»   » ಕಗ್ಗಂಟಾಗಿರುವ ರಮ್ಯಾ 'ನೀರ್ ದೋಸೆ' ವಿವಾದ

ಕಗ್ಗಂಟಾಗಿರುವ ರಮ್ಯಾ 'ನೀರ್ ದೋಸೆ' ವಿವಾದ

Posted By:
Subscribe to Filmibeat Kannada

ಗೋಲ್ಡನ್ ಗರ್ಲ್ ರಮ್ಯಾ ಹಾಗೂ ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿರುವ 'ನೀರ್ ದೋಸೆ' ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ವಿವಾದಕ್ಕೆ ತೆರೆ ಎಳೆಯಲು ಹೊಸ ಮುಹೂರ್ತ ಫಿಕ್ಸ್ ಆಗಿದೆ. ಈ ಹಿಂದೆ ವಿವಾದ ಫಿಲಂ ಚೇಂಬರ್ ಮೆಟ್ಟಿಲೇರಿತ್ತು. ಆದರೆ ರಮ್ಯಾ ಕಾರಣಾಂತರಗಳಿಂದ ಸಂಧಾನ ಸಭೆಗೆ ಹಾಜರಾಗಿರಲಿಲ್ಲ.

"ತಾವು ರಾಜಕೀಯ ಕಾರ್ಯಗಳಲ್ಲಿ ಬಿಜಿಯಾಗಿರುವುದರಿಂದ ಬರಲು ಸಾಧ್ಯವಾಗುತ್ತಿಲ್ಲ. ನವೆಂಬರ್ 24ರ ತನಕ ತಾನು ಬಿಜಿಯಾಗಿದ್ದೇನೆ. ಆ ಬಳಿಕ ಸಭೆ ಕರೆಯಿರಿ ಬರುತ್ತೇನೆ" ಎಂದಿದ್ದರು ರಮ್ಯಾ. ಕಡೆಗೆ ನವೆಂಬರ್ 25ಕ್ಕೆ ಫಿಲಂ ಚೇಂಬರ್ ನ ಸಂಧಾನ ಸಭೆಗೆ ಬರುವಂತೆ ಪತ್ರ ಬರೆಯಲಾಗಿತ್ತು.

ಈಗ ನವೆಂಬರ್ 17ಕ್ಕೆ ಹೊಸ ಡೇಟ್ ನೀಡಿದ್ದಾರೆ. ಆದರೆ ರಮ್ಯಾ ಈ ಸಂಧಾನ ಸಭೆಗೆ ಬರುತ್ತಿಲ್ಲ. ಅವರ ಬದಲಾಗಿ ಅವರ ಮ್ಯಾನೇಜರ್ ಬರುತ್ತಿದ್ದಾರೆ. ಆದರೆ 'ನೀರ್ ದೋಸೆ' ಚಿತ್ರದಲ್ಲಿ ರಮ್ಯಾ ಅಭಿನಯಿಸುತ್ತಾರೋ ಇಲ್ಲವೋ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.

ರಮ್ಯಾ ಅವರಿಗೆ ಕಾಲಾವಕಾಶವೇ ಇಲ್ಲದಂತಾಗಿದೆ

'ನೀರ್ ದೋಸೆ' ನಿರ್ಮಾಪಕ ಸುಧೀಂದ್ರ ಅವರು ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ರಮ್ಯಾ ತಲಾ ಹತ್ತು ದಿನಗಳ ಡೇಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ರಮ್ಯಾ ಅವರಿಗೆ ಕಾಲಾವಕಾಶವೇ ಇಲ್ಲದಂತಾಗಿದೆ.

ಇನ್ನು ಆರು ತಿಂಗಳಲ್ಲಿ ಲೋಕಸಭೆ ಚುನಾವಣೆ

ಇನ್ನು ಆರು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಅವರು ಚಿತ್ರದಲ್ಲಿ ತೊಡಗಿಕೊಳ್ಳುವುದರಿಂದ ಅವರ ರಾಜಕೀಯ ಭವಿಷ್ಯಕ್ಕೆ ಹೊಡೆತ ಬೀಳಲಿದೆ.

ಪೆಟ್ರೋಮ್ಯಾಕ್ಸ್ ಕೈಗೆತ್ತಿಕೊಂಡ ವಿಜಯ್ ಪ್ರಸಾದ್

ಇನ್ನೊಂದು ಕಡೆ ಚಿತ್ರದ ನಿರ್ದೇಶಕರಾದ ವಿಜಯ್ ಪ್ರಸಾದ್ ಅವರ ಹೊಸ ಪ್ರಾಜೆಕ್ಟ್ 'ಪೆಟ್ರೋಮ್ಯಾಕ್ಸ್' ಶುರುವಾಗಿದೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಅಂದ್ರೆ 'ನೀರ್ ದೋಸೆ' ಚಿತ್ರವನ್ನು ರಮ್ಯಾ ಅವರೇ ಕೊಂಡುಕೊಳ್ಳುತ್ತಾರೆ ಎಂಬುದು.

ಚಿತ್ರವನ್ನು ಕೊಂಡುಕೊಳ್ಳಲು ಮುಂದಾಗಿರುವ ರಮ್ಯಾ?

ಇದರ ಮರ್ಮಾ ಏನೆಂದರೆ ಚಿತ್ರದಲ್ಲಿ ಅವರು ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಂದು ವೇಳೆ ಚಿತ್ರ ಬಿಡುಗಡೆಯಾದರೆ ತಮ್ಮ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಚಿತ್ರವನ್ನು ಕೊಂಡುಕೊಂಡು ಬಿಡುಗಡೆ ಮಾಡುವುದೇ ಬೇಡ ಎಂಬ ಉದ್ದೇಶವೂ ಇದೆ ಎಂಬುದು.

ನವರಸ ನಾಯಕ ಜಗ್ಗೇಶ್ ಏನು ಹೇಳುತ್ತಾರೆ?

ಒಂದು ವೇಳೆ ರಮ್ಯಾ ಚಿತ್ರದಲ್ಲಿ ಅಭಿನಯಿಸುವುದಿಲ್ಲ ಎನ್ನುವುದಾದರೆ ಚಿತ್ರಕ್ಕೆ ಇದುವರೆಗೂ ಆಗಿರುವ ನಷ್ಟವನ್ನು ಅವರು ಕಟ್ಟಿಕೊಡಲಿ ಎಂದಿದ್ದಾರೆ ಜಗ್ಗೇಶ್. ಯಾರು ಅಭಿನಯಿಸಲಿ ಬಿಡಲಿ ತಾವು ಮಾತ್ರ ಚಿತ್ರದಲ್ಲಿ ಅಭಿನಯಿಸುತ್ತೇವೆ ಎಂಬ ಭವರಸೆಯನ್ನೂ ಕೊಟ್ಟಿದ್ದಾರೆ ಜಗ್ಗೇಶ್.

English summary
Golden Girl Ramya and Jaggesh starrer Kannada movie 'Neer Dose' problem becomes immeasurably more complex. It becoming a hot potato to the producer Sudheendra.
Please Wait while comments are loading...