Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪುಷ್ಪ- 2' ಚಿತ್ರದಿಂದ ರಶ್ಮಿಕಾ- ಫಹಾದ್ ಇಬ್ಬರೂ ಹೊರಕ್ಕೆ? ಹೊಸ ಕಲಾವಿದರಿಗಾಗಿ ಹುಡುಕಾಟ!
ಕಳೆದ ವರ್ಷ ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಕಾರಣಾಂತರಗಳಿಂದ ಸೀಕ್ವೆಲ್ ಶೂಟಿಂಗ್ ತಡವಾಗುತ್ತಿದೆ. ಇದೇ ಹೊತ್ತಲ್ಲಿ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡ್ತಿದೆ.
ಮಾಸ್ ಮಸಾಲಾ ಎಂಟರ್‌ಟೈನರ್ 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮಿಂಚಿದ್ದರು. ಪೊಲೀಸ್ ಆಫೀಸರ್ ಭನ್ವರ್ ಸಿಂಗ್ ಪಾತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್, ಪುಷ್ಪರಾಜ್‌ಗೆ ಸವಾಲ್ ಹಾಕಿದ್ದರು. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಹಿಂದಿ ಬೆಲ್ಟ್‌ನಲ್ಲೂ ಪುಷ್ಪರಾಜ್ ಆರ್ಭಟ ಜೋರಾಗಿತ್ತು. ಇದೀಗ ಸಿನಿಮಾ ಸೀಕ್ವೆಲ್ ಶೂಟಿಂಗ್ ಶುರುವಾಗಿದೆ.
ಹೊಸವರ್ಷಕ್ಕೆ
ಕೃತಿಗೆ
ಪ್ರಭಾಸ್
ಪ್ರಪೋಸ್?
ರೊಮ್ಯಾಂಟಿಕ್
ಪ್ಲೇಸ್‌ನಲ್ಲಿ
ಜೋಡಿ
ನ್ಯೂ
ಇಯರ್
ಸೆಲೆಬ್ರೇಷನ್!
'ಪುಷ್ಪ'- 2 ಸ್ಟಾರ್‌ಕಾಸ್ಟ್ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿ ಬರ್ತಿದೆ. ಸಾಯಿ ಪಲ್ಲವಿ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸ್ತಾರೆ ಎನ್ನಲಾಗ್ತಿದೆ. ಇದೀಗ ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

ರಶ್ಮಿಕಾ, ಫಹಾದ್ ಹೊರಕ್ಕೆ
ಸುಕುಮಾರ್ 'ಪುಷ್ಪ' ಚಿತ್ರದ ಪ್ರತಿ ಪಾತ್ರವನ್ನು ಬಹಳ ವಿಭಿನ್ನವಾಗಿ ಡಿಸೈನ್ ಮಾಡಿದ್ದರು. ಪುಷ್ಪರಾಜ್ ಜೋಡಿಯಾಗಿ ಹಳ್ಳಿ ಹುಡುಗಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮೋಡಿ ಮಾಡಿದ್ದರು. ನೆಗೆಟಿವ್ ಶೇಡ್ ಪೊಲೀಸ್ ಆಫೀಸರ್ ಆಗಿ ಫಹಾದ್ ಮಿಂಚಿದ್ದರು. ಆದರೆ ಇವರಿಬ್ಬರು ಸೀಕ್ವೆಲ್‌ನಲ್ಲಿ ನಟಿಸಲ್ಲ ಎನ್ನಲಾಗ್ತಿದೆ. ರಶ್ಮಿಕಾ ಬದಲು ಶ್ರೀವಲ್ಲಿ ಆಗಿ ಸಾಯಿ ಪಲ್ಲವಿ ನಟಿಸ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಇದೆಲ್ಲಾ ಬರೀ ಗಾಸಿಪ್ ಅಂತಲೇ ಹೇಳಲಾಗ್ತಿದೆ.

