Don't Miss!
- Sports
ಉಜ್ಜೈನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಟೀಂ ಇಂಡಿಯಾ ಆಟಗಾರರು: ಪಂತ್ ಗುಣಮುಖವಾಗುವಂತೆ ಪ್ರಾರ್ಥನೆ
- News
ತೆರಿಗೆ ಉಳಿಸುವ FD ಗಳು: ಈ ಬ್ಯಾಂಕುಗಳಲ್ಲಿ ಶೇ 7.6ರ ವರೆಗೆ ಬಡ್ಡಿದರ- ಹಿರಿಯ ನಾಗರಿಕರಿಗೆ ಇನ್ನೂ ಹೆಚ್ಚು
- Automobiles
ಬಹುನಿರೀಕ್ಷಿತ 'ಹೀರೋ Xoom 110 ಸಿಸಿ' ಟೀಸರ್: ಜ.30ಕ್ಕೆ ಸ್ಕೂಟರ್ ಬಿಡುಗಡೆ.. ಹೋಂಡಾ ಡಿಯೋಗೆ ಪ್ರತಿಸ್ಪರ್ಧಿ!
- Technology
ಮೆಗಾ ರಿಪಬ್ಲಿಕ್ ಡೇ ಸೇಲ್: ಫೋನ್ಗಳಿಗೆ ಭಾರೀ ಡಿಸ್ಕೌಂಟ್, ಗಮನ ಸೆಳೆದ ಆಫರ್!
- Lifestyle
ಕುಂಭ ರಾಶಿಯಲ್ಲಿರುವ ಶನಿ: ಲಾಲ್ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ
- Finance
ಹೊಸ ಕುಟುಂಬ ಸದಸ್ಯರ ಹೆಸರು ರೇಷನ್ ಕಾರ್ಡ್ಗೆ ಹೀಗೆ ಅಪ್ಡೇಟ್ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ವರ್ಷ 6 ತಿಂಗಳ ಅಂತರದಲ್ಲಿ ಪ್ರಭಾಸ್ 3 ಸಿನಿಮಾ ರಿಲೀಸ್? ಏನಿದು ಲೆಕ್ಕಾಚಾರ?
ಟಾಲಿವುಡ್‌ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಯಶಸ್ಸಿನ ಬೆನ್ನು ಹತ್ತಿ ಹೊರಟಿದ್ದಾರೆ. 'ಬಾಹುಬಲಿ' ಸಿರೀಸ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರೋ ಡಾರ್ಲಿಂಗ್‌ಗೆ ಮತ್ತೆ ಯಶಸ್ಸು ಅನ್ನೋದು ಮರೀಚಿಕೆಯಾಗಿಬಿಟ್ಟಿದೆ.
'ಬಾಹುಬಲಿ' ಬಳಿಕ ತೆರೆಕಂಡ 'ಸಾಹೋ' ಹಾಗೂ 'ರಾಧೆ ಶ್ಯಾಮ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಲೇ ಇಲ್ಲ. ಹೀಗಾಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬ್ಲಾಕ್ ಬಸ್ಟರ್ ಸಿನಿಮಾ ಕೊಡಲೇಬೇಕು ಅಂತ ಪಣ ತೊಟ್ಟು ನಿಂತಿದ್ದಾರೆ. ಹೀಗಾಗಿಯೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
2023ರಲ್ಲಿ ಪ್ರಭಾಸ್ ಅಭಿನಯದ ಎರಡು ಸಿನಿಮಾಗಳು ರಿಲೀಸ್ ಆಗೋದು ಪಕ್ಕಾ. ಯಾಕಂದ್ರೆ ಈಗಾಗಲೇ ಎರಡು ಸಿನಿಮಾಗಳು ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಈ ಮೂರನೇ ಸಿನಿಮಾ ರಿಲೀಸ್ ಬಗ್ಗೆನೂ ಚರ್ಚೆಯಾಗುತ್ತಿದೆ. ಸದ್ಯ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ, ಆರು ತಿಂಗಳ ಅಂತರದಲ್ಲಿ ಪ್ರಭಾಸ್ ಮೂರು ಸಿನಿಮಾ ರಿಲೀಸ್ ಆಗಲಿದೆಯಂತೆ.

