For Quick Alerts
  ALLOW NOTIFICATIONS  
  For Daily Alerts

  'ಊ ಅಂಟಾವಾ ಮಾವ..' ಅಂದಿದ್ದ ಸಮಂತಾ 'ಪುಷ್ಪ 2' ನಲ್ಲೂ ಇರ್ತಾರಾ? ಟಾಲಿವುಡ್‌ನಲ್ಲೇನಿದು ಗುಸು ಗುಸು?

  |

  ಟಾಲಿವುಡ್ ಬ್ಯೂಟಿ ಸಮಂತಾ ವಿಚ್ಛೇದನದ ಬಳಿಕ ಮೊದಲ ಬಾರಿಗೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ಅಳುಕುತ್ತಲೇ ಮೈ ಬುಳುಕುತ್ತಾ ಈ ಬ್ಯೂಟಿ ನೋಡಿ ಅಭಿಮಾನಿಗಳು ಹುಚ್ಚರಾಗೋದೊಂದೇ ಬಾಕಿ. ಅದೆಷ್ಟೋ ಸಿನಿಮಾಗಳಲ್ಲಿ ಸ್ಯಾಮ್ ಕ್ಯೂಟ್ ಆಗಿ ಕಂಡಿದ್ದು ಇದೆ. ಬೋಲ್ಡ್ ಲುಕ್ ಕೊಟ್ಟಿದ್ದೂ ಇದೆ. ಆದರೆ, 'ಪುಷ್ಪ' ಸಿನಿಮಾದಲ್ಲಿ ನಟಿಸಿದ ಐಟಂ ಸಾಂಗ್ ಮಾತ್ರ ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದಿತ್ತು.

  ಡಿವೋರ್ಸ್ ಬಳಿಕ ಸಮಂತಾ ಟ್ರೋಲ್ ಮಾಡುತ್ತಿದ್ದವರಿಗೆ ಸಮಂತಾ ತಿರುಗೇಟು ನೀಡಿದ್ದರು. ಮತ್ತೆ ತನ್ನ ರಾಜ್ಯಭಾರ ಶುರು ಅಂತ ಸಿಗ್ನಲ್ ಕೊಟ್ಟಿದ್ದರು. ಇನ್ನೂ ಸ್ಟೈಲಿಶ್ ಸ್ಟಾರ್ ಆಗಿಯೇ ಇದ್ದ ಅಲ್ಲು ಅರ್ಜುನ್ ಡಿಗ್ಲಾಮರ್ ರೋಲ್‌ ಮುಂದೆ ಸಮಂತಾ ಗ್ಲಾಮರ್ ಲುಕ್ ಕೊಟ್ಟು ಗೆದ್ದುಬಿಟ್ಟಿದ್ದರು.

  ಶೋಭಿತಾ ಧುಲಿಪಾಲ ಜೊತೆಗಿನ ಗಾಸಿಪ್ ಬಗ್ಗೆ ನಾಗಚೈತನ್ಯ ಪ್ರತಿಕ್ರಿಯೆ!ಶೋಭಿತಾ ಧುಲಿಪಾಲ ಜೊತೆಗಿನ ಗಾಸಿಪ್ ಬಗ್ಗೆ ನಾಗಚೈತನ್ಯ ಪ್ರತಿಕ್ರಿಯೆ!

  ಹಾಗೇ ನೋಡಿದರೆ, ಅಲ್ಲು ಅರ್ಜುನ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾಗೆ ಕಿಕ್ ಕೊಟ್ಟಿದ್ದೇ ಸಮಂತಾ ಸಾಂಗ್. ಹಾಗಾಗಿ ಸಮಂತಾ ಕುಣಿದು ಕುಪ್ಪಳಿಸಿದ್ದ 'ಊ ಅಂಟಾವಾ ಮಾವಾ..' ಹಾಡನ್ನು ಚಿತ್ರತಂಡ ಅಷ್ಟೇ ಅಲ್ಲ ಅಭಿಮಾನಿಗಳು ಕೂಡ ಮರೆಯೋಕೆ ಸಾಧ್ಯವೇ ಇಲ್ಲ. ಈ ಕಾರಣಕ್ಕೆ 'ಪುಷ್ಪ 2' ಮತ್ತೆ ಸಮಂತಾ ಕರ್ಕೊಂಡು ಬರೋಕೆ ಪ್ಲ್ಯಾನ್ ನಡೀತಿದ್ಯಂತೆ. ಹೀಗಂತಾ ಟಾಲಿವುಡ್‌ನಲ್ಲೊಂದು ಟಾಕ್.

