»   » ಕೋಳಿ ಜಗಳಕ್ಕೆ ಮಂಗಳ ಹಾಡಿದ ಜಂಬದ ಕೋಳಿಗಳು

ಕೋಳಿ ಜಗಳಕ್ಕೆ ಮಂಗಳ ಹಾಡಿದ ಜಂಬದ ಕೋಳಿಗಳು

Posted By:
Subscribe to Filmibeat Kannada

ಕನ್ನಡದ ಇಬ್ಬರು ನಟಿಯರು ಮತ್ತೆ ಒಂದಾಗಿದ್ದಾರೆ. ಬೇರೆಯಾಗಿದ್ದವರು ಯಾರು ಎಂದು ಪ್ರಶ್ನಿಸುವ ಮೊದಲು ಒಮ್ಮೆ ಯೋಚಿಸಿ ನೋಡಿ. ರಮ್ಯಾ ಮತ್ತು ಐಂದ್ರಿತಾ ರೇ ಎಂಬುದು ನೆನಪಾಗುತ್ತದೆ. ಹಿಂದೊಮ್ಮೆ ಅತ್ಯಾಪ್ತ ಗೆಳತಿಯರಂತಿದ್ದ ಈ ಇಬ್ಬರು ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಐಂದ್ರಿತಾ 'ಕಪಾಳ ಮೋಕ್ಷ' ಪ್ರಹಸನದ ನಂತರ ಪರಸ್ಪರ ದೂಷಿಸಿಕೊಂಡು ಶತ್ರುಗಳಂತಾಗಿದ್ದರು.

ಐಂದ್ರಿತಾ ಚಿತ್ರರಂಗಕ್ಕೆ ಕಾಲಿಟ್ಟಾಗ ಮುದ್ದುಮಾಡಿ ಪಾರಿಜಾತದಂತೆ ಸಾಕಿದ್ದು ಸ್ವತಃ ರಮ್ಯಾ. ಇನ್ನೂ ಚಿಕ್ಕ ಹುಡುಗಿ ಐಂದ್ರಿತಾ ಹೇಗೆ ಬೆಳೆಯಬೇಕು, ಅದ್ಹೇಗೆ ದೊಡ್ಡ ನಟಿಯಾಗಬೇಕು ಎಂದೆಲ್ಲ ಆಪ್ತರಲ್ಲಿ ಹೇಳಿಕೊಳ್ಳುತ್ತಿದ್ದರು ರಮ್ಯಾ. ಇಬ್ಬರೂ ಒಟ್ಟಿಗೆ ಓಡಾಡುತ್ತಿದ್ದರು, ಒಬ್ಬರ ಬಗ್ಗೆ ಒನ್ನೊಬ್ಬರು ಗೌರವದಿಂದ ಮಾತನಾಡುತ್ತಿದ್ದರು. ಅದೆಷ್ಟು ಎಂದರೆ ಎಲ್ಲರೂ ಹುಬ್ಬೇರಿಸುವಷ್ಟು ಗೆಳೆತನವಿತ್ತು.

2009ರ ಮಾರ್ಚ್‌‌ನಲ್ಲಿ ಕನ್ನಡ ಚಿತ್ರರಂಗದ 'ಅಮೃತ ಮಹೋತ್ಸವ'ದಲ್ಲೂ ಇಬ್ಬರೂ ಒಂದಾಗಿಯೇ ಇದ್ದು ಪಕ್ಕಪಕ್ಕದಲೇ ಆಸೀನರಾಗಿದ್ದರು. ಆದರೆ ಯಾವಾಗ ಐಂದ್ರಿತಾ ಮೇಸ್ಟ್ರು ನಾಗತಿಹಳ್ಳಿ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೋ, ರಮ್ಯಾ ಐಂದ್ರಿತಾರಿಂದ ಬಹುದೂರವಾಗಿದ್ದರು. ನಂತರ ಮುಸುಕಿನ ಗುದ್ದಾಟ ನಡೆದೇ ಇತ್ತು. ಆದರೀಗ ಇಬ್ಬರೂ ಮತ್ತೆ ಒಂದಾಗಿ ಮೊದಲಿನಂತೆ ಪರಮಾಪ್ತರಾಗಿದ್ದಾರೆ.

ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಹಳೆಯದನ್ನು ಮರೆತು ಪರಸ್ಪರ ಅಪ್ಪಿಕೊಂಡು ಜತೆಯಾಗಿ ಕುಣಿದಿದ್ದಾರೆ. ರಮ್ಯಾರ 'ಲಕ್ಕಿ' ಚಿತ್ರದ ಹಾಡೊಂದಕ್ಕೆ ಐಂದ್ರಿತಾ ಹೆಜ್ಜೆ ಹಾಕಿದ್ದಾರೆ. ನಂತರ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಐಂದ್ರಿತಾ "ಕೆಲ ಸಮಯ ಪರಸ್ಪರ ದೂರವಾಗಿದ್ದೆವು. ನಮ್ಮಿಬ್ಬರನ್ನು ಬೇರ್ಪಡಿಸಲು ಕೆಲವರು ಯತ್ನಿಸಿದ್ದರು. ಆದರೀಗ ಮತ್ತೆ ನಾವಿಬ್ಬರು ಉತ್ತಮ ಸ್ನೇಹಿತೆಯರು" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
There was a Cat fight between Lucky Star Ramya and Actress Aindrita Ray from long time. Now, the Cat Fights has taken The End and both are close friends now as before. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada