Don't Miss!
- Technology
ಚಂದಾದಾರರ ಕುಸಿತವನ್ನು ತಡೆಗಟ್ಟಲು ನೆಟ್ಫ್ಲಿಕ್ಸ್ನಿಂದ ಹೊಸ ಪ್ಲಾನ್!
- News
ಪಠ್ಯ ಪುಸ್ತಕ ಪರಿಷ್ಕರಣೆ; ಸರ್ಕಾರದ ವಿರುದ್ಧ ರಮೇಶ್ ಕುಮಾರ್ ಗರಂ
- Sports
ರಮೀಜ್ ರಾಜಾರನ್ನು ಐಪಿಎಲ್ಗೆ ಆಹ್ವಾನಿಸಿದ್ದ ಸೌರವ್ ಗಂಗೂಲಿ; ಪಾಕ್ ಕ್ರಿಕೆಟ್ ಅಧ್ಯಕ್ಷ ತಿರಸ್ಕರಿಸಿದ್ದೇಕೆ?
- Education
Vijayapura District Court Recruitment 2022 : 28 ಜವಾನ, ಆದೇಶ ಜಾರಿಕಾರ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಮಳೆಗಾಲದಲ್ಲಿ ಈ ಪ್ರಮುಖ ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಎಚ್ಚರ!
- Automobiles
ಬರೋಬ್ಬರಿ 40 ವೆರಿಯೆಂಟ್ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್
- Finance
ಅತೀ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ ನೀಡುತ್ತೆ ಈ ಬ್ಯಾಂಕುಗಳು!
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಕನ್ನಡ ಚಿತ್ರರಂಗಕ್ಕೆ ಪೂಜಾ ಹೆಗ್ಡೆ ಎಂಟ್ರಿ? ಹೀರೊ ಯಾರು?
ಕರಾವಳಿಯ ಬೆಡಗಿಯಾಗಿದ್ದರೂ ಪೂಜಾ ಹೆಗ್ಡೆ ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಹೀಗಾಗಿ ಕರ್ನಾಟಕದೊಂದಿಗೆ ನಂಟು ಬೆಳೆಸಿಕೊಂಡಿದ್ದು ತೀರಾ ವಿರಳ. ಇತ್ತೀಚೆಗೆ ಅವಾರ್ಡ್ ಕಾರ್ಯಕ್ರಮವೊಂದನ್ನು ಅನೌನ್ಸ್ ಮಾಡಲು ಬೆಂಗಳೂರಿಗೆ ಬಂದು ಹೋಗಿದ್ದು ಬಿಟ್ಟರೆ, ಮತ್ತೆ ಈ ನಟಿಯ ಸುಳಿವೇ ಇರಲಿಲ್ಲ. ಈಗ ಪೂಜಾ ಹೆಗ್ಡೆ ಬಗ್ಗೆ ಟಾಲಿವುಡ್‌ನಲ್ಲಿ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ.
ಪೂಜಾ ಹೆಗ್ಡೆಯ ಮೂಲ ಕರ್ನಾಟಕವೇ ಆಗಿದ್ದರೂ, ಇದೂವರೆಗೂ ಒಂದೇ ಒಂದು ಕನ್ನಡ ಸಿನಿಮಾದಲ್ಲೂ ನಟಿಸಿಲ್ಲ. ರಾಜ್ಯಕ್ಕೆ ಕಾಲಿಟ್ಟಾಗಲೆಲ್ಲಾ ಕನ್ನಡ ಸಿನಿಮಾ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಆಗ ಭಾರತದ ಬ್ಯುಸಿ ನಟಿ ಪೂಜಾ ಹೆಗ್ಡೆ ಕನ್ನಡಕ್ಕೆ ಬಂದೇ ಬಿಡುತ್ತಾರೆ ಅನ್ನುವ ಹೋಪ್ ಬಂದಿದ್ದು ಇದೆ. ಮತ್ತೆ ಟಾಲಿವುಡ್, ಕಾಲಿವುಡ್, ಬಾಲಿವುಡ್‌ನಲ್ಲಿ ಹೊಸ ಸಿನಿಮಾಗಳು ಸೆಟ್ಟೇರಿದಾಗ ಮತ್ತೆ ಫ್ಯಾನ್ಸ್‌ಗೆ ನಿರಾಸೆ.
ಹ್ಯಾಟ್ರಿಕ್
ಸೋಲಿನ
ಬಗ್ಗೆ
ಮೊದಲ
ಬಾರಿಗೆ
ಮೌನ
ಮುರಿದ
ನಟಿ
ಪೂಜಾ
ಹೆಗಡೆ:
ಟ್ರೋಲಿಗರಿಗೆ
ಚಾಟಿ
ಏಟು?
ಈ ಬಾರಿ ಟಾಲಿವುಡ್‌ನಲ್ಲಿ ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್ ಎಂಟ್ರಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಮೂರು ಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿರುವ ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಾರಾ? ಅಸಲಿಗೆ ಆ ಸಿನಿಮಾ ಯಾವುದು? ಹೀರೊ ಯಾರು? ಸ್ಯಾಂಡಲ್‌ವುಡ್ ಎಂಟ್ರಿ ಬಗ್ಗೆ ಟಾಲಿವುಡ್‌ನಲ್ಲಿ ಯಾಕೆ ಚರ್ಚೆ? ಇದೆಲ್ಲವನ್ನೂ ತಿಳಿಯಲು ಮುಂದೆ ಓದಿ.

