಹಾಡಿಗೆ ಈಗ ನಟಿ ಐಂದ್ರಿತಾ ರೇ ಬಂದಿದ್ದಾರೆ. "ರಾಗಿಣಿ ಆಗೊಲ್ಲ ಅಂದಮೇಲೆ ಐಂದ್ರಿತಾಗೆ ಕೇಳಿದ್ದೇವೆ, ಅವರು ಒಪ್ಪಿದ್ದಾರೆ" ಎಂದು ಪ್ರೇಮ್ ಸ್ಪಷ್ಟಪಡಿಸಿದ್ದಾರೆ. ಪ್ರೇಮ್ ಅಡ್ಡ ನಿರ್ದೇಶಕ ಮಹೇಶ್ ಬಾಬು "ರಾಗಿಣಿ ಮೊದಲು ಓಕೆ ಅಂದಿದ್ದರು, ಈಗ ಆಗೊಲ್ಲ ಎಂದಿದ್ದಾರೆ. ಡೇಟ್ಸ್ ಸಮಸ್ಯೆಯಂತೆ. ನಮಗೆ ಅವರ ಸಮಸ್ಯೆ ಅರ್ಥವಾಗಿದೆ" ಎಂದು ಹೇಳಿದ್ದಲ್ಲದೇ ತಮಗೆ ಈ ವಿಷಯಕ್ಕೆ ಬೇಸರವೇನಿಲ್ಲವೆಂದೂ ತಿಳಿಸಿದ್ದಾರೆ.

  ಆದರೆ ರಾಗಿಣಿ ಮಾತ್ರ ಇದರಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಎರಡೂ ಹಾಡುಗಳಿಗೆ ಮೊದಲು ನಾನು ಓಕೆ ಅಂದಿದ್ದೆ. ಆದರೆ ಲೊಕೇಶನ್ ಸಮಸ್ಯೆಯಿಂದ ಆ ಡೇಟ್ ಗೆ ಆ ಹಾಡುಗಳ ಶೂಟಿಂಗ್ ನಡೆಯಲಿಲ್ಲ. ನಂತರ ಅವರು ಹೇಳಿದ ದಿನದಂದು ನನ್ನ ಡೇಟ್ಸ್ ಇರಲಿಲ್ಲ. ಹೀಗಾಗಿ ನಾನು ಅನಿವಾರ್ಯವಾಗಿ ಆಗೊಲ್ಲ ಅಂದೆ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Regini Dwivedi said 'No' to Prem Adda Movie Item Song because of her Dates Problem. Now, Aindrita Ray entered the place of Ragini for that Item Song. Even Ragini rejected the Item Song of Shivarajkumar movie 'Lakshmi' also.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X