Don't Miss!
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಯ್ಯೋ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿಲ್ಲವಂತೆ ರಶ್ಮಿಕಾ ಮಂದಣ್ಣ!
ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು, ಹಿಂದಿ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ರಶ್ಮಿಕಾ ಪ್ರಕಟ ಮಾಡುತ್ತಲೇ ಇದ್ದಾರೆ. ಈಗ ರಶ್ಮಿಕಾ ಮತ್ತೊಂದು ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಲ್ ಚಲ್ ಎಬ್ಬಿಸಿತ್ತು.
ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಕೂಡ ನಟ ವಿಜಯ್ ದೇವರಕೊಂಡ ಎನ್ನಲಾಗಿತ್ತು. ತೆಲುಗಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಹೆಚ್ಚಾಗಿ ಸದ್ದು ಮಾಡಿದ್ದು ವಿಜಯ್ ದೇವರಕೊಂಡ ಜೊತೆಗೆ ಅಭಿನಯಿಸಿದ ಸಿನಿಮಾದ ಮೂಲಕವೇ. ಇವರ ಅಭಿಮಾನಿಗಳು ಕೂಡ ಮತ್ತೆ ಈ ಜೋಡಿ ಜೊತೆಗೆ ಸಿನಿಮಾ ಮಾಡಿ ಎಂದು ಹಲವು ಬಾರಿ ಕೇಳಿಕೊಂಡಿದ್ದರು.
ಮತ್ತೆ ಈ ಜೋಡಿ ಜೊತೆಯಾಗಿ ಸಿನಿಮಾ ಮಾಡುತ್ತಿದೆ. ಈ ಜೋಡಿಯನ್ನು ಒಟ್ಟಿಗೆ ತೆರೆ ಮೇಲೆ ನೋಡಬಹುದು ಎನ್ನುವ ಸುದ್ದಿ ಬಂದಿತ್ತು. ಆದರೆ ಇದು ನಿಜವಲ್ಲ ಎನ್ನುವುದನ್ನು ಚಿತ್ರತಂಡದ ವತಿಯಿಂದ ಖಚಿತ ಪಡಿಸಲಾಗಿತ್ತು.

ವಿಜಯ್ ಚಿತ್ರದಲ್ಲಿ ರಶ್ಮಿಕಾ?
ಈ ಬಾರಿ ನಟಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗೆ ನಾಯಕಿಯಾಗಿ ನಟಿಸುತ್ತಿಲ್ಲ. ವಿಜಯ್ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಸಿನಿಮಾದುದ್ದಕ್ಕೂ ಇರುವುದಿಲ್ಲ. ಸಿನಿಮಾದ ಹಾಡಿನಲ್ಲಿ ಮಾತ್ರ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ದೇವರಕೊಂಡ ನಟನೆಯ 'ಜನ ಗಣ ಮನ' ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿತ್ತು.

'ಜನ ಗಣ ಮನ' ಚಿತ್ರದಲ್ಲಿಲ್ಲ ರಶ್ಮಿಕಾ!
ವಿಜಯ್ ದೇವರಕೊಂಡ ಅಭಿನಯದ 'ಜನ ಗಣ ಮನ' ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. 'ಜನ ಗಣ ಮನ' ಚಿತ್ರದ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುವುದಿಲ್ಲ ಎನ್ನುವ ಸುದ್ದಿ ಬಂದಿದೆ. ಚಿತ್ರತಂಡದ ಆಪ್ತ ಮೂಲಕಗಳ ಮಾಹಿತಿಯಂತೆ ರಶ್ಮಿಕಾ ಮಂದಣ್ಣ ಯಾವುದೇ ಹಾಡಿನಲ್ಲೂ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ ಎಂದು ಟಾಲಿವುಡ್‌ನಲ್ಲಿ ವರದಿ ಆಗಿದೆ.

ರಶ್ಮಿಕಾ, ವಿಜಯ್ ಹಿಟ್ ಕಾಂಬಿನೇಶನ್!
ಈ ಜೋಡಿಯ ಹೆಸರು ಕೇಳುತ್ತಲೇ ಇವರು ಅಭಿನಯದ ಹಿಟ್ ಸಿನಿಮಾ ನೆನಪಾಗುತ್ತೆ. ಹೌದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ 'ಗೀತಾ ಗೋವಿಂದಂ' ಸಿನಿಮಾ ಸೂಪರ್ ಹಿಟ್ ಆದಂತಹ ಸಿನಿಮಾ. ಈ ಚಿತ್ರ ಇವರಿಬ್ಬರಿಗೂ ಕೂಡ ದೊಡ್ಡ ಮಟ್ಟದ ಯಶಸ್ಸು ಕೊಟ್ಟಿತು. ಇದಕ್ಕೂ ಮುನ್ನ ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬೇರೆ ಸಿನಿಮಾ ಮಾಡಿದ್ದರು. ಆದರೆ ತೆಲುಗಿನಲ್ಲಿ ರಶ್ಮಿಕಾಗೆ ಬ್ರೇಕ್ ಕೊಟ್ಟಿದ್ದು 'ಗೀತಾ ಗೋವಿಂದಂ'. ಹಾಗಾಗಿಯೇ ಈ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿತ್ತು. ಈ ಚಿತ್ರದ ಬಳಿಕ 'ಡಿಯರ್ ಕಾಮ್ರೆಡ್' ಚಿತ್ರದಲ್ಲೂ ಕೂಡ ಈ ಜೋಡಿ ಒಟ್ಟಿಗೆ ಹಂಚಿಕೊಂಡಿತ್ತು. ಆದರೆ 'ಗೀತಾಗೋವಿಂದಂ'ನಷ್ಟು ಈ ಸಿನಿಮಾ ಹಿಟ್ ಆಗಲಿಲ್ಲ.

ಮತ್ತೆ ವಿಜಯ-ರಶ್ಮಿಕಾ ಸಿನಿಮಾ ಯಾವಾಗ?
ಇನ್ನು ರೀತಿಯ ಸುದ್ದಿಗೊಂದು ಟಾಲಿವುಡ್‌ನಲ್ಲಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ಈ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡುವುದು ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಟಾಲಿವುಡ್‌ನ ಹಿಟ್ ಜೋಡಿಗಳಲ್ಲಿ ಈ ಜೋಡಿ ಕೂಡ ಒಂದು. 'ಗೀತ ಗೋವಿಂದಂ', 'ಡಿಯರ್ ಕಾಮ್ರೆಡ್' ಸಿನಿಮಾಗಳ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡಿಲ್ಲ. ಅತ್ತ ವಿಜಯ್ ದೇವರಕೊಂಡ 'ಲೈಗರ್' ಸಿನಿಮಾದಲ್ಲಿ ಬ್ಯುಸಿಯಾದರೆ, ರಶ್ಮಿಕಾ ಮಂದಣ್ಣ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಳ್ಳುವುದಲ್ಲದೆ ಬಾಲಿವುಡ್‌ನಲ್ಲಿ ಕೂಡ ಸಿನಿಮಾಗಳನ್ನು ಮಾಡುತ್ತಿದ್ದಾರೆ.