For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್ ಪತ್ನಿ ಧರಿಸಿದ ಚಪ್ಪಲಿಯ ಬೆಲೆ ಅಬ್ಬಬ್ಬಾ! ಎರಡು ತಿಂಗಳ ಸಂಬಳ ಸಾಲದು ಕೊಳ್ಳಲು

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಟಾರ್ ನಟ ರಾಮ್ ಚರಣ್ ತೇಜ ಬ್ಯುಸಿ ನಟರಾಗಿರುವ ಜೊತೆಗೆ ಒಳ್ಳೆಯ ಬ್ಯುಸಿನೆಸ್ ಮ್ಯಾನ್ ಸಹ. ಹಲವು ಉದ್ದಿಮೆಗಳನ್ನು ರಾಮ್ ಚರಣ್ ನಡೆಸುತ್ತಿದ್ದಾರೆ. ಪ್ರೈವೇಟ್ ಜೆಟ್ ಬಾಡಿಗೆಗೆ ನೀಡುವ ಉದ್ಯಮವೂ ಅವರ ಹೆಸರಿನಲ್ಲಿದೆ.

  ರಾಮ್ ಚರಣ್ ಅವರದ್ದು ಒಂದು ಕತೆಯಾದರೆ ಅವರ ಪತ್ನಿ ಉಪಾಸನಾ ಸಹ ಸಾಮಾನ್ಯದವರಲ್ಲ. ಭಾರತದ ಅತ್ಯುತ್ತಮ ಹಾಸ್ಪಿಟಲ್ ಚೈನ್ ಅಪೋಲೊನ ಚೇರ್‌ಮನ್ ಇವರು. ಉಪಾಸನಾರ ತಾತ ಆರಂಭಿಸಿದ್ದ ಅಪೋಲೊ ಅನ್ನು ಈಗ ಉಪಾಸನಾ ಅವರೇ ಚಲಾಯಿಸುತ್ತಿದ್ದಾರೆ. ಜೊತೆಗೆ ಫ್ಯಾಮಿಲಿ ಹೆಲ್ತ್‌ ಪ್ಲ್ಯಾನ್ ಇನ್ಶುರೆನ್ಸ್ ಸಂಸ್ಥೆಯನ್ನೂ ನಡೆಸುತ್ತಾರೆ.

  ಅತಿ ದೊಡ್ಡ ಆಸ್ಪಿಟಲ್ ಬ್ಯುಸಿನೆಸ್ ನಡೆಸುವ ಉಪಾಸನಾ ವರ್ಷಕ್ಕೆ ಕೋಟ್ಯಂತರ ರುಪಾಯಿ ಹಣ ಗಳಿಸುತ್ತಾರೆ. ಅದಕ್ಕೆ ತಕ್ಕಂತೆ ಅವರ ಜೀವನ ಶೈಲಿಯೂ ಇದೆ. ದುಬಾರಿ ಕಾರು, ಐಶಾರಾಮಿ ಮನೆ ಅವರು ಧರಿಸುವ ಚಪ್ಪಲಿ ಸಹ ಭಾರಿ ದುಬಾರಿಯಾದುದೆ!

  ಇತ್ತೀಚೆಗಷ್ಟೆ ತಾಯಿಯಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಉಪಾಸನಾ ಪೋಸ್ಟ್ ಹಾಕಿದ್ದಾರೆ. ಅದರ ಬೆನ್ನಲ್ಲೆ ಪತಿ ಜೊತೆ ಫೋಟೊಶೂಟ್ ಮಾಡಿಸಿಕೊಂಡು ಕೆಲವು ಚಿತ್ರಗಳನ್ನು ಉಪಾಸನಾ ಹಂಚಿಕೊಂಡಿದ್ದಾರೆ. ಡಿಸೆಂಬರ್ 27 ರಂದು ಇನ್‌ಸ್ಟಾಗ್ರಾಂನಲ್ಲಿ ಉಪಾಸನಾ ಹಂಚಿಕೊಂಡಿರುವ ಚಿತ್ರ ಗಮನ ಸೆಳೆದಿದೆ. ಅದರಲ್ಲಿಯೂ ಚಿತ್ರದಲ್ಲಿ ಉಪಾಸನಾ ಧರಿಸಿರುವ ಚಪ್ಪಲಿಯ ಬೆಲೆ ಕೇಳಿದರೆ ಸಾಮಾನ್ಯರು ಕಂಗಾಲಾಗುವುದು ಗ್ಯಾರೆಂಟಿ.

  ಬಣ್ಣ-ಬಣ್ಣದ ಉಡುಗೆ ತೊಟ್ಟಿರುವ ಉಪಾಸನಾ ಆ ಬಟ್ಟೆಗೆ ಹೋಲುವ ಚಪ್ಪಲಿಯನ್ನು ಧರಿಸಿದ್ದಾರೆ. ಆ ಚಪ್ಪಲಿಯ ಬೆಲೆ ಬರೋಬ್ಬರಿ 60 ಸಾವಿರ ರುಪಾಯಿ ಎಂದು ಬಾಲಿವುಡ್‌ನ ಮಾಧ್ಯಮಗಳು ವರದಿ ಮಾಡಿವೆ. ಚಿತ್ರದಲ್ಲಿ ರಾಮ್ ಚರಣ್ ತಮ್ಮ ಪ್ರೀತಿಯ ನಾಯಿಯನ್ನು ಹಿಡಿದುಕೊಂಡು ಪತ್ನಿಯ ಜೊತೆಗೆ ಫೋಸ್ ನೀಡಿದ್ದಾರೆ.

  ಉಪಾಸನಾ ಕೋನಿಡೇಲ ಹಾಗೂ ರಾಮ್ ಚರಣ್ ತೇಜ ವಿವಾಹವಾಗಿ ಹತ್ತು ವರ್ಷಗಳಾದವು. ಈಗ ಇಬ್ಬರೂ ಪೋಷಕರಾಗುತ್ತಿದ್ದಾರೆ. ಇಷ್ಟು ದಿನ ತಮಗೆ ತಾಯ್ತನ ಬೇಡ ಎಂದು ಉಪಾಸನಾ ಹೇಳಿಕೊಂಡಿದ್ದರು. ಆದರೆ ಈಗ ಕೊನೆಗೂ ತಾಯಿಯಾಗಲು ನಿಶ್ಚಯಿಸಿದ್ದಾರೆ.

  English summary
  Telugu actor Ram Charan's wife Upasana Kamineni wears very expensive slippers in her recent picture.
  Tuesday, December 27, 2022, 18:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X