»   » ಲಂಡನ್ ನಲ್ಲಿ ಉಂಗುರ ಬದಲಾಯಿಸಿಕೊಂಡ ಕತ್ರೀನಾ-ರಣ್ಬೀರ್

ಲಂಡನ್ ನಲ್ಲಿ ಉಂಗುರ ಬದಲಾಯಿಸಿಕೊಂಡ ಕತ್ರೀನಾ-ರಣ್ಬೀರ್

Posted By:
Subscribe to Filmibeat Kannada

ಬಾಲಿವುಡ್ ನಿಂದ ಬಂದಿರುವ ಖಾಸ್ ಖಬರ್ ನಿಜವೇ ಆಗಿದ್ದರೆ, ಸಿನಿ ಪ್ರಿಯರಿಗೆ ಇದೋ ಇಲ್ಲಿದೆ ಒಂದು ಬ್ರೇಕಿಂಗ್ ನ್ಯೂಸ್. ಸುರ ಸುಂದರಿ ಕತ್ರೀನಾ ಮತ್ತು ಚಾಕಲೇಟ್ ಬಾಯ್ ರಣ್ಬೀರ್ ಕಪೂರ್ ಮದುವೆ ಯಾವಾಗ ಅಂತ ಲೆಕ್ಕಚಾರ ಹಾಕುತ್ತಿದ್ದವರಿಗೆ 'ನವ ಜೋಡಿ' ಸರ್ಪ್ರೈಸ್ ನೀಡಿದ್ದಾರೆ.

ಲಂಡನ್ ನಲ್ಲಿ ಕತ್ರೀನಾ ಕೈಫ್ ಮತ್ತು ರಣ್ಬೀರ್ ಕಪೂರ್ ನಿಶ್ಚಿತಾರ್ಥವಾಗಿದೆ! ಹೊಸ ವರ್ಷವನ್ನು ಲಂಡನ್ ನಲ್ಲಿ ಸೆಲೆಬ್ರೇಟ್ ಮಾಡ್ಬೇಕು ಅಂತ ಹಾರಿದ ಕತ್ರೀನಾ-ರಣ್ಬೀರ್, ಅಲ್ಲೇ ಉಂಗುರ ಬದಲಾಯಿಸಿ ಭಾರತಕ್ಕೆ ಮರಳಿದ್ದಾರೆ.

Ranbir Kapoor and Katrina Kaif engaged in London?

ನಿಮಗೆಲ್ಲಾ ತಿಳಿದಿರುವಂತೆ ಕತ್ರೀನಾ ಕುಟುಂಬ ನೆಲೆಸಿರುವುದು ಲಂಡನ್ ನಲ್ಲಿ. ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಮೊದಲು ಓದಿದಂತೆ, ನ್ಯೂ ಇಯರ್ ಸೆಲೆಬ್ರೇಷನ್ ಜೊತೆಗೆ ಕತ್ರೀನಾ ಕುಟುಂಬದವರ ಜೊತೆ ಮದುವೆ ಮಾತುಕತೆ ನಡೆಸುವುದಕ್ಕೆ ರಣ್ಬೀರ್, ಲಂಡನ್ ಗೆ ತೆರಳಿದ್ದರು. [ತಾಳಿ ಕಟ್ಟುವ ಶುಭ ವೇಳೆಗೆ ರಣ್ಬೀರ್ ಕಪೂರ್ ರೆಡಿ]

ಇಬ್ಬರ ಪ್ರೀತಿಗೆ ಕತ್ರೀನಾ ತಾಯಿ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ತಡ, ಕುಟುಂಬದವರ ಸಮ್ಮುಖದಲ್ಲೇ, ಹೊಸ ವರ್ಷಾಚರಣೆಯ ಜೊತೆ ಜೊತೆಗೆ ಯುವ ಜೋಡಿ ರಿಂಗ್ ಎಕ್ಸ್ ಚೇಂಜ್ ಮಾಡಿ, ನಿಶ್ಚಿತಾರ್ಥ ಶಾಸ್ತ್ರ ಮುಗಿಸಿದ್ಯಂತೆ.

Ranbir Kapoor and Katrina Kaif engaged in London?2

ಇನ್ನೂ ಅಚ್ಚರಿ ಅಂದ್ರೆ, ಕತ್ರೀನಾ ಕುಟುಂಬದವರ ಮಟ್ಟಿಗಷ್ಟೇ ಇದ್ದ ಈ ಸರಳ ಸಮಾರಂಭದಲ್ಲಿ ರಣ್ಬೀರ್ ಕುಟುಂಬ ಕೂಡ ಭಾಗಿಯಾಗಿತ್ತು ಅನ್ನುವ ಸುದ್ದಿ.

ಈಗಾಗಲೇ ಒಂದೇ ಮನೆಯಲ್ಲಿ ಲಿವಿಂಗ್ ಟು ಗೆದರ್ ರಿಲೇಶನ್ ಶಿಪ್ ನಲ್ಲರುವ ಈ ಜೋಡಿ, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅಂದ್ರೆ ಅದ್ರಲ್ಲಿ ಆಶ್ಚರ್ಯ ಏನಿಲ್ಲ. [ಒಂದೇ ಮನೆಯಲ್ಲಿ ಬಾಲಿವುಡ್ ಪ್ರಣಯ ಪಕ್ಷಿಗಳು]

ಆದ್ರೆ, ಇದೆಲ್ಲಾ ಬರೀ ಅಂತೆ-ಕಂತೆಗಳೋ, ಅಥವಾ ನಿಜವಾಗಿಯೂ ರಣ್ಬೀರ್-ಕತ್ರೀನಾ ನಿಶ್ಚಿತಾರ್ಥ ನೆರವೇರಿದೆಯೋ, ಅವರಿಬ್ಬರೇ ಕನ್ಫರ್ಮ್ ಮಾಡಬೇಕು. (ಏಜೆನ್ಸೀಸ್)

English summary
Lovebirds Ranbir Kapoor and Katrina Kaif, who celebrated New Year together in London, took their relationship to the next level by exchanging rings in a low key affair.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada