Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುಂಬೈನಲ್ಲಿ ಡಿನ್ನರ್.. ಗೋವಾದಲ್ಲಿ ನ್ಯೂ ಇಯರ್..! ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಸಂಭ್ರಮದ ಗುಟ್ಟೇನು?
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಮೋಸ್ಟ್ ಪಾಪುರಲ್ ಜೋಡಿ. ಈ ಜೋಡಿ ಹೋದಲ್ಲೆಲ್ಲಾ ಗಾಳಿಸುದ್ದಿಗಳೂ ಇವರನ್ನು ಹಿಂಬಾಲಿಸಿಕೊಂಡು ಬರುತ್ತವೆ. ಹೀಗಾಗಿ ರಶ್ಮಿಕಾ ಹಾಗೀ ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಹೀಗಿದ್ದರೂ ಈ ಜೋಡಿ ಬಗ್ಗೆ ಚಿತ್ರರಂಗದಲ್ಲಿ ಗುಸು ಗುಸು ಕೇಳುವುದಕ್ಕೆ ಸಿಗುತ್ತಲೇ ಇರುತ್ತೆ. ಈಗ ಇಬ್ಬರೂ ಒಟ್ಟಿಗೆ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.
Recommended Video
ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕೆಮಿಸ್ಟ್ರಿ ಬೇಜಾನ್ ಸದ್ದು ಮಾಡುತ್ತಲೇ ಇರುತ್ತೆ. 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಸಿನಿಮಾದ ಬಳಿಕ ಇಬ್ಬರ ನಡುವಿನ ಪ್ರೇಮ ಕಥೆಗೆ ಮತ್ತಷ್ಟು ರೆಕ್ಕೆ-ಪುಕ್ಕಗಳು ಅಂಟಿಕೊಳ್ಳುವುದಕ್ಕೆ ಶುರುವಾಗಿತ್ತು. ಆದರೂ, ಈ ಜೋಡಿ ಮಾತ್ರ ನಾವಿಬ್ಬರೂ ಸ್ನೇಹಿತರು ಎಂದಷ್ಟೇ ಹೇಳಿಕೊಂಡಿತ್ತು. ಆದ್ರೀಗ ಗೋವಾದಲ್ಲಿ ಒಟ್ಟಿಗೆ ಹೊಸ ವರ್ಷವನ್ನು ಆಚರಣೆ ಮಾಡಿಕೊಂಡಿದ್ದು, ಅದಕ್ಕೆ ಪ್ರೋಫ್ ಕೂಡ ಸಿಕ್ಕಿದೆ.

ವಿಜಯ್ ಸಹೋದರನ ಫೋಟೊದಲ್ಲಿದೆ ಗುಟ್ಟು
ರಶ್ಮಿಕಾ ಮಂದಣ್ಣ ಹೊಸ ವರ್ಷಕ್ಕೆ ಫೋಟೊವೊಂದನ್ನು ಶೇರ್ ಮಾಡಿದ್ದರು. ಗೋವಾದ ರೆಸಾರ್ಟ್‌ವೊಂದರ ಒಳಗೆ ರಶ್ಮಿಕಾ ಮಂದಣ್ಣ ನಿಂತಿರುವ ಫೋಟೊವನ್ನು ಹಂಚಿಕೊಂಡಿದ್ದರು. ರಶ್ಮಿಕಾ ನಿಂತಿರುವ ಫೋಟೊ ಹಿಂದೆ ಬಾಳೆಗಿಡಗಳು ಹಾಗೂ ಸ್ವಿಮ್ಮಿಂಗ್ ಪೂಲ್ ಇದೆ. ಇದೇ ಬ್ಯಾಕ್‌ಗ್ರೌಂಡ್‌ನಲ್ಲಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಕೂಡ ಫೋಟೊ ಶೇರ್ ಮಾಡಿದ್ದಾರೆ. ಈ ಫೋಟೊ ಶೇರ್ ಆಗುತ್ತಿದ್ದಂತೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.

