»   » ರಾಜಮೌಳಿ ಕಣ್ಣು ಕನ್ನಡದ ರಶ್ಮಿಕಾ ಮೇಲೆ ಬಿತ್ತು.?

ರಾಜಮೌಳಿ ಕಣ್ಣು ಕನ್ನಡದ ರಶ್ಮಿಕಾ ಮೇಲೆ ಬಿತ್ತು.?

Posted By:
Subscribe to Filmibeat Kannada
ರಾಜಮೌಳಿ ಕಣ್ಣು ಕನ್ನಡದ ರಶ್ಮಿಕಾ ಮೇಲೆ ಬಿತ್ತು.? | Filmibeat Kannada

'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣಗೆ ಕನ್ನಡಕ್ಕಿಂತ ಪರಭಾಷೆಯಲ್ಲಿ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸದ್ಯ, ಕನ್ನಡದಲ್ಲಿ ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ರಶ್ಮಿಕಾ ಜೊತೆಗೆ ತೆಲುಗಿನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದರು.

ನಾಗಶೌರ್ಯ ಅಭಿನಯದ ಚಲೋ ಚಿತ್ರದಲ್ಲಿ ನಟಿಸಿದ್ದ ರಶ್ಮಿಕಾ ಮೊದಲ ನೋಟದಲ್ಲೇ ತೆಲುಗು ಅಭಿಮಾನಿಗಳನ್ನೂ ಕೂಡ ಬೌಲ್ಡ್ ಮಾಡಿದ್ದರು. ಇದರ ಪರಿಣಾಮ ಮತ್ತಷ್ಟು ತೆಲುಗು ಸಿನಿಮಾಗಳು ಕನ್ನಡದ ಹುಡುಗಿಯ ಪಾಲಾಗುತ್ತಿದೆ.

ರಾಜಮೌಳಿ ಮುಂದಿನ ಸಿನಿಮಾದ ನಾಯಕಿ ಇವರೇ ಅಂತೆ

ಇದರ ಮುಂದುವರೆದ ಭಾಗವಂತೆ ಎಸ್.ಎಸ್ ರಾಜಮೌಳಿಯ ಕಣ್ಣು ರಶ್ಮಿಕಾ ಮಂದಣ್ಣ ಅವರ ಮೇಲೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಚಿತ್ರದ ನಂತರ ಮೆಗಾ ಸಿನಿಮಾ ಕೈಗೆತ್ತಿಕೊಂಡಿರುವ ರಾಜಮೌಳಿ ತೆಲುಗಿನ ಇಬ್ಬರು ಸೂಪರ್ ಸ್ಟಾರ್ ನಟರ ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಕೂಡ ಒಬ್ಬ ನಾಯಕಿಯಾಗುವ ಸಾಧ್ಯತೆ ಇದೆಯಂತೆ. ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.....

RRR ಚಿತ್ರಕ್ಕೆ ರಶ್ಮಿಕಾ ಎಂಟ್ರಿ.!

ರಾಜಮೌಳಿ ಆಕ್ಷನ್ ಕಟ್ ಹೇಳಲಿರುವ 'RRR' ಪ್ರಾಜೆಕ್ಟ್ ಗೆ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆ ಇದೆ. ರಾಮ್ ಚರಣ್ ತೇಜ್ ಮತ್ತು ಜೂನಿಯರ್ ಎನ್.ಟಿ.ಆರ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇಬ್ಬರಲ್ಲಿ ಒಬ್ಬರಿಗೆ ಜೋಡಿಯಾಗಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

ರಾಶಿ ಖನ್ನಾ ಹೆಸರು ಅಂತಿಮ.!

ಸದ್ಯದ ಮಾಹಿತಿ ಪ್ರಕಾರ ರಾಜಮೌಳಿಯ ಈ ದೊಡ್ಡ ಪ್ರಾಜೆಕ್ಟ್ ಗೆ ತೆಲುಗಿನ ಮುದ್ದು ನಟಿ ರಾಶಿ ಖನ್ನಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ತೆಲುಗಿನ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿರುವ ರಾಶಿ, ರಾಜಮೌಳಿ ಚಿತ್ರದಲ್ಲಿ ನಟಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ, ಚಿತ್ರತಂಡ ನಾಯಕಿಯರ ಹುಡುಕಾಟದಲ್ಲಿದ್ದು, ರಾಶಿ ಕಡೆ ಕಣ್ಣಾಕಿರುವುದು ನಿಜವಂತೆ.

ರಕುಲ್ ಮತ್ತು ಸಮಂತಾಗೂ ಚಾನ್ಸ್ ಇದೆ.!

'RRR' ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರಿದ್ದು, ಇಬ್ಬರು ನಾಯಕಿಯರು ಇರೋದು ಖಚಿತ. ಹೀಗಾಗಿ, ಆ ಇಬ್ಬರಿಗೆ ಸೂಕ್ತವಾದ ನಟಿಯರ ಅವಶ್ಯಕತೆ ಇದೆ. ಈಗಾಗಲೇ ರಾಶಿ ಖನ್ನಾ ಜೊತೆ ರಕುಲ್ ಪ್ರೀತ್ ಸಿಂಗ್ ಮತ್ತು ಸಮಂತಾ ಅಕ್ಕಿನೇನಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ.

ರಶ್ಮಿಕಾಗೆ ಅದೃಷ್ಟ ಒಲಿಯಬಹುದು.!

'ಚಲೋ' ಚಿತ್ರದಲ್ಲಿ ಮೋಡಿ ಮಾಡಿದ್ದ ರಶ್ಮಿಕಾ ಮಂದಣ್ಣ ಈಗ ನಾನಿ ವಿಜಯ ದೇವರಕೊಂಡ ಅಭಿನಯದ ಚಿತ್ರದಲ್ಲೂ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಅದಾದ ನಂತರ ನಾನಿ ಸಿನಿಮಾಗೂ ರಶ್ಮಿಕಾ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಹೀಗೆ, ಬ್ಯಾಕ್ ಟು ಬ್ಯಾಕ್ ತೆಲುಗಿನಲ್ಲಿ ಸಂಚಲನ ಸೃಷ್ಟಿಸುತ್ತಿರುವ ರಶ್ಮಿಕಾಗೆ ರಾಜಮೌಳಿ ಬೌಲ್ಡ್ ಆದ್ರೆ ಅಚ್ಚರಿಯಿಲ್ಲ.

ಯಾವಾಗ ಆರಂಭ.!

ಈಗಾಗಲೇ RRR ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ರಾಜಮೌಳಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು. ಮತ್ತೊಂದೆಡೆ ರಾಮ್ ಚರಣ್ 'ರಂಗಸ್ಥಲಂ' ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ. ಎನ್.ಟಿ.ಆರ್ ತ್ರಿವಿಕ್ರಮ ಶ್ರೀನಿವಾಸ್ ಜೊತೆಯಲ್ಲಿ ಸಿನಿಮಾ ಮಾಡ್ತಿದ್ದಾರೆ. ಬಹುಶಃ ಈ ವರ್ಷವೇ ಸೆಟ್ಟೇರಲಿರುವ ಈ ಚಿತ್ರ ಮುಂದಿನ ವರ್ಷ ತೆರೆಕಾಣಬಹುದು.

English summary
Baahubali creator SS Rajamouli announced that Ram Charan and Young Tiger Jr NTR will be sharing the screen space for his upcoming film #RRR. makers are considering the name of Rakul Preet Singh, Samantha Akkineni and Raashi Khanna, Rashmika Mandanna to play the female lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X