For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ವಿಚಾರಕ್ಕೆ 'ಕೆಜಿಎಫ್ 2' ತಿರಸ್ಕರಿಸಿದ್ದ ಖ್ಯಾತ ನಟಿ

  |
  KGF 2 : this Famous actress rejected KGF 2 due to remuneration issue | Kgf2 | Yash | Prashanth Neel

  ಸದ್ಯ 'ಕೆಜಿಎಫ್ 2' ಸಿನಿಮಾದ ಕೆಲಸಗಳು ನಡೆಯುತ್ತಿದೆ. ಮತ್ತೊಂದು ಮಹಾ ಸಿನಿಮಾದ ನಿರ್ಮಾಣದಲ್ಲಿ ರಾಕಿ ಮತ್ತು ತಂಡ ಬ್ಯುಸಿಯಾಗಿದೆ. ಇದೀಗ ಈ ಸಿನಿಮಾದ ಪ್ರಮುಖ ವಿಷಯವೊಂದು ಹೊರ ಬಂದಿದೆ.

  'ಕೆಜಿಎಫ್' ಸಿನಿಮಾಗಿಂತ ದೊಡ್ಡ ಮಟ್ಟದಲ್ಲಿ 'ಕೆಜಿಎಫ್ 2' ಸಿನಿಮಾ ಇರಲಿದೆ ಎನ್ನುವುದನ್ನು ನಟ ಯಶ್ ಈ ಹಿಂದೆಯೇ ಹೇಳಿದ್ದರು. ಹೀಗಾಗಿ ಸಿನಿಮಾದ ಕಲಾವಿದರ ವಿಚಾರದಲ್ಲಿ ಚಿತ್ರತಂಡ ದೊಡ್ಡ ಮಟ್ಟದ ಪ್ಲಾನ್ ಮಾಡಿತ್ತು. ಅದೇ ರೀತಿ ಉತ್ತರ ಹಾಗೂ ದಕ್ಷಿಣ ಭಾರತದ ಕೆಲವು ಜನಪ್ರಿಯ ಕಲಾವಿದರನ್ನು ಸಂಪರ್ಕ ಮಾಡಿತ್ತು.

  'ಕೆಜಿಎಫ್'ನಲ್ಲಿ ದೊಡ್ಡ ಬದಲಾವಣೆ: ಇದ್ದಕ್ಕಿದ್ದಂತೆ 'ಆ ವ್ಯಕ್ತಿ' ದೂರವಾಗಿದ್ದೇಕೆ?'ಕೆಜಿಎಫ್'ನಲ್ಲಿ ದೊಡ್ಡ ಬದಲಾವಣೆ: ಇದ್ದಕ್ಕಿದ್ದಂತೆ 'ಆ ವ್ಯಕ್ತಿ' ದೂರವಾಗಿದ್ದೇಕೆ?

  ಸಿನಿಮಾದ ಒಂದು ಪ್ರಮುಖ ಪಾತ್ರಕ್ಕಾಗಿ ಚಿತ್ರತಂಡ ಮೊದಲು ಒಬ್ಬ ನಟಿಗೆ ಆಫರ್ ನೀಡಿತ್ತು. ಆದರೆ, ಸಂಭಾವನೆಯ ವಿಚಾರಕ್ಕೆ ಆ ನಟಿ ಸಿನಿಮಾವನ್ನು ಕೈ ಬಿಟ್ಟರು.

  ಸಂಭಾವನೆ ವಿಷಯಕ್ಕೆ 'ಕೆಜಿಎಫ್ 2' ರಮ್ಯಾ ಕೃಷ್ಣ

  ಸಂಭಾವನೆ ವಿಷಯಕ್ಕೆ 'ಕೆಜಿಎಫ್ 2' ರಮ್ಯಾ ಕೃಷ್ಣ

  'ಬಾಹುಬಲಿ' ಸಿನಿಮಾದ ಶಿವಗಾಮಿ ರಮ್ಯಾ ಕೃಷ್ಣ 'ಕೆಜಿಎಫ್ 2'ನಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ, ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಅದರ ಕಾರಣ ಇದೀಗ ಬಹಿರಂಗವಾಗಿದೆ. ಸಂಭಾವನೆ ವಿಚಾರದಲ್ಲಿ ರಮ್ಯಾ ಕೃಷ್ಣ ಸಿನಿಮಾವನ್ನು ತಿರಸ್ಕರಿಸಿದ್ದರಂತೆ.