  ಥಿಯೇಟರ್‌ನಲ್ಲಿ ಸಾಂಗ್‌ಗೆ ಬಿದ್ದಿತ್ತು ಚಪ್ಪಾಳೆ

  ಥಿಯೇಟರ್‌ನಲ್ಲಿ ಸಾಂಗ್‌ಗೆ ಬಿದ್ದಿತ್ತು ಚಪ್ಪಾಳೆ

  ಸಮಂತಾ ಮುಂದಿನ ಕಥೆಯೇನು? ಡಿವೋರ್ಸ್ ಬಳಿಕ ನಟಿಸೋ ಸಿನಿಮಾಗಳು ಓಡುತ್ತಾ? ಇಂತಹ ಪ್ರಶ್ನೆಗೆ ಒಂದೇ ಏಟಿನಲ್ಲಿ ಸಮಂತಾ ಉತ್ತರ ಕೊಟ್ಟಿದ್ದರು. 'ಪುಷ್ಪ' ಬಿಡುಗಡೆಗೂ ಮುನ್ನ ಹುಟ್ಟಾಕಿದ್ದ ಕ್ರೇಜ್, ಸಿನಿಮಾ ರಿಲೀಸ್ ಆದ್ಮೇಲೆ ಮೂರು ಪಟ್ಟು ಹೆಚ್ಚಾಗಿತ್ತು. ಚಿತ್ರಮಂದಿರದಲ್ಲಿ ಹಾಡು ಬರುತ್ತಿದ್ದಂತೆ ರೂಫ್ ಕಿತ್ತೋಗೊ ಹಾಗೇ ಚಪ್ಪಾಳೆ ತಟ್ಟಿದ್ದರು. ಸಮಂತಾ ಅಭಿಮಾನಿಗಳಂತೂ ಒನ್ಸ್ ಮೋರ್ ಅಂತ ಕೂಗು ಹಾಕಿದ್ದರು. ಇಷ್ಟೆಲ್ಲಾ ಕ್ರೇಜ್ ಇರಬೇಕಾದರೆ, ಸುಕುಮಾರ್ ಅಷ್ಟು ಸುಲಭಕ್ಕೆ ಬಿಟ್ಟು ಕೊಡ್ತಾರಾ? ಪಾರ್ಟ್ 2ಗೂ ಸಮಂತಾ ಕರ್ಕೊಂಡು ಬರ್ತಾರೆ ಅಂತ ಟಾಲಿವುಡ್‌ನಲ್ಲಿ ಟಾಕ್.

  ಸಮಂತಾಗೊಂದು ಪಾತ್ರ ಫಿಕ್ಸ್?

  ಸಮಂತಾಗೊಂದು ಪಾತ್ರ ಫಿಕ್ಸ್?

  ಒಂದು ಐಟಂ ಸಾಂಗ್‌ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಸಮಂತಾಗೊಂದು ಪಾತ್ರ ಕೊಡುವುದಕ್ಕೆ ಸುಕುಮಾರ್ ಮುಂದಾಗಿದ್ದಾರಂತೆ. ಇಂತಹದೊಂದು ವದಂತಿ ಟಾಲಿವುಡ್‌ ಅಂಗಳದಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ಇದು ಎಷ್ಟು ನಿಜವೋ? ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ, ತೆಲುಗು ಚಿತ್ರರಂಗದಲ್ಲಿ ಇಂತಹದ್ದೊಂದು ಬಜ್ ಇರೋದಂತೂ ಸತ್ಯ. ಅಂದ್ಹಾಗೆ ಪಾತ್ರವೇನು? ಪ್ರಶ್ನೆ ಮಾಡೋರಿಗೂ ಉತ್ತರ ಸಿಕ್ಕಿದೆ. ಪುಷ್ಪರಾಜ್ ಸ್ನೇಹಿತೆಯಾಗಿ ಸಹಾಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಸಿಕ್ಕಿರೋ ಮಾಹಿತಿ.