6 ತಿಂಗಳಲ್ಲಿ ಪ್ರಭಾಸ್ ಮೂರು ಸಿನಿಮಾ ರಿಲೀಸ್?
ಕಳೆದ ವರ್ಷ ಪ್ರಭಾಸ್‌ಗೆ ಅಷ್ಟೊಂದು ಲಾಭದಾಯಕವಾಗಿರಲಿಲ್ಲ. ಆದರೆ, 2023ಯಲ್ಲಿ ಪ್ರಭಾಸ್ ಮತ್ತೆ ಬಾಕ್ಸಾಫೀಸ್‌ನಲ್ಲಿ ರಾರಾಜಿಸುವ ಸಾಧ್ಯತೆಗಳು ಇವೆ. ಸದ್ಯ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ವಿಷಯವೇನು ಅಂದ್ರೆ, ಪ್ರಭಾಸ್ ಮೂರು ಸಿನಿಮಾಗಳು ಆರು ತಿಂಗಳ ಅಂತರದಲ್ಲಿ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. 'ಆದಿಪುರುಷ್' ಸಿನಿಮಾ ಜೂನ್ 16ಕ್ಕೆ ರಿಲೀಸ್ ಆಗಲಿದೆ. ಮೂರು ತಿಂಗಳ ಅಂತರದಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಲಿದೆ. ಮಾರುತಿ ನಿರ್ದೇಶಿಸುತ್ತಿರುವ ಸಿನಿಮಾ ಮೂರು ತಿಂಗಳ ಬಳಿಕ ಅಂದ್ರೆ, ಸಂಕ್ರಾಂತಿಗೆ ರಿಲೀಸ್ ಆಗುತ್ತೆ ಅನ್ನೋ ಗುಲ್ಲೆದ್ದಿದೆ.

ನಾಲ್ಕು ಸಿನಿಮಾಗಳಲ್ಲಿ ಬ್ಯುಸಿ
ಪ್ರಭಾಸ್ ಏಕಕಾಲಕ್ಕೆ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದ್ಕಡೆ 'ಆದಿಪುರುಷ್' ಶೂಟಿಂಗ್ ಮಾಡುತ್ತಿರುವಾಗಲೇ ಅತ್ತ 'ಸಲಾರ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಇನ್ನೊಂದು ಕಡೆ ಮಾರುತಿ ನಿರ್ದೇಶನದ ಸಿನಿಮಾ. ಮತ್ತೊಂದು ಕಡೆ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿರುವ 'ಪ್ರಾಜೆಕ್ಟ್ ಕೆ'. ಈ ಎಲ್ಲಾ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗಲಿವೆ.

ಇದು ಲಾಭನಾ? ನಷ್ಟನಾ?
ಪ್ರಭಾಸ್ ಸಿನಿಮಾ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿರೋದು ಅಭಿಮಾನಿಗಳಿಗೆ ಖಂಡಿತವಾಗಿಯೂ ಹಬ್ಬ. ಆದರೆ, ನಿರ್ಮಾಪಕರಿಗೆ ಏಟು ಕೊಡುವ ಸಾಧ್ಯತೆಯಿದೆ. ಪ್ರಭಾಸ್ ಸಿನಿಮಾ ಒಂದರ ಹಿಂದೊಂದು ರಿಲೀಸ್ ಆಗುತ್ತಿರುವುದರಿಂದ ಪ್ರೇಕ್ಷಕರಿಗೆ ಬೋರ್ ಆಗಬಹುದು. ಅಲ್ಲದೆ ಪ್ರಭಾಸ್ ಗ್ಯಾಪ್ ಇಲ್ಲಿದೆ ಆರು ತಿಂಗಳು ಪ್ರಚಾರದಲ್ಲಿಯೇ ನಿರತರಾಗಬೇಕಾಗುತ್ತೆ. ಹೀಗಾಗಿ ಈಗಾಗಲೇ ಚಿತ್ರೀಕರಣದಲ್ಲಿರುವ ಸಿನಿಮಾಗಳಿಗೆ ನಷ್ಟ ಆಗುವ ಸಾಧ್ಯತೆಗಳು ಇವೆ.

ಪ್ರಭಾಸ್ ಕೈ ತುಂಬಾ ಸಿನಿಮಾಗಳು
ಆರು ತಿಂಗಳಲ್ಲಿ ಪ್ರಭಾಸ್ ಮೂರು ಸಿನಿಮಾ ರಿಲೀಸ್ ಆಗುತ್ತಿರೋದೇನೋ ಸರಿ. ಈಗಾಗಲೇ ಒಪ್ಪಿಕೊಂಡಿರೋ ಉಳಿದಿ ಸಿನಿಮಾಗಳ ಕಥೆಯೇನು? ಪ್ರಶ್ನೆನೂ ಕಾಡುತ್ತಿದೆ. 'ಅರ್ಜುನ್ ರೆಡ್ಡಿ' ಸಿನಿಮಾದ ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಸ್ಪಿರಿಟ್' ಆರಂಭ ಆಗಬೇಕಿದೆ. ನಾಗ್ ಅಶ್ವಿನ್ ಸಿನಿಮಾ 'ಪ್ರಾಜೆಕ್ಟ್ ಕೆ' ಮುಗಿಯಬೇಕಿದೆ. ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್ ಸಿನಿಮಾ ಆರಂಭ ಆಗಬೇಕು. ಇವೆಲ್ಲ ಯಾವಾಗ ಶುರುವಾಗುತ್ತೆ? ಯಾವಾಗ ರಿಲೀಸ್ ಆಗುತ್ತೆ? ಅನ್ನೋ ಪ್ರಶ್ನೆಯಂತೂ ಇದ್ದೇ ಇದೆ.