For Quick Alerts
  ALLOW NOTIFICATIONS  
  For Daily Alerts

  ಮದುವೆ ಬಗ್ಗೆ ಚೆಲ್ಲಾಟವಾಡಿದ ತಾರೆ ರೈಮಾ ಸೇನ್

  By Rajendra
  |

  ತನ್ನ ಮದುವೆ ಬಗ್ಗೆ ಬಾಲಿವುಡ್ ತಾರೆ ರೈಮಾ ಸೇನ್ ಟ್ವಿಟ್ಟರ್ ನಲ್ಲಿ ಪ್ರಕಟಿಸಿ ಅಭಿಮಾನಿಗಳನ್ನು ಒಂದರೆ ಕ್ಷಣ ದಂಗುಬಡಿಸಿದ್ದಾರೆ. "ನಾನು ವರುಣ್ ಥಾಪರ್ ನನ್ನು ಮದುವೆಯಾಗುತ್ತಿದ್ದೇನೆ." ಎಂದು ಟ್ವೀಟಿಸಿ ಆತನೊಂದಿಗಿನ ಕೆಲವೊಂದು ಫೋಟೋಗಳನ್ನು ಪ್ರಕಟಿಸಿದ್ದರು.

  ಬಳಿಕ ಒಂದೆರಡು ಗಂಟೆಗಳ ತರುವಾಯ ಮತ್ತೊಂದು ಟ್ವೀಟ್ ಕಳುಹಿಸಿದ್ದಾರೆ ರೈಮಾ, "ನಾನು ಮದುವೆಯಾಗುತ್ತಿರುವುದು ಜಸ್ಟ್ ಜೋಕ್ ಅಷ್ಟೇ. ವರುಣ್ ನನ್ನ ಬೆಸ್ಟ್ ಫ್ರೆಂಡ್" ಎಂದಿದ್ದಾರೆ. ಈಕೆಯ ಟ್ವೀಟ್ ನೋಡಿ 'ಮುಂಬೈ ಮಿರರ್' ಪತ್ರಿಕೆ ದೊಡ್ಡ ಸುದ್ದಿಯನ್ನೇ ಮಾಡಿತ್ತು.

  ರೈಮಾ ಸೇನ್ ಮದುವೆಯಾಗುತ್ತಿದ್ದಾರೆ ಎಂದೂ ಆಕೆಯ ಪ್ರಿಯಕರನ ಜೊತೆಗಿನ ಫೋಟೋಗಳನ್ನು ಪ್ರಕಟಿಸಿತ್ತು. ಈ ಬಗ್ಗೆಯೂ ಮತ್ತೊಮೆ ಟ್ವೀಟಿಸಿದ ರೈಮಾ, 'ಮುಂಬೈ ಮಿರರ್' ವರದಿ ಸುಳ್ಳು ಎಂದರು. ಅವರಿಗೆ ಹಾಸ್ಯ ಪ್ರಜ್ಞೆ ಕೂಡ ಇಲ್ಲ ಎಂದು ಛೇಡಿಸಿದ್ದಾರೆ.

  ನಾನು ತಮಾಷೆ ಮಾಡುತ್ತಿದ್ದೇನೆ ಎಂದು ಕನಿಷ್ಠಪಕ್ಷ ನನ್ನ ಫಾಲೋವರ್ಸ್ ಅರ್ಥ ಮಾಡಿಕೊಂಡಿದ್ದಾರೆ. ಅದೇ ನನಗೆ ಸಮಾಧಾನ. ನಮನ್ನು ಫಾಲೋ ಮಾಡುವವರೆಲ್ಲಾ ನಮ್ಮ ಹಿತೈಷಿಗಳಲ್ಲ ಎಂದೂ ವೇದಾಂತಿಯಂತೆ ಹೇಳಿಕೊಂಡಿದ್ದಾರೆ.

  ಈ ಹಿಂದೊಮ್ಮೆ ಈಕೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸಲು ಗೋಣು ಅಲ್ಲಾಡಿಸಿದ್ದರು. ಯಾಕೆ ಎಂದು ಕೇಳಿದರೆ ಅಯ್ಯೋ ಅವು ನನ್ನನ್ನು ತೂಗುವಷ್ಟಿಲ್ಲ ಬಿಡಿ ಎಂದಿದ್ದರು. ಈಕೆ ಮೂನ್ ಮೂನ್ ಸೇನ್ ಪುತ್ರಿ ಹಾಗೂ ದಕ್ಷಿಣ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಿಯಾ ಸೇನ್ ಈಕೆಯ ತಂಗಿ.

  ಈಕೆಯನ್ನು ಕನ್ನಡ ನಿರ್ಮಾಪಕರು ಈಗಲೂ ಸಂಪರ್ಕಿಸುತ್ತಲೇ ಇದ್ದಾರಂತೆ. ಆದರೆ ಸಂಭಾವನೆ ವಿಚಾರದಲ್ಲಿ ಯಾರೂ ಸರಿಯಾಗಿ ತೂಗುತ್ತಿಲ್ಲವಂತೆ. ಹಾಗಾಗಿ ತಾವು ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಮಾತು ತುಂಬಾ ದೂರವಿದೆ ಎಂದಿದ್ದಾರೆ. ಹೋಗ್ಲಿ ಬಿಡಮ್ಮ ನೀನು ಬರ್ದೇ ಇದ್ದರೆ ಕನ್ನಡಕ್ಕೆ ತುಂಬಲಾರದ ನಷ್ಟವೇನು ಆಗಲ್ಲ ಎಂಬುದು ಗಾಂಧಿನಗರಿಗರ ಮಾತು. (ಒನ್ ಇಂಡಿಯಾ ಕನ್ನಡ)

  English summary
  Bollywood actress Raima Sen tweeted on saturday that she is going to marry her friend Varun Thapar and refused in another tweet the very next morning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X