For Quick Alerts
  ALLOW NOTIFICATIONS  
  For Daily Alerts

  'ಪುಷ್ಪ' ಚಿತ್ರಕ್ಕೆ ರಶ್ಮಿಕಾ ಸಂಭಾವನೆ ಎಷ್ಟು? ಕೊರೊನಾ ಕಾಟದಿಂದ ತಲೆಕೆಳಗಾದ ಕಿರಿಕ್ ನಟಿಯ ಪ್ಲಾನ್

  |

  ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ನ ಬಹುಬೇಡಿಕೆಯ ನಟಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಿನ್ಸ್ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಸಿನಿಮಾ ಮಾಡಿದ ನಂತರ ರಶ್ಮಿಕಾ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೆ ಈ ಸಿನಿಮಾ ನಂತರ ರಶ್ಮಿಕಾ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

  ತಮ್ಮ ಕನಸಿನ ಚಿತ್ರಕ್ಕೆ ರಶ್ಮಿಕಾ ಬೇಕು ಅಂದ್ರು ಚಿರಂಜೀವಿ | Chiranjeevi | Rashmika mandanna

  ಸರಿಲೇರು ನೀಕೆವ್ವರು ಮತ್ತು ಭೀಷ್ಮಾ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ರಶ್ಮಿಕಾ ಮತ್ತೆ ಸಂಭಾವನೆ ಹೆಚ್ಚಿಸಿಕೊಂಡಿದ್ದು, ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಅಭಿನಯಿಸಲು ರಶ್ಮಿಕಾ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರಂತೆ. ಮೂಲಗಳ ಪ್ರಕಾರ ರಶ್ಮಿಕಾ ಪುಷ್ಪ ಸಿನಿಮಾಗೆ 1.5 ಕೋಟಿಗೂ ಅಧಿಕ ಅಂದರೆ 2 ಕೋಟಿಯ ಹತ್ರ ಸಂಭಾವನೆ ಪಡೆದಿದ್ದಾರಂತೆ. ಮುಂದೆ ಓದಿ...

  ತಲೆಕೆಳಗಾದ ರಶ್ಮಿಕಾ ಸಂಭಾವನೆ ಪ್ಲಾನ್

  ತಲೆಕೆಳಗಾದ ರಶ್ಮಿಕಾ ಸಂಭಾವನೆ ಪ್ಲಾನ್

  ಪುಷ್ಪಾ ಸಿನಿಮಾಗೆ ಸಹಿ ಹಾಕುವಾಗ 1.5 ಕೋಟಿಗೂ ಅಧಿಕಾ ಸಂಭಾವನೆ ಬೇಡಿಕೆ ಇಟ್ಟಿದ್ದರಂತೆ. ರಶ್ಮಿಕಾ ಬೇಡಿಕೆಯಂತೆ ಚಿತ್ರತಂಡ ಸಂಭಾವನೆ ನೀಡಲು ಮುಂದಾಗಿತ್ತು. ಆದರೀಗ ಕೊರೊನಾ ಲಾಕ್ ಡೌನ್ ನಿಂದ ರಶ್ಮಿಕಾ ಬೇಡಿಕೆ ಇಟ್ಟಷ್ಟು ಸಂಭಾವನೆ ಸಿಗುವುದು ಅನುಮಾನವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ರಶ್ಮಿಕಾಗೀಗ ಜಾಸ್ತಿ ಸಂಭಾವನೆ ಬೇಡಿಕೆ ಇಡುವ ಪ್ಲಾನ್ ತಲೆಕೆಳಗಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ನಟಿ-ನಟಿಯರಿಗೆ ಸಂಭಾವನೆ ಕಡಿತದ ಶಾಕ್

  ನಟಿ-ನಟಿಯರಿಗೆ ಸಂಭಾವನೆ ಕಡಿತದ ಶಾಕ್

  ಲಾಕ್ ಡೌನ್ ನಿಂದ ನಿರ್ಮಾಪಕರು ನಷ್ಟದಲ್ಲಿದ್ದಾರೆ, ಮನರಂಜನಾ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದ್ದು, ಈ ಪರಿಸ್ಥಿತಿ ಸರಿ ಹೋಗಲು ಇನ್ನೂ ಎರಡು ವರ್ಷಗಳು ಬೇಕಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಭಾವನೆ ಕಡಿತಗೊಳಿಸುವಂತೆ ನಟ-ನಟಿಯರಿಗೆ ಒತ್ತಾಯಿಸುತ್ತಿದ್ದಾರಂತೆ.

  ರಶ್ಮಿಕಾ ಬಯಸಿದ್ದಷ್ಟು ಸಂಭಾವನೆ ಸಿಗುವುದು ಅನುಮಾನ

  ರಶ್ಮಿಕಾ ಬಯಸಿದ್ದಷ್ಟು ಸಂಭಾವನೆ ಸಿಗುವುದು ಅನುಮಾನ

  ಸಂಭಾವನೆ ಕಡಿತದಿಂದ ನಟಿ ರಶ್ಮಿಕಾ ಸದ್ಯ ಬಯಸಿದ್ದು ಸಂಭಾವನೆ ಸಿಗುವುದು ಅನುಮಾನವೆಂದು ಹೇಳಲಾಗುತ್ತಿದೆ. ಕೇವಲ ರಶ್ಮಿಕಾ ವಿಚಾರದಲ್ಲಿ ಮಾತ್ರವಲ್ಲದೆ ಸ್ಟಾರ್ ನಟರು ಮತ್ತು ನಟಿಯ ಸಂಭಾವನೆಗೂ ಕತ್ತರಿ ಬೀಳಲಿದೆ ಎಂದು ಹೇಳಲಾಗುತ್ತಿದೆ.

  ಹೆಚ್ಚು ಸಂಭಾವನೆ ಪಡೆಯಲು ಇನ್ನೂ ಕಾಯಬೇಕು

  ಹೆಚ್ಚು ಸಂಭಾವನೆ ಪಡೆಯಲು ಇನ್ನೂ ಕಾಯಬೇಕು

  ಕಡಿಮೆ ಅವಧಿಯಲ್ಲಿ ಅತೀ ವೇಗದಲ್ಲಿ ಸಕ್ಸಸ್ ಕಂಡ ರಶ್ಮಿಕಾ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿಗೆ ಸೇರಲು ಸಜ್ಜಾಗಿದ್ದರು. ಆದರೀಗ ಸಂಭಾವನೆ ಕಡಿತ ಕಿರಿಕ್ ನಟಿಗೆ ಶಾಕ್ ಆಗಿದೆ. ಮತ್ತೆ 2 ಕೋಟಿ ಸಂಭಾವನೆ ಏರಲು ಇನ್ನೂ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

  English summary
  Actress Rashmika remuneration hike spoiled by Corona lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X