ಫಹಾದ್ ಫಾಸಿಲ್‌ಗೆ ಡೇಟ್ಸ್ ಪ್ರಾಬ್ಲಂ
'ಪುಷ್ಪ' ಚಿತ್ರದ ಮೊದಲ ಭಾಗ ಹಿಟ್ ಆಗುತ್ತಿದ್ದಂತೆ 2ನೇ ಭಾಗವನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ಕಟ್ಟಿಕೊಡುವ ಲೆಕ್ಕಾಚಾರ ಶುರುವಾಯಿತು. ಅದೇ ಕಾರಣಕ್ಕೆ ಸ್ಕ್ರಿಪ್ಟ್‌ನಲ್ಲಿ ಸುಕುಮಾರ್ ಬದಲಾವಣೆ ಮಾಡಲು ಸಾಕಷ್ಟು ಸಮಯ ವ್ಯಯಿಸಿದರು. ಪರಿಣಾಮ ಶೂಟಿಂಗ್ ಶುರುವಾಗುವುದೇ ತಡವಾಯಿತು. ಇತ್ತ ಫಹಾದ್ ಫಾಸಿಲ್ ಚಿತ್ರಕ್ಕಾಗಿ ನೀಡಿದ ಡೇಟ್ಸ್ ಮುಗಿದು ಹೋಗಿದೆ. ಡೇಟ್ಸ್ ಕೊಟ್ಟರೂ ಶೂಟಿಂಗ್ ಮಾಡಲಿಲ್ಲ. ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಮತ್ತೆ ಭನ್ವರ್ ಸಿಂಗ್ ಶೇಖಾವತ್ ಪಾತ್ರ ಮಾಡಲು ಕಷ್ಟ ಆಗುತ್ತದೆ ಎಂದಿದ್ದಾರೆ ಎನ್ನಲಾಗ್ತಿದೆ.

ಆಗಸ್ಟ್‌ನಲ್ಲಿ ಚಿತ್ರಕ್ಕೆ ಮುಹೂರ್ತ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊದಲ ಭಾಗ ರಿಲೀಸ್ ಆಗಿತ್ತು. 2ನೇ ಭಾಗದ ಮುಹೂರ್ತ ಆಗಸ್ಟ್‌ನಲ್ಲೇ ನೆರವೇರಿತ್ತು. ಆದರೆ ಚಿತ್ರೀಕರಣ ಮಾತ್ರ ಇತ್ತೀಚೆಗೆ ಶುರುವಾಗಿದೆ. ಪದೇ ಪದೇ ಶೂಟಿಂಗ್ ತಡವಾಗುತ್ತಿರುವುದು ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರಿಂದ ಸಮಸ್ಯೆ ತಂದಿದೆ. ಇನ್ನು ರಶ್ಮಿಕಾ ಪಾತ್ರಕ್ಕೆ ಸಾಯಿ ಪಲ್ಲವಿ ಹಾಗೂ ಐಶ್ವರ್ಯ ರಾಜೇಶ್ ಹೆಸರಗಳು ಕೇಳಿಬರ್ತಿದೆ. ಮತ್ತೆ ಕೆಲವರು ಹೇಳುವ ಪ್ರಕಾರ ಸಾಯಿ ಪಲ್ಲವಿ ನಟಿಸುವುದು ನಿಜ, ಆದರೆ ಶ್ರೀವಲ್ಲಿ ಪಾತ್ರದಲ್ಲಿ ಅಲ್ಲ. ಬೇರೆ ಪಾತ್ರ ಎನ್ನುತ್ತಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ಸಿನಿಮಾ
ಪ್ರೀಕ್ವೆಲ್ 350 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗಾಗಿ 1000 ಕೋಟಿ ಕಲೆಕ್ಷನ್ ಟಾರ್ಗೆಟ್ ಇಟ್ಟುಕೊಂಡು ಸೀಕ್ವೆಲ್ ನಿರ್ಮಾಣ ನಡೀತಿದೆ. 2ನೇ ಭಾಗಕ್ಕೆ ಸುಕುಮಾರ್, ಅಲ್ಲು ಅರ್ಜುನ್ ರೆಮ್ಯೂನರೇಶನ್ ಕೂಡ ಜಾಸ್ತಿ ಆಗಿದೆ. ಎಲ್ಲಾ ವಿಧದಲ್ಲೂ ಮೊದಲ ಭಾಗಕ್ಕಿಂತ 2ನೇ ಭಾಗ ಅದ್ಧೂರಿಯಾಗಿ ಮೂಡಿ ಬರಲಿದೆ. ಮುಂದಿನ ವರ್ಷ್ಯಾಂತಕ್ಕೆ ಮತ್ತೆ ತೆರೆಮೇಲೆ 'ಪುಷ್ಪ'ರಾಜ್ ಆರ್ಭಟ ಶುರುವಾಗುವ ಸಾಧ್ಯತೆಯಿದೆ.