ಭಾವಿ ಸೊಸೆಗೆ ರಕ್ಷಿತ್ ಶೆಟ್ಟಿ ತಾಯಿಯ ಸ್ಪೆಷಲ್ ಉಡುಗೊರೆ ಏನು?

By Bharath Kumar

ಸ್ಯಾಂಡಲ್ ವುಡ್ 'ಕಿರಿಕ್ ಜೋಡಿ'ಯ ನಿಶ್ಚಿತಾರ್ಥಕ್ಕೆ ದಿನಗಣನೆ ಶುರುವಾಗಿದ್ದು, ಎರಡು ಕುಟುಂಬದವರು ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕಾಗಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ.

ಜುಲೈ 3 ರಂದು ಕೊಡಗಿನಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ನೆರವೇರಲಿದ್ದು, ಈ ವಿಶೇಷ ಸಮಾರಂಭಕ್ಕೆ ಕುಟುಂಬದ ಆಪ್ತರು ಮತ್ತು ಚಿತ್ರರಂಗದ ಕೆಲವೇ ಕೆಲವು ಆಪ್ತರನ್ನ ಮಾತ್ರ ಆಹ್ವಾನಿಸಲಾಗಿದೆಯಂತೆ.

ಇವರಿಬ್ಬರ ಎಂಗೇಜ್ ಮೆಂಟ್ ನ ಲೇಟೆಸ್ಟ್ ವಿಚಾರ ಏನಪ್ಪಾ ಅಂದ್ರೆ, ರಕ್ಷಿತ್ ಶೆಟ್ಟಿ ಅವರ ತಾಯಿ, ತಮ್ಮ ಭಾವಿ ಸೊಸೆಗೆ ಸ್ಪೆಷಲ್ ಉಡುಗೊರೆಯನ್ನ ನೀಡಲಿದ್ದಾರಂತೆ. ಏನದು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಅತ್ತೆಯಿಂದ ಸೊಸೆಗೆ ಭರ್ಜರಿ ಗಿಫ್ಟ್!

ಅತ್ತೆಯಿಂದ ಸೊಸೆಗೆ ಭರ್ಜರಿ ಗಿಫ್ಟ್!

ರಕ್ಷಿತ್ ಶೆಟ್ಟಿ ಅವರ ತಾಯಿ ರಂಜನಾ ಅವರು, ನಿಶ್ಚಿತಾರ್ಥದ ವಿಶೇಷವಾಗಿ ತಮ್ಮ ಪ್ರೀತಿಯ ಭಾವಿ ಸೊಸೆಗೆ ಬಂಗಾರದ ಆಭರಣಗಳನ್ನ ಉಡುಗೊರೆಯಾಗಿ ನೀಡಲಿದ್ದಾರಂತೆ.

ಏನದು ಗಿಫ್ಟ್?

ಏನದು ಗಿಫ್ಟ್?

ಮೂಲಗಳ ಪ್ರಕಾರ, ರಶ್ಮಿಕಾ ಅವರಿಗಾಗಿ ಡೈಮೆಂಡ್ ನೆಕ್ಲೇಸ್, ಕಾಂಜೀವರಂ ಸೀರೆ, ಜೊತೆಗೆ ಬಂಗಾರದ ಆಭರಣಗಳನ್ನ ನೀಡಲಿದ್ದಾರಂತೆ.

ಹೇಗಿದೆ ಗೊತ್ತಾ ತಯಾರಿ?

ಹೇಗಿದೆ ಗೊತ್ತಾ ತಯಾರಿ?

ಇನ್ನು ನಿಶ್ಚಿತಾರ್ಥದ ದಿನ ನವ ಜೋಡಿಗಳು ಹೇಗೆ ಕಂಗೊಳಿಸಲಿದ್ದಾರೆ ಎಂಬ ಕುತೂಹಲ ಕಾಡುವುದು ಸಹಜ. ಜುಲೈ 3 ರಂದು ರಶ್ಮಿಕಾ ಅವರು ಪೀಚ್ ಕಲರ್ ನ ಗೌನ್ ನಲ್ಲಿ ಮಿಂಚಲಿದ್ದು, ರಕ್ಷಿತ್ ಶೆಟ್ಟಿ ಕೆನೆ ಬಣ್ಣದ ಟುಕ್ಸೆಡೊ ಮತ್ತು ಪೀಚ್ ಕಲರ್ ನ ಟೈ ನಲ್ಲಿ ಕಂಗೊಳಿಸಿದ್ದಾರಂತೆ.

ಗಿಫ್ಟ್ ಗಳ ಸಂಭ್ರಮ

ಗಿಫ್ಟ್ ಗಳ ಸಂಭ್ರಮ

ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಅವರ ತಂದೆ ಹುಟ್ಟುಹಬ್ಬದ ಉಡುಗೊರೆಯಾಗಿ ಕಡಗವನ್ನ ನೀಡಿದ್ದರು. ಅದಕ್ಕೂ ಮುಂಚೆ ಕಳೆದ ವರ್ಷ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ರಶ್ಮಿಕಾ 20 ಗಿಫ್ಟ್ ಕೊಟ್ಟಿದ್ದರಂತೆ. ಇನ್ನು ರಕ್ಷಿತ್ ಕೂಡ ರಶ್ಮಿಕಾ ಅವರ ಬರ್ತ್ ಡೇ ದಿನ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದರಂತೆ. ಈಗ ರಕ್ಷಿತ್ ತಾಯಿ, ಸೊಸೆಗೆ ಗಿಫ್ಟ್ ಕೊಡಲು ಸಿದ್ದವಾಗಿದ್ದಾರೆ.

More from Filmibeat

English summary
According to source Kannada Actor Rakshit Shetty Mother Will Give Special Gift to Rashmika Mandanna on Engagement Day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X