  ಶ್ರೀವಲ್ಲಿ ಸಾವಿನ ಬಳಿಕ ಸಮಂತಾ ಎಂಟ್ರಿ

  ಶ್ರೀವಲ್ಲಿ ಸಾವಿನ ಬಳಿಕ ಸಮಂತಾ ಎಂಟ್ರಿ

  ಅಂದ್ಹಾಗೆ ಸುಕುಮಾರ್ ಪಾರ್ಟ್ 2ಗಾಗಿ ಕಥೆಯನ್ನು ಬದಲಾವಣೆ ಮಾಡುತ್ತಿದ್ದಾರೆ ಅನ್ನೋದ ಮಾತು ಕೂಡ ಇದೆ. ಈಗಾಗಲೇ ಕೆಲವು ಸುದ್ದಿಗಳು ಓಡಾಡುತ್ತಿದ್ದು, ಮೊದಲ 20 ನಿಮಿಷಗಳಲ್ಲಿಯೇ ಶ್ರೀವಲ್ಲಿ ಪಾತ್ರ ಸಾವನ್ನಪ್ಪುತ್ತೆ ಎಂದು ಗುಲ್ಲೆದ್ದಿದೆ. ಶ್ರೀವಲ್ಲಿ ಪಾತ್ರ ಕಣ್ಮರೆಯಾದ ಬಳಿಕ ಸಮಂತಾ ಪಾತ್ರ ಎಂಟ್ರಿ ಕೊಡಲಿದೆಯಂತೆ. ರಿವೇಂಜ್‌ ತೆಗೆದುಕೊಳ್ಳಲು ಮುಂದಾಗಿದ್ದ ಪುಷ್ಪರಾಜ್‌ಗೆ ಸಮಂತಾ ಸಾಥ್ ಕೊಡುತ್ತಾರೆ ಅನ್ನೋದು ವದಂತಿ.

  ಸಮಂತಾನೇ ಯಾಕೆ?

  ಸಮಂತಾನೇ ಯಾಕೆ?

  ಊ ಅಂಟಾವಾ.. ಹಾಡಿನ ಬಳಿಕ ಸಮಂತಾ ಕ್ರೇಜ್ ಹೆಚ್ಚಾಗಿದೆ. ಇನ್ನೊಂದು ಕಡೆ ಈಗಾಗಲೇ ಸಮಂತಾ ಬಾಲಿವುಡ್‌ ಆಡಿಯನ್ಸ್‌ಗೂ ಚಿರಪರಿಚಿತ. ಇದು ಮುಂದೆ ಬಾಲಿವುಡ್‌ ಮಾರ್ಕೆಟ್‌ಗೆ ಸಹಾಯ ಆಗಬಹುದು. ಅಲ್ಲದೆ ಸಮಂತಾ ಈಗಾಗಲೇ ಬಾಲಿವುಡ್‌ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇದು ಚಿತ್ರತಂಡಕ್ಕೆ ಪ್ರತ್ಯಕ್ಷವಾಗಿಯೇ ಸಹಾಯ ಆಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ದಕ್ಷಿಣದ ನಾಲ್ಕೂ ಭಾಷೆಗಳಿಗೂ ಸಮಂತಾ ಗೊತ್ತಿದೆ. ಇಷ್ಟೆಲ್ಲಾ ಅಡ್ವಂಟೇಜ್ ಇದ್ಮೇಲೆ ಸುಕುಮಾರ್ ಅಷ್ಟು ಸುಲಭಕ್ಕೆ ಬಿಟ್ಟುಕೊಡಲ್ಲ ಅನ್ನೋದು ಟಾಲಿವುಡ್ ವಾದ. ಆದರೆ, ಚಿತ್ರತಂಡ ಮಾತ್ರ ಇಂತಹದ ಗಾಸಿಪ್‌ಗೆ ಪ್ರತಿಕ್ರಿಯೆ ನೀಡುತ್ತಿಲ್ಲ.

  English summary
  Samantha Expected To Get A Role In Allu Arjun Starrer Pushpa:The Rule, Know More.
  Thursday, August 4, 2022, 9:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X