For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್ ಮಗಳಾಗಿ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ

  |

  ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಕಡೆ ಹೊರಟಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ಬ್ಯುಸಿ ಇರುವ ರಶ್ಮಿಕಾ ಇತ್ತೀಚಿಗಷ್ಟೆ ಹಿಂದಿ ಸಿನಿಮಾ ಅನೌನ್ಸ್ ಮಾಡಿದ್ದಾರೆ.

  ಮಿಷನ್ ಮಜ್ನು ಮೂಲಕ ರಶ್ಮಿಕಾ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಇದರ ಬೆನ್ನಲ್ಲೇ ಈಗ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಕಿರಿಕ್ ಸುಂದರಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಬಾಲಿವುಡ್ ನ ಲೆಜೆಂಡ್ ಅಮಿತಾಬ್ ಬಚ್ಚನ್ ಜೊತೆ ನಟಿಸಲು ರಶ್ಮಿಕಾ ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಬಾಲಿವುಡ್ ಸ್ಟಾರ್ ನಟನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ: ಫಸ್ಟ್ ಲುಕ್ ರಿಲೀಸ್

  ಅಮಿತಾಬ್ ಮಗಳ ಪಾತ್ರದಲ್ಲಿ ರಶ್ಮಿಕಾ

  ಅಮಿತಾಬ್ ಮಗಳ ಪಾತ್ರದಲ್ಲಿ ರಶ್ಮಿಕಾ

  ರಶ್ಮಿಕಾ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ರಶ್ಮಿಕಾ ಕಡೆಯಿಂದ ಆಗಲಿ ಅಥವಾ ಸಿನಿಮಾತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಅಮಿತಾಬ್ ಸಿನಿಮಾದಲ್ಲಿ ರಶ್ಮಿಕಾ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ವಿಕಾಸ್ ಬಾಹ್ಲ್ ನಿರ್ದೇಶನ

  ವಿಕಾಸ್ ಬಾಹ್ಲ್ ನಿರ್ದೇಶನ

  ಅಮಿತಾಬ್ ಮತ್ತು ರಶ್ಮಿಕಾ ಸಿನಿಮಾಗೆ ನಿರ್ದೇಶಕ ವಿಕಾಸ್ ಬಹ್ಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಕ್ವೀನ್, ಸೂಪರ್ 30 ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ವಿಕಾಶ್, ಇದೀಗ ರಶ್ಮಿಕಾ ಅವರ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

  ರಶ್ಮಿಕಾ-ರಕ್ಷಿತ್ ಟ್ವಿಟ್ಟರ್ ಲವ್ವು: 'ಏನೋ ಏನೋ ಆಗಿದೆ' ಅಂತಿದ್ದಾರೆ ನೆಟ್ಟಿಗರು

  'ಡೆಡ್ಲಿ' ಎನ್ನುವ ತಾತ್ಕಾಲಿಕ ಟೈಟಲ್

  'ಡೆಡ್ಲಿ' ಎನ್ನುವ ತಾತ್ಕಾಲಿಕ ಟೈಟಲ್

  ಚಿತ್ರಕ್ಕೆ ತಾತ್ಕಾಲಿಕವಾಗಿ ಡೆಡ್ಲಿ ಎಂದು ಹೆಸರಿಡಲಾಗಿದೆ. ಈ ಸಿನಿಮಾ ಅಪ್ಪ ಮತ್ತು ಮಗಳ ಸಂಬಂಧದ ಬಗ್ಗೆ ಇರುವ ಕಥೆಯಾಗಿದೆ. ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾಗೆ ರಿಲಯನ್ಸ್ ಎಂಟರ್ ಟೈನ್ ಮೆಂಟ್ ನಿರ್ಮಾಣ ಮಾಡುತ್ತಿದೆ. ಸದ್ಯ ಸಿನಿಮಾ ಪ್ರಿ ಪ್ರೊಡಕ್ಷನ್ ಕೆಲಸ ಜೋರಾಗಿ ನಡೆಯುತ್ತಿದ್ದು, ಸಿನಿಮಾ ಮುಂದಿನ ವರ್ಷ 2021ರಲ್ಲಿ ಸೆಟ್ಟೇರಲಿದೆ.

  ಮಿಷನ್ ಮಜ್ನು ಸಿನಿಮಾದಲ್ಲಿ ರಶ್ಮಿಕಾ

  ಮಿಷನ್ ಮಜ್ನು ಸಿನಿಮಾದಲ್ಲಿ ರಶ್ಮಿಕಾ

  ರಶ್ಮಿಕಾ ಈಗಾಗಲೇ ಮಿಷನ್ ಮಜ್ನು ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರ ಜೊತೆ ನಟಿಸುತ್ತಿದ್ದಾರೆ.

  1970ರ ಕಾಲಘಟ್ಟದ ನೈಜ ಘಟನೆಯಿಂದ ಪ್ರೇರೇಪಿತ ಚಿತ್ರ ಇದಾಗಿದ್ದು, ಪಾಕಿಸ್ತಾನದಲ್ಲಿರುವ ಭಾರತದ ಅತ್ಯಂತ ಧೈರ್ಯಶಾಲಿ ರಾ ಕಾರ್ಯಚರಣೆ ಬಗ್ಗೆ ಇರುವ ಸಿನಿಮಾವಾಗಿದೆ. ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ರಹಸ್ಯ ಕಾರ್ಯಚರಣೆ ಬಗ್ಗೆ ಇರುವ ಸಿನಿಮಾ ಇದಾಗಿದೆ.

  English summary
  Actress Rashmika mandanna joins Amitabh Bachchan and director Vikas bahl next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X