For Quick Alerts
  ALLOW NOTIFICATIONS  
  For Daily Alerts

  ಗೆಳೆಯ ರಕ್ಷಿತ್ ಶೆಟ್ಟಿ ಪಾರ್ಟಿಗೆ ಹೋಗಲ್ವಾ ರಿಷಬ್ ಶೆಟ್ಟಿ? ಕಿರಿಕ್ ಪಾರ್ಟಿಗೆ ಶಾಕ್!

  |

  ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಈ ಮೂವರೂ ಸ್ಯಾಂಡಲ್‌ವುಡ್‌ಗೆ ಹೊಸ ಮೆರುಕು ನೀಡಿದವರು. ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸೋದು, ರಾಜ್ ಬಿ ಶೆಟ್ಟಿ ಸಿನಿಮಾ ರಿಷಬ್ ಶೆಟ್ಟಿ ನಟಿಸೋದು, ಇವರಿಬ್ಬರಿಗಾಗಿ ರಕ್ಷಿತ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡುವುದು ನಡೀತಾನೇ ಇತ್ತು.

  ಹೀಗೆ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿದ್ದ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಲೀಡ್‌ ರೋಲ್‌ನಲ್ಲಿ ನಟಿಸುತ್ತಿದ್ದರು. ಆದ್ರೀಗ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. 'ಕಾಂತಾರ' ಸಿನಿಮಾ ಇವರ ರೇಂಜ್ ಬದಲಾಗಿದೆ.

  'ಕಾಂತಾರ' ಗೆಟಪ್‌ನಲ್ಲಿ ತಹಶೀಲ್ದಾರ್ ಪ್ರತ್ಯಕ್ಷ: ಜಿಲ್ಲಾಧಿಕಾರಿ ಕಂಗಾಲು!'ಕಾಂತಾರ' ಗೆಟಪ್‌ನಲ್ಲಿ ತಹಶೀಲ್ದಾರ್ ಪ್ರತ್ಯಕ್ಷ: ಜಿಲ್ಲಾಧಿಕಾರಿ ಕಂಗಾಲು!

  'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವುದಕ್ಕೆ ಶುರುವಾದಲ್ಲಿಂದ ರಿಷಬ್ ಶೆಟ್ಟಿ ಮುಂದಿನ ನಡೆಯನ್ನು ಕನ್ನಡ ಚಿತ್ರರಂಗ ಸೂಕ್ಷ್ಮವಾಗಿ ನೋಡುತ್ತಿದೆ. ಸಿನಿಮಾ ಮಂದಿ ರಿಷಬ್ ಶೆಟ್ಟಿ ನಡೆಯ ಸಿನಿಮಾ ಮೇಲೆ ಕಣ್ಣಿಟ್ಟಿದೆ. ಈ ವೇಳೆ ಫ್ರೆಶ್ ಸುದ್ದಿಯೊಂದು ಓಡಾಡುತ್ತಿದೆ. ರಿಕ್ಷತ್ ಶೆಟ್ಟಿ ಪಾರ್ಟಿಗೆ ರಿಷಬ್ ಶೆಟ್ಟಿ ಹೋಗುತ್ತಿಲ್ಲ ಅನ್ನೋ ಸುದ್ದಿ ಗಾಂಧಿನಗರದ ಗಲ್ಲಿಯೊಳಗೆ ಗುಲ್ಲೆದ್ದಿದೆ.

   ರಿಷಬ್ ಶೆಟ್ಟಿ ಮುಂದಿನ ನಡೆಯೇನು?

  ರಿಷಬ್ ಶೆಟ್ಟಿ ಮುಂದಿನ ನಡೆಯೇನು?

  ರಿಷಬ್ ಶೆಟ್ಟಿ ರೇಂಜ್ ಈಗ ಬದಲಾಗಿದೆ. 'ಕಾಂತಾರ' ಒಂದೇ ಸಿನಿಮಾ ರಿಷಬ್ ಶೆಟ್ಟಿಯನ್ನು ಅವರೇ ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿದೆ. ಹೀಗಾಗಿ 'ಕಾಂತಾರ' ಬಳಿಕ ಮುಂದೇನು? ರಿಷಬ್ ಶೆಟ್ಟಿ ಈಗಾಗಲೇ ಒಪ್ಪಿಕೊಂಡಿರೋ ಸಿನಿಮಾಗಳ ಕಥೆಯೇನು? 'ಕಾಂತಾರ' ಸಕ್ಸಸ್ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಹಿಂದೆನೇ ಹೋಗುತ್ತಾರಾ? ಇಲ್ಲಾ ಒಪ್ಪಿಕೊಂಡ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಾರಾ? ಅನ್ನೋ ಗೊಂದಲಗಳ ಬಗ್ಗೆ ಗಾಂಧಿನಗರದ ಮಂದಿ ಹೊಸ ಖಬರ್ ಹೊತ್ತು ಅಂದಿದ್ದಾರೆ. ರಕ್ಷಿತ್ ಶೆಟ್ಟಿ ಪಾರ್ಟಿಯಿಂದ ರಿಷಬ್ ಶೆಟ್ಟಿ ಹೊರಬಂದಿದ್ದಾರೆ ಅನ್ನೋದು ಸದ್ಯದ ಮ್ಯಾಟರ್.

