For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ನಿಂದ ಬರ್ತಿದ್ದಾರೆ ಮಹೇಶ್‌ ಬಾಬುಗೆ ತಾಯಿ!

  By ಫಿಲ್ಮಿಬೀಟ್ ಡೆಸ್ಕ್
  |

  ತೆಲುಗು ನಟ ಮಹೇಶ್ ಬಾಬು ಈಗ ಎಲ್ಲರ ಕಣ್ಣು ನೆಟ್ಟಿದೆ. ಅದಕ್ಕೆ ಮುಖ್ಯ ಕಾರಣ ರಾಜಮೌಳಿಯ ಮುಂದಿನ ಸಿನಿಮಾಕ್ಕೆ ಅವರೇ ನಾಯಕ. ಸಿನಿಮಾ ಈಗಾಗಲೇ ಘೋಷಣೆ ಆಗಿದ್ದು ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗಲಿದೆ.

  ಭಾರತದ ಅತ್ಯಂತ ಹ್ಯಾಂಡ್ಸಮ್ ನಟರಲ್ಲಿ ಮಹೇಶ್‌ ಬಾಬು ಅವರನ್ನು ಪರಿಗಣಿಸಲಾಗುತ್ತದೆ. ಅಂದಕ್ಕೆ ಮಹೇಶ್ ಬಾಬುಗೆ ಸಾಟಿಯಾಗಬಲ್ಲ ನಟರು ಭಾರತದಲ್ಲಿ ಅತ್ಯಂತ ವಿರಳ. ಮಹೇಶ್ ಬಾಬು ಅಂದದ ಮುಂದೆ ನಟಿಯರು ಸಹ ಡಲ್ ಹೊಡೆದುಬಿಡುತ್ತಾರೆ.

  ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್: ಅಪ್ಪು ಮೆಚ್ಚಿದ್ದ ಸಿನಿಮಾ ಇದು!ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್: ಅಪ್ಪು ಮೆಚ್ಚಿದ್ದ ಸಿನಿಮಾ ಇದು!

  ಇದೇ ಕಾರಣಕ್ಕೆ ಮಹೇಶ್ ಬಾಬುಗೆ ನಟಿಯರನ್ನು ಆರಿಸುವುದು ನಿರ್ದೇಶಕರಿಗೆ ಕಷ್ಟದ ಕೆಲಸ. ನಟಿಯರನ್ನು ಮಾತ್ರವಲ್ಲ ಅವರ ತಾಯಿ, ತಂದೆಯ ಪಾತ್ರಕ್ಕೆ ನಟರನ್ನು ಹುಡುಕುವುದು ಸಹ ಕಷ್ಟದ ಕೆಲಸವೇ. ಇದೀಗ ಬರುತ್ತಿರುವ ಹೊಸ ಸುದ್ದಿಯ ಪ್ರಕಾರ, ಮಹೇಶ್ ಬಾಬು ತಾಯಿ ಪಾತ್ರದಲ್ಲಿ ನಟಿಸಲು ಬಾಲಿವುಡ್‌ನಿಂದ ಖ್ಯಾತ ನಟಿಯನ್ನು ಕರೆಸಲಾಗುತ್ತಿದೆಯಂತೆ!

  ಮಹೇಶ್ ಬಾಬು ತಾಯಿ ರಾಣಿ ಮುಖರ್ಜಿ

  ಮಹೇಶ್ ಬಾಬು ತಾಯಿ ರಾಣಿ ಮುಖರ್ಜಿ

  ತ್ರಿವಿಕ್ರಮ್ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಮಹೇಶ್ ಬಾಬು ತಾಯಿ ಪಾತ್ರದಲ್ಲಿ ನಟಿಸಲು ಬಾಲಿವುಡ್‌ನ ಖ್ಯಾತ ನಟಿ ರಾಣಿ ಮುಖರ್ಜಿಯನ್ನು ಕರೆತರಲಾಗುತ್ತಿದೆ. ರಾಣಿ ಮುಖರ್ಜಿ ಬಾಲಿವುಡ್‌ನ ಜನಪ್ರಿಯ ನಾಯಕಿಯಾಗಿದ್ದವರು. ಈಗಲೂ ನಟನೆಯಲ್ಲಿ ಸಕ್ರಿಯರಾಗಿರುವ ರಾಣಿ ಮುಖರ್ಜಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಈಗ ಮಹೇಶ್ ಬಾಬು ತಾಯಿ ಪಾತ್ರಕ್ಕೆ ರಾಣಿಯನ್ನು ಒಪ್ಪಿಸಲಾಗಿದೆ ಎನ್ನಲಾಗುತ್ತಿದೆ.

