»   » ರಣಬೀರ್, ಕತ್ರಿನಾ ಕೈಫ್ ಅಮೀರ್ ಖಾನ್ ಮನೆಯಲ್ಲಿ !

ರಣಬೀರ್, ಕತ್ರಿನಾ ಕೈಫ್ ಅಮೀರ್ ಖಾನ್ ಮನೆಯಲ್ಲಿ !

Posted By:
Subscribe to Filmibeat Kannada

ಸೆಲೆಬ್ರಿಟಿಗಳು ಪಾರ್ಟಿ ಮಾಡಿದರೂ ಸುದ್ದಿ, ಪಾರ್ಟಿಗೆ ಹೋಗಿಲ್ಲಾಂದ್ರಾನೂ ಸುದ್ದಿ. ಪಾರ್ಟಿಯಲ್ಲಿ ಏನಾದರೂ ಕಿರಿಕ್ ಆದ್ರಂತೂ ಸುದ್ದಿಯ ಸುಗ್ಗಿ.

ಸದಾ ಸುದ್ದಿಯಲ್ಲಿರುವ ಬಾಲಿವುಡ್ ಚಾಕೊಲೇಟ್ ಹೀರೋ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಇಬ್ಬರೂ ಮತ್ತೆ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು ಎನ್ನುವ ಸುದ್ದಿಯೊಂದು ಬಾಲಿವುಡ್ ಪಡಶಾಲೆಯಿಂದ ಹೊರ ಬಿದ್ದಿದೆ. (ಬಾಲಿವುಡ್ ಪ್ರಣಯ ಪಕ್ಷಿಗಳು ಕೈಕೈ ಹಿಡಿದು ಮತ್ತೆ ಹಾರಿದವು)

ಬಾಲಿವುಡ್ ನಟ Mr. Perfectionist ಅಮೀರ್ ಖಾನ್ ಮನೆಯಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಇಬ್ಬರೂ ಪಾಲ್ಗೊಂಡಿದ್ದರೆಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಆಯೋಜಿಸಿದ್ದ ಪಾರ್ಟಿಯಲ್ಲಿ ರಣಬೀರ್, ಕತ್ರಿನಾ ಕೈಫ್, ಕರಣ್ ಜೊಹಾರ್, ಆಯನ್ ಮುಖರ್ಜಿ ಮತ್ತು ಆರ್ತಿ ಶೆಟ್ಟಿ ಭಾಗವಹಿಸಿದ್ದರು ಎಂದು ಮಿಡ್ ಡೇ ಪತ್ರಿಕೆ ವರದಿ ಮಾಡಿದೆ. ಈ ಪಾರ್ಟಿಯಲ್ಲಿ ಅಮೀರ್ ಖಾನ್ ಪಾಲ್ಗೊಂಡಿಲ್ಲ, ಅವರು ಯುರೋಪ್ ನಲ್ಲಿದ್ದಾರಂತೆ.

ಆದರೆ ಕತ್ರಿನಾ ಮತ್ತು ರಣಬೀರ್ ಪ್ರತ್ಯೇಕವಾಗಿ ಅಮೀರ್ ಖಾನ್ ಮನಗೆ ಆಗಮಿಸಿದರು. ರಣಬೀರ್ ಕಪೂರ್ ತನ್ನ ಸ್ನೇಹಿತ ಕಮ್ ನಿರ್ಮಾಪಕ ಕರಣ್ ಜೊಹರ್ ಜೊತೆ ಆಗಮಿಸಿದರು. ಪಾರ್ಟಿ ಮುಗಿಸಿ ಕತ್ರಿನಾ ಎಲ್ಲರಿಗಿಂತ ಮೊದಲು ನಿರ್ಗಮಿಸಿದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.

ರಣಬೀರ್ ಮತ್ತು ಕತ್ರಿನಾ ನಡುವೆ ಮಾತುಕತೆ ಇಲ್ಲವಂತೆ...