   'ಬ್ಯಾಚುಲರ್ ಪಾರ್ಟಿ' ಹೋಗಲ್ವಾ ರಿಷಬ್?

  'ಬ್ಯಾಚುಲರ್ ಪಾರ್ಟಿ' ಹೋಗಲ್ವಾ ರಿಷಬ್?

  ಸದ್ಯದ ಸುದ್ದಿ ಹಾಗೇ ಇದೆ. 'ಕಾಂತಾರ' ಬಳಿಕ ರಿಷಬ್ ಶೆಟ್ಟಿ ಸಿನಿಮಾ ಮೇಕಿಂಗ್ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರಂತೆ. ಈಗಾಗಲೇ ಒಪ್ಪಿಕೊಂಡಿರೋ ಸಿನಿಮಾಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಅನ್ನೋ ಗೊಂದಲದಲ್ಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಈಗಿರೋ ಸುದ್ದಿ ಪ್ರಕಾರ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ ನಟಿಸೋದಿಲ್ಲ ಅಂತ ರಿಷಬ್ ಶೆಟ್ಟಿ ಸಂದೇಶ ರವಾನೆ ಮಾಡಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ರಿಷಬ್ ಶೆಟ್ಟಿಯ ಈ ನಿರ್ಧಾರಕ್ಕೆ ರಕ್ಷಿತ್ ಶೆಟ್ಟಿ ಕೂಡ ಶಾಕ್ ಆಗಿದ್ದಾರಂತೆ. ಇದು ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ. ಆದರೆ, ಇಬ್ಬರೂ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ.

   'ಬ್ಯಾಚುಲರ್ ಪಾರ್ಟಿ' ಕೈ ಬಿಟ್ಟಿದ್ದೇಕೆ?

  'ಬ್ಯಾಚುಲರ್ ಪಾರ್ಟಿ' ಕೈ ಬಿಟ್ಟಿದ್ದೇಕೆ?

  ರಿಷಬ್ ಶೆಟ್ಟಿ 'ಬ್ಯಾಚುಲರ್ ಪಾರ್ಟಿ' ಸಿನಿಮಾದಿಂದ ಹೊರಬರೋದಕ್ಕೆ ಬಲವಾದ ಕಾರಣವಿದೆ. 'ಕಾಂತಾರ' ಸಿನಿಮಾ ಮೆಗಾ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಹೊಂಬಾಳೆ ನಿರ್ಮಾಣ ಸಂಸ್ಥೆ ಜೊತೆನೇ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಗಾಂಧಿನಗರದ ಮೂಲಗಳ ಪ್ರಕಾರ, ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಜೊತೆ 5 ಸಿನಿಮಾಗಳ ಒಡಂಬಡಿಕೆ ಮಾಡಿಕೊಂಡಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಆದರೆ, ಈ ಬಗ್ಗೆನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

   ರಿಷಬ್ ನಟಿಸೋ ಸಿನಿಮಾಗಳ್ಯಾವುವು?

  ರಿಷಬ್ ನಟಿಸೋ ಸಿನಿಮಾಗಳ್ಯಾವುವು?

  ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಬಿಡುಗಡೆಗೂ ಮುನ್ನವೇ 'ಬೆಲ್‌ ಬಾಟಂ 2', 'ಆಡಗೊನಿ ಶೆಟ್ಟಿ', 'ಮಹಾನಿಯರೇ ಮಹಿಳೆಯರೇ' ಹಾಗೂ 'ಬ್ಯಾಚುಲರ್ ಪಾರ್ಟಿ' ಸಿನಿಮಾವನ್ನು ಒಪ್ಪಿಕೊಂಡಿದ್ದರು. ಆದ್ರೀಗ ಈ ಸಿನಿಮಾಗಳಲ್ಲಿ ಯಾವುದಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾರೆ ಅನ್ನೋದು ಕುತೂಹಲವಿದೆ. ಕೆಲವು ದಿನಗಳ ಹಿಂದೆ ಈಗಾಗಲೇ ಒಪ್ಪಿಕೊಂಡ ಸಿನಿಮಾಗಳ ಬಗ್ಗೆ ಆಲೋಚನೆ ಮಾಡುತ್ತಿರೋದಾಗಿ ರಿಷಬ್ ಶೆಟ್ಟಿ ಚಿಕ್ಕದೊಂದು ಸುಳಿವು ನೀಡಿದ್ದರು.

  ಹಾಲಿವುಡ್ ನೋಡಿ ಕಲಿಬೇಕು ಎಂದ ಅಕ್ಷಯ್‌ಗೆ 'ಕಾಂತಾರ', 'ಕೆಜಿಎಫ್ 2' ನೋಡಿ ಎಂದ ಫ್ಯಾನ್ಸ್!ಹಾಲಿವುಡ್ ನೋಡಿ ಕಲಿಬೇಕು ಎಂದ ಅಕ್ಷಯ್‌ಗೆ 'ಕಾಂತಾರ', 'ಕೆಜಿಎಫ್ 2' ನೋಡಿ ಎಂದ ಫ್ಯಾನ್ಸ್!

  English summary
  Rishab Shetty Out Of Bachelors Party Gave Shock To Rakshit Shetty. He Signed 5 Films For Hombale Production, Know More.
  Wednesday, November 16, 2022, 12:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X