ಪೂಜಾ ಹೆಗ್ಡೆ ಬಗ್ಗೆ ಏನಿದು ಸುದ್ದಿ?
ಪೂಜಾ ಹೆಗ್ಡೆಯ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುಂಡಿವೆ. ಹಾಗಂತ ಪೂಜಾ ಹೆಗ್ಡೆಗೆ ಬೇಡಿಕೆ ಕಮ್ಮಿಯಾಗಿಲ್ಲ. ಟಾಲಿವುಡ್‌ನಲ್ಲಿ ಇನ್ನೂ ಹೆಚ್ಚು ಸಿನಿಮಾಗಳು ಸೆಟ್ಟೇರಿವೆ. ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳಿವೆ. ತಮಿಳಿನಲ್ಲೊಂದು ಸಿನಿಮಾ ಸೆಟ್ಟೇರಲಿದೆ. ಈ ಮಧ್ಯೆ ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಅನ್ನುವ ಸುದ್ದಿಯೊಂದು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಕಾತುರದಿಂದ ಕಾದು ಕೂತಿದ್ದ ಪೂಜಾ ಹೆಗ್ಡೆ ಅಭಿಮಾನಿಗಳಿಗೆ ಖುಷಿಯೊಂದು ಸಿಕ್ಕಂತಾಗಿದೆ.
'ನನಗೆ
ಬಾಲಿವುಡ್‌ನಲ್ಲಿ
ಯಾರೂ
ಒಳ್ಳೆ
ಆಫರ್
ಕೊಟ್ಟಿಲ್ಲ':
ಪೂಜಾ
ಹೆಗ್ಡೆ
ಬಹಿರಂಗ
ಮಾತು

ಪೂಜಾ ಹೆಗ್ಡೆ ನಟಿಸೋ ಕನ್ನಡ ಸಿನಿಮಾ ಯಾವುದು?
ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಅನ್ನುವ ಸುದ್ದಿಯೇನೋ ಕುತೂಹಲ ಹೆಚ್ಚಿಸಿದೆ. ಈ ಬೆನ್ನಲೇ ಹೀರೊ ಯಾರು? ಅನ್ನುವ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್‌ನ ದೊಡ್ಡ ಹೀರೊ ಸಿನಿಮಾದಲ್ಲಿಯೇ ಕಾಣಿಸಿಕೊಳ್ಳಲಿದ್ದಾರಂತೆ. ಅದು ಮತ್ಯಾರೂ ಅಲ್ಲ ಯಶ್ ಎನ್ನುತ್ತಿದೆ ಟಾಲಿವುಡ್. ನರ್ತನ್ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ ಎಂದು ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಆದರೆ, ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ಈ ಬಗ್ಗೆ ಸುಳಿವೇ ಇಲ್ಲ.

ಪೂಜಾ ಸ್ಯಾಂಡಲ್‌ವುಡ್ ಎಂಟ್ರಿ ನಿಜವೇ?
ಟಾಲಿವುಡ್ ನಟಿ ಪೂಜಾ ಹೆಗ್ಡೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮೂರು ಭಾಷೆಯ ಸಿನಿಮಾಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಪೂಜಾ ಹೆಗ್ಡೆ ಸ್ಯಾಂಡಲ್‌ವುಡ್ ಎಂಟ್ರಿ ಕೊಡುವುದು ಅನುಮಾನ. ಅದರಲ್ಲೂ ಯಶ್ ಸಿನಿಮಾಗೆ ಆಯ್ಕೆ ಆಗುವುದೂ ಕೂಡ ಅನುಮಾನ ಎನ್ನಲಾಗಿದೆ. ಇದಕ್ಕೆ ಕಾರಣ, ಡೇಟ್ಸ್. ಯಶ್ ಮುಂದಿನ ಸಿನಿಮಾ ಪ್ಯಾನ್ ಇಂಡಿಯಾನೇ ಆಗಿರುತ್ತೆ. ಹೀಗಾಗಿ ಈ ಸಿನಿಮಾಗೆ ಹೆಚ್ಚು ಸಮಯ ಕೊಡಬೇಕು. ಸದ್ಯದ ಮಟ್ಟಿಗೆ ಪೂಜಾ ಹೆಗ್ಡೆಗೆ ಫ್ಲೆಕ್ಸಿಬಲ್ ಡೇಟ್ ಕೊಡುವುದು ಅಸಾಧ್ಯ. ಈ ಕಾರಣಕ್ಕೆ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವುದು ಕೇವಲ ವದಂತಿ ಎನ್ನಬಹುದು.
ನಟಿ
ಪೂಜಾ
ಹೆಗ್ಡೆಗೆ
ಬೆದರಿಕೆ:
ಅಳಲು
ತೋಡಿಕೊಂಡ
ನಟಿ!

ಬುಟ್ಟ ಬೊಮ್ಮ ಕೈ ತುಂಬಾ ಸಿನಿಮಾ
ಪೂಜಾ ಹೆಗ್ಡೆ ಕೈ ತುಂಬಾ ಸಿನಿಮಾಗಳಿವೆ. ಬಾಲಿವುಡ್‌ನಲ್ಲಿ ರಣ್‌ವೀರ್ ಸಿಂಗ್ ಅಭಿನಯದ 'ಸರ್ಕಸ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಜೋಡಿಯ 'JGM' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನೊಂದು ಕಡೆ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅತ್ತ ತಮಿಳಿನಲ್ಲಿ ಸೂರ್ಯ ಮುಂದಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಎಲ್ಲಾ ಕಾರಣಕ್ಕೆ ಯಶ್ ಸಿನಿಮಾದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುವುದು ಬಹುತೇಕ ಅನುಮಾನ.