ರಣಬೀರ್ ಮತ್ತು ಕತ್ರಿನಾ ವಿದೇಶದಿಂದ ವಾಪಸ್

ಜೊತೆಯಾಗಿ ರಣಬೀರ್ ಮತ್ತು ಕತ್ರಿನಾ ನ್ಯೂಯಾರ್ಕ್ ಪ್ರವಾಸಕ್ಕೆ ಗಪ್ ಚುಪ್ ಆಗಿ ತೆರಳಿದ್ದರು. ಆದರೆ ಅಲ್ಲಿಂದ ವಾಪಸ್ ಆಗಬೇಕಾದರೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು.

ರಣಬೀರ್ ತಂದೆ ಫುಲ್ ಗರಂ

ಮಗ ಮತ್ತು ಕತ್ರಿನಾ ನ್ಯೂಯಾರ್ಕ್ ಪ್ರವಾಸ ಮಾಧ್ಯಮಗಳಲ್ಲಿ ಬಹಿರಂಗವಾದ ನಂತರ ತಂದೆ ರಿಷಿ ಕಪೂರ್ ಮಗನ ಮೇಲೆ ಬೇಜಾನ್ ಗರಂ ಆಗಿದ್ದರಂತೆ. ಆ ಘಟನೆಯ ನಂತರ ರಣಬೀರ್ ಮತ್ತು ಕತ್ರಿನಾ ಒಲ್ಲದ ಮನಸ್ಸಿನಿಂದ ನಾನೊಂದು ತೀರ, ನೀನೊಂದು ತೀರ ಆಗಿದ್ದಾರಂತೆ.

ರಣಬೀರ್ ಮತ್ತು ಕತ್ರಿನಾ ನಡುವೆ ಮಾತುಕತೆ ಇಲ್ಲ.

ಈಗ ಇಬ್ಬರ ನಡುವೆ ಮಾತುಕತೆ ಬಿಲ್ ಕುಲ್ ಇಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಅದು ಎಷ್ಟರ ಮಟ್ಟಿಗೆಂದರೆ 'ಜಗ್ಗು ಜಾಸೂಸ್' ಎನ್ನುವ ಚಿತ್ರದ ಶೂಟಿಂಗ್ ಸೆಟ್ ನಲ್ಲೂ ಇಬ್ಬರ ನಡುವೆ ಮಾತುಕತೆ ಇಲ್ಲವಂತೆ.

ಹಾಲಿವುಡ್ ಸ್ಪೆಷಲ್ ಸ್ಕ್ರೀನಿಂಗ್

ದಿ ವಾಲ್ಫ್ ಆಫ್ ವಾಲ್ ಸ್ಟ್ರೀಟ್ ಎನ್ನುವ ಹಾಲಿವುಡ್ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಆ ವಿಶೇಷ ಪ್ರದರ್ಶನದಲ್ಲಿ ಇಬ್ಬರೂ ಭಾಗವಹಿಸಿದ್ದರೂ, ಜೊತೆಯಾಗಿ ಕಾಣಿಸಿ ಕೊಂಡಿರಲಿಲ್ಲ.

ಸ್ಪೇನ್ ಮತ್ತು ಶ್ರೀಲಂಕಾ ಬೀಚಿನಲ್ಲಿ

ಸ್ಪೇನ್ ಬೀಚಿನಲ್ಲಿ ರಣಬೀರ್ ಮತ್ತು ಕತ್ರಿನಾ ವಿಹರಿಸುತ್ತಿದ್ದ ಚಿತ್ರಗಳು ಮಾಧ್ಯಮಗಳಲ್ಲಿ ಮತ್ತು ಅಂತರ್ಜಾಲಗಳಲ್ಲಿ ಬಿತ್ತರಗೊಂಡಿದ್ದವು. ಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದಕ್ಕೆ ಕತ್ರಿನಾ ಮಾಧ್ಯಮಗಳ ಮೇಲೆ ಫುಲ್ ಗರಂ ಆಗಿದ್ದರು. ಇದಾದ ನಂತರ ಈ ಜೋಡಿ ಶ್ರೀಲಂಕಾ ಬೀಚಿನಲ್ಲೂ ಕಾಣಿಸಿಕೊಂಡಿದ್ದರು.

English summary
Ranbir Kapoor and Katrina Kaif in party together, party hosted by Aamir Khan wife Kiran Rao.
Please Wait while comments are loading...