»   » ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ

ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕೆಲ ವರ್ಷಗಳ ಹಿಂದೆ ಸುದೀಪ್ ಹಾಗೂ ದರ್ಶನ್ ಮಧ್ಯೆ ಬಿರುಕು ಮೂಡಿದೆ ಅಂತ ಹರಿದಾಡಿದ ಗಾಸಿಪ್ ಸುದ್ದಿಯ ಕಿಡಿ ಈಗ ಹೊತ್ತಿ ಉರಿಯುತ್ತಿದೆ. ನಮ್ಮಬ್ಬಿರ ಗೆಳೆತನ ಇಲ್ಲಿಗೆ ಅಂತ್ಯ ಎಂದು ದಾಸ ದರ್ಶನ್ ಟ್ವೀಟ್ ಮಾಡಿದ್ದಾರೆ.

ಸರಿಗಮಪದಲ್ಲಿ ಸಪ್ತಸ್ವರಗಳ ಜತೆ ಅಭಿನಯ ಚಕ್ರವರ್ತಿ ಸುದೀಪ ಆಟವಾಡುತ್ತಿರುವಾಗ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪಸ್ವರ ಹಾಡುತ್ತಿದ್ದರು. ಸರಣಿ ಟ್ವೀಟ್ ಮೂಲಕ ಗೆಳೆತನ ಕಡಿದುಕೊಂಡಿರುವುದಾಗಿ ಘೋಷಿಸಿದರು. ಇದು ಎರಡು ಕಡೆ ಅಭಿಮಾನಿಗಳಿಗೆ ಹಾಗೂ ಈ ಇಬ್ಬರು ನಟರನ್ನು ನಂಬಿಕೊಂಡಿರುವ ಯುವ ಪ್ರತಿಭಾವಂತ ನಟರಿಗೆ ಆಘಾತಕಾರಿ ಸುದ್ದಿಯಾಯಿತು.

ಟ್ವೀಟ್ ಗಳ ಬಗ್ಗೆ ಚರ್ಚೆ ಆರಂಭವಾಯಿತು. ಇದು ನಿಜವೇ? ಅಥವಾ ಅಕೌಂಟ್ ಹ್ಯಾಕ್ ಆಗಿದೆ? ಇದೇನು ಸ್ಟಾರ್ ಗಳ ಆಟವೇ? ಇಬ್ಬರ ಸ್ನೇಹಕ್ಕೆ ಶನಿಕಾಟವೇನಾದ್ರೂ ವಕ್ಕರಿಸಿತೇ? ಎಂಬ ಪ್ರಶ್ನೆಗಳು ಓಡುವಾಗಲೇ ದರ್ಶನ್ ಅವರು ಗೆಳೆತನ ಬ್ರೇಕ್ ಆಗಲು ಕಾರಣ ಎನ್ನಲಾದ ವಿಡಿಯೋವೊಂದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದರು.[ಸುದೀಪ್-ದರ್ಶನ್ ನಡುವಿನ ವಿರಸದ ಬೆಂಕಿಗೆ ಇಂದು ಬಿಸಿ ಬಿಸಿ ತುಪ್ಪ!]

ಸುಚಿ ಲೀಕ್ಸ್ ವಿಡಿಯೋಗಳಲ್ಲಿ ಮುಳುಗಿರುವ ಪಡ್ಡೆಗಳು, ನಿಶಾಚಾರಿಗಳು, ಸಿನಿರಸಿಕರಿಗೆ ಈ ವಿಡಿಯೋದಲ್ಲಿ ಅಂಥದ್ದೇನಿದೆ ಎಂಬುದು ತಕ್ಷಣಕ್ಕೆ ತಲೆಗೆ ಹೋಗಲಿಲ್ಲ. ಅಂದಹಾಗೆ, ಅದು ಮೆಜೆಸ್ಟಿಕ್ ಚಿತ್ರದ ಕಾಲದ ಮ್ಯಾಟರ್, ಸರಿ ಮುಂದೇನು? ದರ್ಶನ್ ಟ್ವೀಟ್ ಮಾಡಿದ್ದರಲ್ಲಿ ಏನಿದೆ? ಓದಿ...

ನಮ್ಮ ನಡುವೆ ಏನಿಲ್ಲ ಎಂದ ದರ್ಶನ್

ನನ್ನ ಸುದೀಪ್ ನಡುವೆ ಏನಿಲ್ಲ, ದಯವಿಟ್ಟು ಯಾವುದೇ ಗಾಳಿಸುದ್ದಿ ಹಬ್ಬಿಸಬೇಡಿ, ಇದು ಇಲ್ಲಿಗೆ ಅಂತ್ಯ ಎಂಬರ್ಥದಲ್ಲಿ ದರ್ಶನ್ ತೂಗುದೀಪ ಅವರು ಟ್ವೀಟ್ ಹಾಗೂ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.