  ಮಹೇಶ್‌ಗಿಂತಲೂ ರಾಣಿ ಮುಖರ್ಜಿ ಸಣ್ಣವರು

  ಮಹೇಶ್‌ಗಿಂತಲೂ ರಾಣಿ ಮುಖರ್ಜಿ ಸಣ್ಣವರು

  ಮಹೇಶ್ ಬಾಬುಗಿಂತಲೂ ರಾಣಿ ಮುಖರ್ಜಿ ವಯಸ್ಸು ಚಿಕ್ಕದು. ಮಹೇಶ್ ಬಾಬುಗೆ ಈಗ 47 ವರ್ಷ ವಯಸ್ಸು, ಅದೇ ರಾಣಿ ಮುಖರ್ಜಿಗೆ 44. ಹಾಗಿದ್ದರೂ ಮಹೇಶ್ ಬಾಬು ತಾಯಿ ಪಾತ್ರದಲ್ಲಿ ರಾಣಿ ಮುಖರ್ಜಿ ನಟಿಸಲಿದ್ದಾರೆ. ಕೆಲವು ವರದಿಗಳ ಪ್ರಕಾರ, ರಾಣಿ ಮುಖರ್ಜಿ, ಮಹೇಶ್ ತಾಯಿಯಾಗಿ ಅಲ್ಲ ಬದಲಿಗೆ ಮಲತಾಯಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಸಿನಿಮಾದಲ್ಲಿ ಮಹೇಶ್ ಬಾಬು ತಾಯಿ ಪಾತ್ರಕ್ಕೆ ಹೆಚ್ಚು ಮಹತ್ವ ಇರುವ ಕಾರಣ ನಿರ್ದೇಶಕ ತ್ರಿವಿಕ್ರಮ್ ರಾಣಿ ಮುಖರ್ಜಿಯನ್ನು ಆರಿಸಿದ್ದಾರೆ ಎನ್ನಲಾಗುತ್ತಿದೆ.

  ಕನ್ನಡತಿಯರಿಬ್ಬರು ನಾಯಕಿಯರು

  ಕನ್ನಡತಿಯರಿಬ್ಬರು ನಾಯಕಿಯರು

  ತ್ರಿವಿಕ್ರಮ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ಮಹೇಶ್ ಬಾಬುಗೆ ಇಬ್ಬರು ನಾಯಕಿಯರು. ನಟಿ ಪೂಜಾ ಹೆಗ್ಡೆ ಹಾಗೂ ಕನ್ನಡತಿ ಶ್ರೀಲೀಲಾ ಇಬ್ಬರೂ ಸಹ ಮಹೇಶ್ ಬಾಬು ಜೊತೆ ನಟಿಸುತ್ತಿದ್ದಾರೆ. ಈಗ ತಂಡಕ್ಕೆ ರಾಣಿ ಮುಖರ್ಜಿಯೂ ಎಂಟ್ರಿ ಕೊಟ್ಟಾಗಿದೆ. ತ್ರಿವಿಕ್ರಮ್ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಭಾರಿ ಬಜೆಟ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾ ಇದಾಗಿದೆ. ರಾಜಮೌಳಿಯೊಟ್ಟಿಗಿನ ಸಿನಿಮಾ ಪ್ರಾರಂಭವಾಗುವ ಮುನ್ನ ಈ ಸಿನಿಮಾ ಮುಗಿಯಲಿದೆ.

  ತ್ರಿವಿಕ್ರಮ್ ಜೊತೆ ಮೂರನೇ ಸಿನಿಮಾ

  ತ್ರಿವಿಕ್ರಮ್ ಜೊತೆ ಮೂರನೇ ಸಿನಿಮಾ

  ತ್ರಿವಿಕ್ರಮ್ ಜೊತೆ ಮೂರನೇ ಬಾರಿ ಮಹೇಶ್ ಬಾಬು ಸಿನಿಮಾ ಮಾಡುತ್ತಿದ್ದಾರೆ. ತ್ರಿವಿಕ್ರಮ್ ನಿರ್ದೇಶನದ ಎರಡನೇ ಸಿನಿಮಾ 'ಅತಡು'ನಲ್ಲಿ ಮಹೇಶ್ ಬಾಬು ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ನಿರ್ದೇಶಿಸಿದ 'ಖಲೇಜ' ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಿದರು. ಅದು ಸಾಧಾರಣ ಯಶಸ್ಸು ಕಂಡಿತು. ಇದೀಗ ಮೂರನೇ ಬಾರಿ ಈ ಜೋಡಿ ಒಂದಾಗಿದೆ. ಈ ಸಿನಿಮಾ ಮುಗಿದ ಬಳಿಕ ರಾಜಮೌಳಿ ನಿರ್ದೇಶನದ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ.

  English summary
  Bollywood actress Rani Mukharji to be mother of Mahesh Babu in his upcoming movie. Rani Mukharji is younger than Mahesh Babu.
  Thursday, December 22, 2022, 14:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X