For Quick Alerts
  ALLOW NOTIFICATIONS  
  For Daily Alerts

  ಐಶೂ, ಶಾರುಖ್ ವಿರುದ್ಧ ಸೇಡು ತೀರಿಸಿಕೊಂಡ ಸಲ್ಲೂ

  |

  ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಏಕ್ ಥಾ ಟೈಗರ್' ಮೂಲಕ ಬಾಲಿವುಡ್ ಸೂಪರ್ ಸ್ಟಾರ್ ಗಳಲ್ಲೇ ಅತಿ ಹೆಚ್ಚು ಮಿಂಚುತ್ತಿರುವ ಸೂಪರ್ ಸ್ಟಾರ್ ಗಳಲಲ್ಲಿ ಒಬ್ಬರಾದ ಸಲ್ಮಾನ್ ಖಾನ್, ತಾವು ಭಾಗವಹಿಸಿದ್ದ ಡಾನ್ಸ್ ರಿಯಾಲಿಟಿ ಶೋ "ಝಲಕ್ ದಿಕ್ಲಾಜಾ- ಸೀಸನ್ 5' ಶೋ ಗೆ ಬರುವುದಕ್ಕೂ ಮೊದಲು ಎರಡು ಷರತ್ತುಗಳನ್ನು ವಿಧಿಸಿದ್ದರು. ಬಹಳಷ್ಟು ಜನರು ಈಗಾಗಲೇ ಅದೇನೆಂದು ಊಹಿಸಿರಬಹುದು.

  ಸಲ್ಲೂ ಬೇಡಿಕೆ ಎಂದಿನಂತೆ ತಮ್ಮ ಮಾಜಿ ಗರ್ಲ್ ಫ್ರೆಂಡ್ ಐಶ್ವರ್ಯಾ ರೈ ಹಾಗೂ ಬದ್ಧ ವೈರಿ ಶಾರುಖ್ ಖಾನ್ ಬಗ್ಗೆಯೇ ಆಗಿದೆ. "ನಾನು ಈ ಶೋದಲ್ಲಿ ಭಾಗವಹಿಸಬೇಕೆಂದರೆ ಯಾವುದೇ ಕಾರಣಕ್ಕೂ ನಟಿ ಐಶ್ವರ್ಯಾ ರೈ ಜೊತೆ ನಾನು ನರ್ತಿಸಿದ ಯಾವುದೇ ಹಾಡನ್ನು ಈ ಕಾರ್ಯಕ್ರಮದ 'ಜೋಡಿ ಡಾನ್ಸ್'ಗಳಿಗೆ ಆಯ್ಕೆ ಮಾಡಬಾರದು" ಎಂಬ ಬೇಡಿಕೆಯನ್ನು ಸಲ್ಲೂ ಮುಂದಿಟ್ಟಿದ್ದಾರೆ. ಅಂದಹಾಗೆ ಈ ಕಾರ್ಯಕ್ರಮವು 'ಜೋಡಿ ಸ್ಪೆಷಲ್' ಕಾನ್ಸೆಪ್ಟ್ ಹೊಂದಿತ್ತು.

  "ನಾನು ಇರುವಷ್ಟೂ ಹೊತ್ತು, ಶಾರುಖ್ ಖಾನ್ ನಟಿಸಿರುವ ಯಾವುದೇ ಚಿತ್ರದ ಹಾಡಿಗೆ ಯಾರೂ ಡಾನ್ಸ್ ಮಾಡಬಾರದು" ಎಂಬ ಇನ್ನೊಂದು ಷರತ್ತನ್ನು ಸಲ್ಮಾನ್ ಖಾನ್ ವಿಧಿಸಿದ್ದಾರೆ. ಆಶ್ಚರ್ಯವೆಂದರೆ ಸಲ್ಲೂ ಮತ್ತು ಕತ್ರಿನಾ ಜೋಡಿ, ಶಾರುಖ್ ಖಾನ್ ಚಿತ್ರ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಹಾಡು ಮುಗಿದ ಮೇಲೆ ವೇದಿಕೆಗೆ ಆಗಮಿಸಿದ್ದಾರೆ. ಆ ಮೂಲಕ ಭೂತ, ಭವಿಷ್ಯ ಎರಡನ್ನೂ ಸಲ್ಲೂ ತಮ್ಮ ತೆಕ್ಕೆಗೆ ತೆಗೆದುಕೊಂಡಾಗಿತ್ತು.

  ಸಲ್ಲೂ ಈ ಮೊದಲಿನ ಇತಿಹಾಸ ಗೊತ್ತಿರುವ ಯಾರಿಗೇ ಆಗಲಿ, ಅವರ ಈ ಬೇಡಿಕೆ ಬಗ್ಗೆ ಆಶ್ಚರ್ಯವಾಗದು. ಐಶ್ವರ್ಯಾ ರೈ ಜೊತೆಗಿನ ಸಲ್ಲೂ ಸರಸ-ಸಲ್ಲಾಪ. ಶಾರುಖ್ ಜೊತೆಗಿನ ಶತ್ರುತ್ವ ಎರಡೂ ಜಗತ್ತಿಗೇ ಗೊತ್ತು! ಹೀಗಿರುವಾಗ ಹೆಚ್ಚಿನದೇನೂ ಸಲ್ಲೂ ಬೇಡಿಲ್ಲ ಎನ್ನಲೇಬೇಕು. ಅಚ್ಚರಿಯೆಂದರೆ, ಸಲ್ಲೂ ಬೇಡಿಕೆಯನ್ನು ಶೋ ಆಯೋಜಕರು ಮರುಮಾತಿಲ್ಲದೇ ಒಪ್ಪಿ ಪಾಲಿಸಿದ್ದಾರೆ. ಅಲ್ಲಿಗೆ ಸಲ್ಲೂ ದಿಲ್ ಖುಷ್! ಸದ್ಯ ಸಲ್ಲೂ ವಿರುದ್ಧ ಮಾತನಾಡುವ ಧೈರ್ಯ ಯಾರಿಗಿದೆ ಹೇಳಿ? (ಏಜೆನ್ಸೀಸ್)

  English summary
  Salman Khan demanded that on Jhalak Dikhlaja, no songs from Aishwarya Rai Bachchan and Shahrukh Khan's films should be featured on the dance reality show.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X