  'KGF-2': 'ರಮಿಕಾ ಸೇನ್' ಜೊತೆ ಮೊದಲ ಫೋಟೋ ಹಂಚಿಕೊಂಡ ರಾಕಿಭಾಯ್ ಹೇಳಿದ್ದೇನು?'KGF-2': 'ರಮಿಕಾ ಸೇನ್' ಜೊತೆ ಮೊದಲ ಫೋಟೋ ಹಂಚಿಕೊಂಡ ರಾಕಿಭಾಯ್ ಹೇಳಿದ್ದೇನು?

  ರಮ್ಯಾ ಕೃಷ್ಣ ಕೇಳಿದ ಸಂಭಾವನೆ ಎಷ್ಟು?

  ರಮ್ಯಾ ಕೃಷ್ಣ ಕೇಳಿದ ಸಂಭಾವನೆ ಎಷ್ಟು?

  ರಮ್ಯಾ ಕೃಷ್ಣ 'ಕೆಜಿಎಫ್ 2' ಸಿನಿಮಾಗೆ ಇಷ್ಟೇ ಸಂಭಾವನೆ ಕೇಳಿದ್ದರು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ, 'ಬಾಹುಬಲಿ' ನಂತರ ರಮ್ಯಾ ಕೃಷ್ಣ ಸಂಭಾವನೆ ಹೆಚ್ಚಾಗಿದೆ. 'ಬಾಹುಬಲಿ' ಸಿನಿಮಾಗೆ ರಮ್ಯಾ ಕೃಷ್ಣ 2.5 ಕೋಟಿ ರೂಪಾಯಿ ಪಡೆದಿದ್ದು, ಅದಕ್ಕೂ ಹೆಚ್ಚಿನ ಹಣವನ್ನು ಬೇಡಿಕೆ ಇಟ್ಟಿರಬಹುದು.

  ರಮ್ಯಾ ಕೃಷ್ಣ ಜಾಗಕ್ಕೆ ರವಿನಾ ಟಂಡನ್

  ರಮ್ಯಾ ಕೃಷ್ಣ ಜಾಗಕ್ಕೆ ರವಿನಾ ಟಂಡನ್

  ತಾವು ಕೇಳಿದ ಸಂಭಾವನೆ ಸಿಗಲಿಲ್ಲ ಎಂಬ ಕಾರಣಕ್ಕೆ ರಮ್ಯಾ ಕೃಷ್ಣ ಸಿನಿಮಾ ಬಿಟ್ಟರು. ಆ ನಂತರ ಆ ಪಾತ್ರಕ್ಕೆ ಬಾಲಿವುಡ್ ನಟಿ ರವಿನಾ ಟಂಡನ್ ರನ್ನು ಚಿತ್ರತಂಡ ಸಂಪರ್ಕ ಮಾಡಿತು. ಮೊದಲು ರವಿನಾ ಟಂಡನ್ ಗೊಂದಲದಲ್ಲಿ ಇದ್ದರೂ ನಂತರ, ಓಕೆ ಹೇಳಿದರು. ಚಿತ್ರದ ಪ್ರಧಾನಿ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ರವಿನಾ ಟಂಡನ್ ಕಾಣಿಸಿಕೊಳ್ಳುತ್ತಿದ್ದಾರೆ.

  'ಕೆಜಿಎಫ್ 2' ತಂಡ ಸೇರಿಕೊಂಡ ರವೀನಾ ಟಂಡನ್'ಕೆಜಿಎಫ್ 2' ತಂಡ ಸೇರಿಕೊಂಡ ರವೀನಾ ಟಂಡನ್

  ರಮ್ಯಾ ಕೃಷ್ಣ ಕನ್ನಡ ಸಿನಿಮಾಗಳು

  ರಮ್ಯಾ ಕೃಷ್ಣ ಕನ್ನಡ ಸಿನಿಮಾಗಳು

  ನಟಿ ರಮ್ಯಾ ಕೃಷ್ಣಗೆ ಕನ್ನಡ ಸಿನಿಮಾಗಳು ಹೊಸತೇನಲ್ಲ. 1988 ರಲ್ಲಿಯೇ ಅವರು ಕನ್ನಡ ಸಿನಿಮಾ ಮಾಡಿದ್ದರು. 'ಮಾಂಗಲ್ಯಂ ತಂತುನಾನೇನ', 'ಏಕಾಂಗಿ', 'ನೀಲಾಂಬರಿ', 'ರಕ್ತ ಕಣ್ಣೀರು', 'ಮಾಣಿಕ್ಯ' 'ಅಂಜನೀಪುತ್ರ' ರಮ್ಯಾ ಕೃಷ್ಣ ಕನ್ನಡದಲ್ಲಿ ನಟಿಸಿದ ಪ್ರಮುಖ ಸಿನಿಮಾಗಳಾಗಿವೆ.

  English summary
  Actress Ramya Krishna rejected 'KGF 2' kannada movie because of remuneration issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X