»   » ರಾಗಿಣಿ-ರಮ್ಯಾ ನಡುವೆ ಭಾರಿ ಕ್ಯಾಟ್ ಫೈಟ್!

ರಾಗಿಣಿ-ರಮ್ಯಾ ನಡುವೆ ಭಾರಿ ಕ್ಯಾಟ್ ಫೈಟ್!

Posted By:
Subscribe to Filmibeat Kannada
<ul id="pagination-digg"><li class="next"><a href="/gossips/ragini-dwivedi-ramya-recent-controversy-tv-show-068571.html">Next »</a></li></ul>

ಕನ್ನಡದ ಲಕ್ಕಿ ಗರ್ಲ್ ರಮ್ಯಾ ಹಾಗೂ ಇತ್ತೀಚಿಗೆ ಲಕ್ಕಿ ಗರ್ಲ್ ಆಗುತ್ತಿರುವ ರಾಗಿಣಿ ಇಬ್ಬರೂ 'ಕ್ಯಾಟ್ ಫೈಟ್' ಶುರುವಿಟ್ಟುಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿರುವುದು ಇತ್ತೀಚಿಗೆ ಪ್ರಸಾರವಾದ 'ರಗಳೆ ವಿತ್ ರಿಷಿಕಾ' ಕಾರ್ಯಕ್ರಮದಲ್ಲಿ ರಾಗಿಣಿ ಹೇಳಿದ ಮಾತುಗಳು. ಈ ಮೊದಲು ರಮ್ಯಾ-ರಕ್ಷಿತಾ ನಡುವೆ ನಡೆಯುತ್ತಿದ್ದ ಕೋಳಿ ಜಗಳದಂತೆ ಈಗ ರಾಗಿಣಿ ರಮ್ಯಾ ನಡುವೆ ಶುರುವಾಗಿದೆ. ಎರಡರಲ್ಲೂ ರಮ್ಯಾ ಇರುವುದು ಕಾಕತಾಳೀಯವೇ ಸರಿ!

'ರಗಳೆ ವಿತ್ ರಿಷಿಕಾ' ಕಾರ್ಯಕ್ರಮದಲ್ಲಿ "ರಮ್ಯಾ ಏನು ಭೂಲೋಕ ಸುಂದರೀನಾ? ಅಥವಾ...ಅವಳೇನು ಪ್ರೈಮ್ ಮಿನಿಸ್ಟ್ರಾ? ಇಲ್ಲ, ಬಾಲಿವುಡ್ ಸ್ಟಾರಾ...! ಹೀಗೆ ಬಾಯಿಗೆ ಬಂದಂತೆ ರಮ್ಯಾ ವಿರುದ್ಧ ರಾಗಿಣಿ ದ್ವಿವೇದಿ ಮಾತನಾಡಿದ್ದು ಪ್ರಸಾರವಾಯಿತು. ಅದು ರಾಗಿಣಿಯೇ ಮಾತನಾಡಿದಂತೆ ಇತ್ತೇ ಹೊರತೂ ವೈಸ್ ಡಬ್ ಮಾಡಿದಂತೇನೂ ಇರಲಿಲ್ಲ. ಆದರೆ ನಟಿ ರಾಗಿಣಿ ಅದನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.

"ಆ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ್ದನ್ನು ಸಾಕಷ್ಟು ಎಡಿಟ್ ಮಾಡಿ ಪ್ರಸಾರ ಮಾಡಲಾಗಿದೆ. ಮಾತನಾಡಿದ್ದ ಕೆಲವು ಭಾಗಗಳಿಗೆ ಕತ್ತರಿ ಹಾಕಿ ಬೇರೆಯದೇ ಅರ್ಥ ಬರುವಂತೆ ಜೋಡಿಸಿ ಪ್ರಸಾರ ಮಾಡಲಾಗಿದೆ. ನಿಜವಾಗಿ ನಾನು ಹೇಳಿರುವುದು ಹಾಗೇ ಅಲ್ಲಿ ಪ್ರಸಾರವಾಗಿಲ್ಲ. ಅಷ್ಟಕ್ಕೂ ನಾನು ಮತ್ತೊಬ್ಬಳು ನಟಿಯ ಬಗ್ಗೆ ಮಾತನಾಡೋದಿಲ್ಲ. ಬೇರೆಯವರ ವೃತ್ತಿ ಜೀವನದ ಬಗ್ಗೆ ಮಾತನಾಡಲು ನನಗಿಷಟ್ವಿಲ್ಲ" ಎಂದಿದ್ದಾರೆ.

ಆ ಕಾರ್ಯಕ್ರಮ ಪ್ರಸಾರವಾಗಿದ್ದೇ ತಡ, ಸಾಮಾಜಿಕ ತಾಣಗಳಲ್ಲಿ ದೊಡ್ಡ ಸಮರವೇ ನಡೆಯುತ್ತಿದೆ. ರಮ್ಯಾ ಮತ್ತು ರಾಗಿಣಿ, 'ಫೇಸ್ ಬುಕ್' ಹಾಗೂ 'ಟ್ವಿಟ್ಟರ್' ಗಳಲ್ಲಿ ಇನ್ನೊಬ್ಬರ ಹೆಸರು ಬಳಸದೇ ಪರಸ್ಪರ ಕೋಪ ತೋರಿಸಿಕೊಳ್ಳುತ್ತಿದ್ದಾರೆ. 'ರಗಳೆ ವಿತ್ ರಿಷಿಕಾ' ಕಾರ್ಯಕ್ರಮದ ರಾಗಿಣಿ ಮಾತುಗಳಿಗೆ ರಮ್ಯಾರಿಂದ ಬಂದ ಪ್ರತಿಕ್ರಿಯೆ ಭಾರಿ ಖಾರವಾಗಿದೆ. 

"ಹತಾಶೆ ಹಾಗೂ ಹೊಟ್ಟೆಕಿಚ್ಚುಗಳಿಂದ ಹೆಸರು ಮಾಡದ ಯಾವುದೋ ನಟಿಯರು ನಾನೇ ನಂಬರ್ ಒನ್ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ" ಎಂದು ಟ್ವೀಟ್ ಮಾಡಿರುವುದಲ್ಲದೇ ಪತ್ರಿಕೆಗಳಲ್ಲಿ ಬಂದ 'ನಂಬರ್ ಒನ್ ನಟಿ' ಸುದ್ದಿಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಪೋಸ್ಟ್ ಕೂಡ ಮಾಡಿದ್ದರು. ಅದಕ್ಕೆ ರಾಗಿಣಿಯೇನೂ ಸುಮ್ಮನಿಲ್ಲ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಿರುಗೇಟು ನೀಡಿದ್ದಾರೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/gossips/ragini-dwivedi-ramya-recent-controversy-tv-show-068571.html">Next »</a></li></ul>
English summary
Kannada Actress, Golden Girl Ramya and another popular actress Ragini Dwivedi started controversy in Social Media like Facebook and Twitter. After the Ragini words in programme 'Ragale with Rishika', all these cat-fight started. &#13; &#13;
Please Wait while comments are loading...