ಗಾಳಿ ಸುದ್ದಿ ಹಬ್ಬಿಸಬೇಡಿ

ಇಬ್ಬರ ನಡುವೆ ಏನಾಗಿದೆ? ಯಾಕೆ ಗೆಳೆತನ ಮುರಿಯಿತು. ಏನಾಗಿರಬಹುದು ಎಂಬುದಕ್ಕೆ ಕಥೆ ಕಟ್ಟಿ ಗಾಳಿಸುದ್ದಿ ಹಬ್ಬಿಸಬೇಡಿ. ನಾವು ಇನ್ಮುಂದೆ ಒಂದೇ ಸಿನಿಮಾರಂಗದಲ್ಲಿ ದುಡಿಯುವ ಸಹ ಕಲಾವಿದರು ಅಷ್ಟೆ ಎಂದು ದರ್ಶನ್ ಹೇಳಿಕೊಂಡಿದ್ದಾರೆ. ಇದೆನ್ನೆಲ್ಲ ದರ್ಶನ್ ಅವರೇ ಬರೆದಿದ್ದಾ(ಅಣ್ಣನಿಗೆ ಈ ರೀತಿ ಇಂಗ್ಲೀಷ್ ಬರಲ್ಲ ಎಂಬುದು ಅಭಿಮಾನಿಗಳ ಅನುಮಾನ) ದರ್ಶನ್ ಕೂಡಾ ತಮಗೆ ಇಂಗ್ಲೀಷ್ ಗಿಂತ ಕನ್ನಡವೇ(ಕಂಗ್ಲೀಷ್ ರೀತಿ ಟ್ವೀಟ್) ಸುಲಭ ಎಂದು ಹೇಳಿಕೊಂಡಿದ್ದನ್ನು ಸ್ಮರಿಸಬಹುದು.

ಆ ವಿಡಿಯೋ ಯಾವುದು?

ವಿಡಿಯೋವೊಂದನ್ನು ನೋಡಿದಾಗ ನನಗೆ ನೋವಾಯಿತು. ಸುದೀಪ್ ಈ ವಿಡಿಯೋದಲ್ಲಿ ನನ್ನ ಬಗ್ಗೆ ಹೇಳಿಕೆ ನೀಡಿದ್ದರ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ದರ್ಶನ್ ಬಯಸಿದ್ದಾರೆ. ವಿಡಿಯೋದಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸುದೀಪ್ ಸಂದರ್ಶನ ನೀಡುತ್ತಿರುತ್ತಾರೆ. ಮಧ್ಯದಲ್ಲಿ ದರ್ಶನ್ ಕೂಡಾ ವಿಡಿಯೋ ಮೂಲಕ ಮಾತನಾಡಿ, ಇಬ್ಬರ ಸ್ನೇಹದ ಬಗ್ಗೆ ಹೇಳುತ್ತಾರೆ. ನಂತರ ಸುದೀಪ್ ಮಾತನಾಡುತ್ತಾ ನೀಡಿದ ಹೇಳಿಕೆ ಈಗ ಕಿರಿಕಿರಿಗೆ ಕಾರಣವಾಗಿದೆ

ದರ್ಶನ್ ಗೆ ನೆರವಾಗಿದ್ದ ಸುದೀಪ್

ಮೊದಮೊದಲು ದರ್ಶನ್ ಅವರು ಚಿತ್ರರಂಗಕ್ಕೆ ಬಂದಾಗ ಯಾರು ನೆರವಾಗಿರಲಿಲ್ಲ. ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾನೆ. ಲೈಟ್ ಬಾಯ್ ಆಗಿದ್ದಾಗ ನೋಡಿ ಆತನ ಬಗ್ಗೆ ತಿಳಿದುಕೊಂಡಿದ್ದೆ. ಮುಂದೆ ಮೆಜೆಸ್ಟಿಕ್ ಸಿನಿಮಾ ನನ್ನ ಪಿಎನ್ ಸತ್ಯ ಅವರು ಆಫರ್ ಮಾಡಿದಾಗ, ನಾನು ರಿಜೆಕ್ಟ್ ಮಾಡಿ, ನನಗಿಂತ ಅವನೆ ಸ್ಯೂಟ್ ಆಗ್ತಾನೆ ಎಂದು ಸೂಚಿಸಿದ್ದೆ ಎಂದು ಸುದೀಪ್ ಹೇಳುತ್ತಾರೆ. ಈ ಹೇಳಿಕೆ ಈಗ ಇಬ್ಬರ ನಡುವಿನ ಬಿರುಕಿಗೆ ಕಾರಣ ಎನ್ನಲಾಗಿದೆ.

English summary
Rift between Darshan and Sudeep comes to limelight again. Challenging Star Darshan Thoogudeepa today tweeted that he and Sudeep are not friends anymore. The actual reason behind the rift between Sudeep and Darshan has not been revealed.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X