ವಿಜಯ್-ರಶ್ಮಿಕಾ ಗೋವಾ ಫೋಟೊ ರಿವೀಲ್
ಗೋವಾದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ಹೊಸ ವರ್ಷವನ್ನು ಸ್ವಾಗತ ಮಾಡಿದ್ದರೂ, ಇಬ್ಬರೂ ಒಂದೇ ಫೋಟೊದಲ್ಲಿ ಕಾಣಿಸಿಕೊಂಡಿಲ್ಲ. ಪ್ರತ್ಯೇಕವಾಗಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಆದ್ರೀಗ ವಿಜಯ್ ಸಹೋದರ ಅಚಾನಕ್ ಆಗಿ ಶೇರ್ ಮಾಡಿದ ಒಂದೇ ಒಂದು ಫೋಟೊ ಇಬ್ಬರ ಗುಟ್ಟನ್ನು ರಟ್ಟು ಮಾಡಿದೆ. ಹೀಗಾಗಿ ಇಬ್ಬರ ನಡುವೆ ಏನೋ ನಡೆಯುತ್ತಿದೆ. ಎರಡು ಸಿನಿಮಾಗಳ ಬಳಿಕ ರಶ್ಮಿಕಾ-ವಿಜಯ್ ಸ್ನೇಹಿತರಾಗಿಯೇ ಇದ್ದಾರಾ? ಇಲ್ಲಾ ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದಾರಾ? ಅನ್ನುವ ಅನುಮಾನ ಹುಟ್ಟಿಕೊಂಡಿದೆ.

ಮುಂಬೈನಲ್ಲಿ ರಶ್ಮಿಕಾ-ವಿಜಯ್ ಡಿನ್ನರ್
ವಿಜಯ್ ದೇವರಕೊಂಡ 'ಲೈಗರ್' ಸಿನಿಮಾದ ಶೂಟಿಂಗ್‌ಗಾಗಿ ಮುಂಬೈ ಸೇರಿಕೊಂಡಿದ್ದರು. ಇತ್ತ ರಶ್ಮಿಕಾ ಕೂಡ ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದರಿಂದ ಮಾಯಾನಗರಿಯಲ್ಲಿ ವಾಸವಿದ್ದಾರೆ. ಹೀಗಾಗಿ ಇಬ್ಬರೂ ಈ ಜೋಡಿ ಆಗಾಗ ಜಿಮ್, ಡಿನ್ನರ್ ಅಂತ ಭೇಟಿಯಾಗುತ್ತಿದ್ದರು. ಕೆಲವು ವಾರಗಳ ಹಿಂದಷ್ಟೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಮುಂಬೈನಲ್ಲಿ ಒಟ್ಟಿಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಕ್ಯಾಮರಾಗೆ ಸೆರೆ ಸಿಕ್ಕು ಜಂಟಿಯಾಗಿ ಪೋಸ್ ಕೊಟ್ಟಿದ್ದರೂ, ರಶ್ಮಿಕಾ ಹಾಗೂ ವಿಜಯ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ವಿಜಯ್ ಜೊತೆ ಸಿನಿಮಾ ಮಾಡಲು ರಶ್ಮಿಕಾ ಕಾತರ
'ಗೀತ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಎರಡು ಚಿತ್ರಗಳಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಟಿಸಿದ್ದಾರೆ. ಇಬ್ಬರ ಅಭಿಮಾನಿಗಳು ಮೂರನೇ ಸಿನಿಮಾ ನೋಡಲು ಎದುರು ನೋಡುತ್ತಿದ್ದಾರೆ. ಕಾಮ್ರೇಡ್ ಬಳಿಕ ಈ ಜೋಡಿ ಜೊತೆಯಾಗಿ ನಟಿಸಿರಲಿಲ್ಲ. " ನಮ್ಮ ಮೂರನೇ ಸಿನಿಮಾ ಬಗ್ಗೆ ನೀವು ವಿಜಯ್ ದೇವರಕೊಂಡರನ್ನು ಕೇಳಬೇಕು. ಲೈಗರ್ ಸಿನಿಮಾದಲ್ಲಿ ವಿಜಯ್ ಬ್ಯುಸಿಯಾಗಿದ್ದು, ಆ ಸಿನಿಮಾದ ಬಗ್ಗೆ ಕಾಯುತ್ತಿದ್ದೇನೆ. ಈ ಸಿನಿಮಾದ ಬಗ್ಗೆ ಏನಾಗುತ್ತದೆ ಎಂದು ಎದುರು ನೋಡುತ್ತಿದ್ದೇನೆ. ನನ್ನ ಹಾಗೂ ಅವರ ಸಮಯ ಕೂಡಿ ಬಂದರೆ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಹೇಳುತ್ತೇನೆ." ಎಂದು ರಶ್ಮಿಕಾ ಮಂದಣ್ಣ ಹಿಂದೆಯೇ ಹೇಳಿದ್ದರು.